- May 24, 2022
ತಾಯ್ತನದ ಹೊಸ ಹಂತಕ್ಕೆ ಉತ್ಸಾಹುಕಳಾಗಿದ್ದೇನೆ – ಸಂಜನಾ ಗಲ್ರಾನಿ


ನಟಿ ಸಂಜನಾ ಗಲ್ರಾನಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
“ನನ್ನ ಮಗು ದೊಡ್ಡದಾಗಿದೆ. ಹೀಗಾಗಿ ನಾರ್ಮಲ್ ಹೆರಿಗೆಗೆ ಹೋಗುವುದು ಅಪಾಯವಾಗಿದೆ ಎಂದು ಹೇಳಿದೆ. ಸಿಸೇರಿಯನ್ ಆಗಿತ್ತು ,ನನ್ನ ಕುಟುಂಬ ಸರಿಯಾದ ದಿನ ಹಾಗೂ ಸಮಯವನ್ನು ಆಯ್ಕೆ ಮಾಡಿದೆ. ಗುರುವಾರ ಮುಂಜಾನೆ ಅವನಿಗೆ ಜನ್ಮ ನೀಡಿದೆ. ತಾಯ್ತನದ ಹೊಸ ಹಂತಕ್ಕೆ ಉತ್ಸುಕಳಾಗಿದ್ದೇನೆ. ಮಗನನ್ನು ಉತ್ತಮವಾಗಿ ತಿಳಿಯಲು ಕಾಯಲು ಸಾಧ್ಯವಿಲ್ಲ” ಎಂದಿದ್ದಾರೆ.


ಸಂಜನಾ ಅವರಿಗೆ ಅವರ ಸ್ನೇಹಿತರ ಹಾಗೂ ಹೈದರಾಬಾದ್ ನ ಗೈನಕಾಲಜಿಸ್ಟ್ ಡಾ. ಶಿಲ್ಪಿ ರೆಡ್ಡಿ ಬೆಂಬಲ ದೊರೆತಿದೆ ಎಂದು ಹೇಳುತ್ತಾರೆ.”ಅವರು ತುಂಬಾ ಬ್ಯುಸಿ ಇದ್ದರೂ ನನ್ನ ಜೀವನದ ದೊಡ್ಡ ದಿನದಂದು ನನ್ನ ಜೊತೆಗೆ ನಿಂತರು. ಆ ದಿನ ಹೈದರಾಬಾದಿಗೆ ತೆರಳುವ ಮುನ್ನ ನನ್ನ ಹೆರಿಗೆಗೆ ನನ್ನ ವೈದ್ಯರಿಗೆ ಸಹಾಯ ಮಾಡಿದರು” ಎಂದಿದ್ದಾರೆ.


ಸಂಜನಾ ಅವರ ಹೆರಿಗೆ ದಿನವೇ ತಂಗಿ ನಿಕ್ಕಿ ಗಲ್ರಾನಿ ನಟ ಆದಿ ಜೊತೆ ಸಪ್ತಪದಿ ತುಳಿದರು. “ಆ ದಿನ ನನ್ನ ಕುಟುಂಬಕ್ಕೆ ವಿಶೇಷವಾದ ದಿನ. ಎರಡು ದೊಡ್ಡ ಘಟನೆಗಳು ನಡೆದವು.ನಾನು ಅಲ್ಲಿರಬೇಕಿತ್ತು. ಆದರೆ ಸಾಧ್ಯವಾಗಿರಲಿಲ್ಲ. ನಿಕ್ಕಿಯ ಮದುವೆ ದಿನಾಂಕ ಮುಹೂರ್ತದ ಆಧಾರದಲ್ಲಿ ಆಯ್ಕೆ ಮಾಡಲಾಗಿತ್ತು.
“ಎಂದಿದ್ದಾರೆ.




