• April 6, 2022

ವಿಭಿನ್ನ ರೀತಿಯಲ್ಲಿ ದೇವರಿಗೆ ಕೃತಜ್ಞತೆ ಹೇಳಿದ ಸಂಜನಾ ಗಲ್ರಾನಿ

ವಿಭಿನ್ನ ರೀತಿಯಲ್ಲಿ ದೇವರಿಗೆ ಕೃತಜ್ಞತೆ ಹೇಳಿದ ಸಂಜನಾ ಗಲ್ರಾನಿ

ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ತಮ್ಮ ತಲೆಯನ್ನು ಬೋಳಿಸಿಕೊಂಡಿದ್ದು ಫೋಟೋವನ್ನು ಸೋಶಿಯಲ್ ಮೀಡಿಯಾ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಎಂಟು ತಿಂಗಳ ಗರ್ಭಿಣಿಯಾಗಿರುವ ಸಂಜನಾ ಜೀವನದ ಹೊಸ ಹಂತದಲ್ಲಿದ್ದು ದೇವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಫೋಟೋ ಹಂಚಿಕೊಂಡಿರುವ ಸಂಜನಾ
“ಸೌಂದರ್ಯ ನೋಡುಗರ ದೃಷ್ಟಿಯಲ್ಲಿ ಅಡಗಿದೆ. ಅದಕ್ಕಾಗಿ ನಾನು ನನ್ನ ಕೂದಲನ್ನೆಲ್ಲಾ ತ್ಯಾಗ ಮಾಡಿದ್ದೇನೆ. ತುಂಬಾ ಕಷ್ಟಗಳನ್ನು ಅನುಭವಿಸಿದ ನಂತರ ನಾನು ದೇವರಲ್ಲಿ ಜಾರಿಗೊಳಿಸಿದ ಮನ್ನತ್ ನ್ನು ಪೂರ್ಣಗೊಳಿಸಲು ಕೂದಲನ್ನು ನೀಡಿದ್ದೇನೆ. ಜೀವನವು ಮತ್ತೊಮ್ಮೆ ಸುಂದರವಾಗಿದೆ. ನನ್ನ ಜೀವನದ ಈ ಹಂತಕ್ಕಾಗಿ ದೇವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ಸಾಮಾಜಿಕ ಮಾಧ್ಯಮದ ಕೆಲಸವಾಗಿರಬಹುದು ಅಥವಾ ನನ್ನ ಮಗು ಶೀಘ್ರದಲ್ಲೇ ನನ್ನ ಜೀವನದಲ್ಲಿ ಬರಲಿದೆ ಎಂದು ನಾನು ಕೃತಜ್ಞತೆ ಹೇಳಲು ಬಯಸುತ್ತೇನೆ” ಎಂದಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಸಂಜನಾ ಲಾಕ್ ಡೌನ್ ನಿಂದ ಕಲಿತ ಪಾಠಗಳನ್ನು ಹಂಚಿಕೊಂಡಿದ್ದರು. “ಕಳೆದ ಎರಡು ವರ್ಷಗಳು ನಿಜ ಹಾಗೂ ಭ್ರಮೆಯ ವಿಷಯದಲ್ಲಿ ಪ್ರಬುದ್ಧವಾಗಿದ್ದವು. ಕೋವಿಡ್ ಗೆ ಮೊದಲು ಪ್ರತಿಯೊಂದು ದೊಡ್ಡ ವ್ಯವಹಾರವೇ ಆಗಿತ್ತು. ಜನರನ್ನು ಆಹ್ವಾನಿಸುವ ಮೂಲಕ ಅದ್ದೂರಿಯಾಗಿ ಆಚರಿಸಲಾಗುತ್ತಿತ್ತು. ಆದರೆ ಈಗ ತುಂಬಾ ಬದಲಾಗಿದೆ. ನೀವು ಕಷ್ಟದಲ್ಲಿದ್ದಾಗ ಜನರ ನಿಜರೂಪ ಹೊರಗೆ ಬರುತ್ತಿದೆ” ಎಂದಿದ್ದಾರೆ.

“ನಾನೀಗ ಎಂಟು ತಿಂಗಳ ಗರ್ಭಿಣಿ ಹಾಗೂ ಮಗುವಿನ ಆಗಮನಕ್ಕೆ ಕಾಯುತ್ತಿರುವೆ. ನಾನು ಬದುಕಿನ ಮೌಲ್ಯಗಳನ್ನು ಅರಿತಿದ್ದೇನೆ. ನಾನು ಯಾರು ಎಂಬ ಸ್ಪಷ್ಟ ಚಿತ್ರಣ ನನಗೆ ಈಗ ಇದೆ” ಎಂದಿದ್ದಾರೆ.