• March 31, 2022

ನಿಕ್ಕಿ ಗಲ್ರಾನಿ ನಿಶ್ಚಿತಾರ್ಥಕ್ಕೆ ಬಾರದ ಸಂಜನಾ ಗಲ್ರಾನಿ… ಯಾಕೆ ಗೊತ್ತಾ?

ನಿಕ್ಕಿ ಗಲ್ರಾನಿ ನಿಶ್ಚಿತಾರ್ಥಕ್ಕೆ ಬಾರದ ಸಂಜನಾ ಗಲ್ರಾನಿ… ಯಾಕೆ ಗೊತ್ತಾ?

ಕಳೆದ ವಾರ ನಟಿ ನಿಕ್ಕಿ ಗಲ್ರಾನಿ ತಮ್ಮ ಬಹುಕಾಲದ ಗೆಳೆಯ ನಟ ಆದಿ ಪಿನಿಶೆಟ್ಟಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ಸ್ನೇಹಿತರು ಹಾಗೂ ಆಪ್ತರು ಹಾಗೂ ಮನೆಯವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿರುವ ನಿಕ್ಕಿ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಆದರೆ ಈ ಕಾರ್ಯಕ್ರಮದಲ್ಲಿ ನಿಕ್ಕಿ ಅವರ ಸಹೋದರಿ ಸಂಜನಾ ಗಲ್ರಾನಿ ಅವರ ಅನುಪಸ್ಥಿತಿ ಕಾಣುತ್ತಿತ್ತು. ಸಂಜನಾ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳನ್ನು ತಿಳಿಸಿರಲಿಲ್ಲ. ಇದು ಉದ್ಯಮದ ಹಲವರಿಗೆ ಸಹೋದರಿಯರ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬ ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು.

ನಿಕ್ಕಿ ಅವರ ಬದುಕಿನ ಸಂತೋಷದ ಕ್ಷಣಕ್ಕೆ ಸಂಜನಾ ಭಾಗಿಯಾಗಿರಲಿಲ್ಲ. ಆದರೆ ಸಂಜನಾ ಬರದಿರುವುದಕ್ಕೂ ಕಾರಣವಿದೆ. ಸಂಜನಾ ಈಗ ಬೆಂಗಳೂರಿನಲ್ಲಿ ನೆಲೆಸಿದ್ದು ಆಕೆ ಎಂಟು ತಿಂಗಳ ಗರ್ಭಿಣಿ ಹೌದು. ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ಇರುವ ಸಂಜನಾ ತಂಗಿಯ ನಿಶ್ಚಿತಾರ್ಥಕ್ಕೆ ಹಾಜರಿಯಾಗಲಿಲ್ಲ.