• January 3, 2022

ಹೊಸ ವರ್ಷಕ್ಕೆ ಹೊಸ ರೀತಿ ಶುಭಾಶಯ ಕೋರಿದ ಸ್ಯಾಂಡಲ್ ವುಡ್ ಸ್ಟಾರ್ಸ್

ಹೊಸ ವರ್ಷಕ್ಕೆ ಹೊಸ ರೀತಿ ಶುಭಾಶಯ ಕೋರಿದ ಸ್ಯಾಂಡಲ್ ವುಡ್ ಸ್ಟಾರ್ಸ್

*ವಿಶೇಷವಾಗಿದೆ ರಾಧಿಕಾ ಯಶ್ ವಿಶ್ ಮಾಡಿರುವ ವಿಡಿಯೋ

ಹೊಸ ವರ್ಷ ಆರಂಭವಾಗಿದೆ ಹೊಸವರ್ಷದ ಹೊಸ್ತಿಲಲ್ಲಿರುವ ಪ್ರತಿಯೊಬ್ಬರಿಗೂ ಕನ್ನಡ ಸಿನಿಮಾರಂಗದ ಕಲಾವಿದರು ವಿಭಿನ್ನ ರೀತಿಯಲ್ಲಿ ಶುಭಾಶಯ ಕೋರಿದ್ದಾರೆ …ನಟ ಯಶ್ ಹಾಗೂ ರಾಧಿಕಾ ಪಂಡಿತ್ ಈ ವರ್ಷದ ಹೊಸ ವರ್ಷವನ್ನ ಗೋವಾದಲ್ಲಿ ಆಚರಣೆ ಮಾಡಿದ್ದು ಇಬ್ಬರು ಕೂಡಾ ಒಟ್ಟಿಗೆ ವೀಡಿಯೋ ಮೂಲಕ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ ….

ಪಾರ್ಟಿ ಫೋಟೋ ಜತೆಗೆ ಶುಭಕೋರಿದ ಪ್ರಶಾಂತ್ ನೀಲ್ ಹಾಗೂ ಶ್ರೀಮುರಳಿ

ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಶ್ರೀಮುರಳಿ ವರ್ಷದ ಹೊಸ ವರ್ಷವನ್ನು ಒಟ್ಟಿಗೆ ಸೆಲೆಬ್ರೇಟ್ ಮಾಡಿದ್ದಾರೆ…ತಮ್ಮ ಫ್ಯಾಮಿಲಿ ಹಾಗೂ ಸ್ನೇಹಿತರ ಜತೆಗೆ ಪಾರ್ಟಿ ಮಾಡಿ ಹೊಸ ವರ್ಷವನ್ನು ವೆಲ್ ಕಮ್ ಮಾಡಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಶುಭ ಕೋರಿದ್ದಾರೆ …

ರವಿಚಂದ್ರನ್ ಜೊತೆ ಶ್ವೇತಾ ಚೆಂಗಪ್ಪ ಹೊಸ ವರ್ಷದ ಸಂಭ್ರಮ

ನಟಿ ಹಾಗೂ ನಿರೂಪಕಿ ಶ್ವೇತಾ ಚೆಂಗಪ್ಪ ಹೊಸ ವರ್ಷವನ್ನು ನಟ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ವೆಲ್ ಕಮ್ ಮಾಡಿದ್ದಾರೆ …ಹೊಸವರ್ಷದ ದಿನದಂದು ಶ್ವೇತ ಚಂಗಪ್ಪ ಹಾಗೂ ಅವರ ಪತಿ , ರವಿಚಂದ್ರನ್ ಅವರನ್ನ ಭೇಟಿ ಮಾಡಿ ಶುಭ ಕೋರಿದ್ದಾರೆ ..ರವಿಚಂದ್ರನ್ ಜೊತೆ ಇರುವ ಫೋಟೋವನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಕೂಡ ವಿಶ್ ಮಾಡಿದ್ದಾರೆ …

*ಪ್ರೀತಿಯ ನಿರೀಕ್ಷೆಯಲ್ಲಿ ಎಂದು ಶುಭಕೋರಿದ ರಾಬಿನ್ ವುಡ್ ನಾಯಕ

ಇನ್ನು ರಾಬಿನ್ ವುಡ್ ಸಿಬಿಮಾ ನಾಯಕ ದುಷ್ಯಂತ್ ಸಣ್ಣ ಆಲೋಚನೆಯಿಂದ ಶುರುವಾಗಿ, ಹಾಗೆ ಕನಸಾಗಿ, ಕನಸು ಹುಚ್ಚಾಗಿ, ಹುಚ್ಚು ಕಿಚ್ಚನ್ನು ಹತ್ತಿಸಿ, ಕಿಚ್ಚು ಕ್ರಿಯೆಯತ್ತ ದೂಡಿ ಇಲ್ಲಿಗೆ ತಂದು ನಿಲ್ಲಿಸಿದೆ. ಏಕಾಂಗಿಯಾಗಿ ಪ್ರಾರಂಭವಾದ ಪ್ರಯಾಣದಲ್ಲಿ ಹಸನ್ಮುಖದ ಸ್ವಾಗತಗಳು, ಚಪ್ಪಾಳೆ – ಶಿಳ್ಳೆ – ಕೇಕೆಗಳು, ನಂಬಿಕೆಯ ಹೊತ್ತ ಭುಜಗಳಿಗೆ ಧೈರ್ಯ ತುಂಬಿವೆ. 2022ಕ್ಕೆ ಮತ್ತಷ್ಟು ಪ್ರೀತಿಯ ನಿರೀಕ್ಷೆಯಲ್ಲಿ…ಎಂದು ಪಾಸಿಟಿವ್ ಮಾತುಗಳ ಮೂಲಕ ಅಭಿಮಾನಿಗಳಿಗೆ ಶುಭಕೋರಿದ್ದಾರೆ…