• February 16, 2022

ಕ್ಯೂ ಸಿನಿಮಾಗೆ ಬಂದ್ರು ಅಮ್ಮವ್ರ ಗಂಡ ಚಿತ್ರದ ನಾಯಕಿ ಮಗಳು

ಕ್ಯೂ ಸಿನಿಮಾಗೆ ಬಂದ್ರು ಅಮ್ಮವ್ರ ಗಂಡ ಚಿತ್ರದ ನಾಯಕಿ ಮಗಳು

ಮೈನೇ ಪ್ಯಾರ್ ಕಿಯಾ ಸಿನಿಮಾದ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದ ನಟಿ ಭಾಗ್ಯಶ್ರೀ… ಕನ್ನಡದಲ್ಲಿ ಅಮ್ಮಾವ್ರ ಗಂಡ ಚಿತ್ರದಲ್ಲಿ ನಟಿಸಿ ಕನ್ನಡ ಅಭಿಮಾನಿಗಳ ಮನಸ್ಸನ್ನು ಕದ್ದಿದ್ದರು…ಈಗ ಆ ನಟಿಯ ಮಗಳು ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿದ್ದಾರೆ…

ಹೌದು ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುದೀಂದ್ರ ಅಭಿನಯದ ಸಿನಿಮಾಗೆ ಭಾಗ್ಯಶ್ರೀ ಮಗಳು ನಾಯಕಿಯ ಆಯ್ಕೆ ಆಗಿದ್ದು …ಈ ಮೂಲಕ‌ ಆವಂತಿಕಾ ಅವರನ್ನು ನಾಗಶೇಖರ್ ತಮ್ಮ ಸಿನಿಮಾಗೆ ಕರೆತರುತ್ತಿದ್ದಾರೆ ..ಈಗಾಗಲೇ ಅವಂತಿಕಾ ಅವರು ಮಿಥ್ಯ ಎಂಬ ವೆಬ್ ಸೀರೀಸ್ ನಲ್ಲಿ ಅಭಿನಯ ಮಾಡಿದ್ದು ಸದ್ಯ ಈಗ ಸ್ಯಾಂಡಲ್ ವುಡ್ ನಲ್ಲಿ ಸಿನಿಮಾ ಮೂಲಕ ತಮ್ಮ ಖಾತೆ ತೆರೆಯುತ್ತಿದ್ದಾರೆ…

ಕನ್ನಡ ಮಾತ್ರವಲ್ಲದೆ ತೆಲುಗು ಸಿನಿಮಾರಂಗದಲ್ಲಿಯೂ ಅವಂತಿಕಾ ಅಭಿನಯ ಮಾಡೋದಕ್ಕೆ ಶುರು ಮಾಡಿದ್ದು… ಅದರ ಜೊತೆಗೆ ಕ್ಯೂ ಚಿತ್ರದಲ್ಲಿ ಕೂಡ ಆ್ಯಕ್ಟ್ ಮಾಡಲಿದ್ದಾರೆ…

ಕ್ಯೂ ಸಿನಿಮಾದ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದ್ದ, ಪ್ರೇಮಿಗಳ ದಿನಾಚರಣೆಗಾಗಿ ಸಿನಿಮಾತಂಡ ಚಿತ್ರದ ಫಸ್ಟ್ ಲುಕ್ ರಿವೀಲ್ ಮಾಡಿತ್ತು. ಸಿನಿಮಾಗೆ ನಾಗಶೇಖರ್ ಆಕ್ಷನ್ ಕಟ್ ಹೇಳುತ್ತಿದ್ದು ವಿಜಯ್ ಸಾವನೂರ್ ಮತ್ತು ನಾಗ್ ಶೇಖರ್ ಜಂಟಿಯಾಗಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ… ಸತ್ಯ ಹೆಗ್ಡೆ ಕ್ಯಾಮೆರಾ ವರ್ಕ್ ಅಜನೀಶ್ ಲೋಕನಾಥ್ ಸಂಗೀತ ಸಿನಿಮಾಗಿದೆ ..ಕ್ಯೂ ಸಿನೆಮಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ನಿರ್ಮಾಣ ಆಗುತ್ತಿದೆ