• May 8, 2022

ವಿಚ್ಛೇದನದ ಬೆನ್ನಲ್ಲೇ ಗರ್ಭಿಣಿಯಾದ ಸುದ್ದಿ ನೀಡಿದ ಸಮಂತಾ

ವಿಚ್ಛೇದನದ ಬೆನ್ನಲ್ಲೇ ಗರ್ಭಿಣಿಯಾದ ಸುದ್ದಿ ನೀಡಿದ ಸಮಂತಾ

ಸಮಂತಾ ರುತು ಪ್ರಭು ನಟನೆಯ ಯಶೋಧಾ ಚಿತ್ರದ ಮೊದಲ ಝಲಕ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಸಮಂತಾ ಯಶೋಧಾ ಎಂಬ ಗರ್ಭಿಣಿಯ ಪಾತ್ರ ನಿರ್ವಹಿಸುತ್ತಿದ್ದಾರೆ. ಬಿಡುಗಡೆಯಾಗಿರುವ ಈ ವಿಡಿಯೋ ತುಣುಕು ಉತ್ತಮ ಹಿನ್ನೆಲೆ ಸಂಗೀತ ಹೊಂದಿದ್ದು ವೀಕ್ಷಕರಿಗೆ ಕುತೂಹಲಕಾರಿ ವಿಶುವಲ್ ಹೊಂದಿದೆ. ಮಹಿಳಾ ಪ್ರಧಾನ ಚಿತ್ರದಂತೆ ಕಾಣುತ್ತಿರುವ ಈ ಚಿತ್ರ ಸೈನ್ಸ್ ಫಿಕ್ಷನ್ ಥ್ರಿಲ್ಲರ್ ಚಿತ್ರವಾಗಿದೆ.

ಈ ಚಿತ್ರವನ್ನು ಹರೀಶ್ ಶಂಕರ್ ಹಾಗೂ ಹರೀಶ್ ನರನ್ ಬರೆದು ನಿರ್ದೇಶಿಸಿದ್ದಾರೆ. ತಮಿಳು ನಟಿ ವರಲಕ್ಷ್ಮಿ ಶರತ್ ಕುಮಾರ್ ಹಾಗೂ ಮಲೆಯಾಳಂ ನಟ ಉನ್ನಿ ಮುಕುಂದನ್ ಮಧುಬಾಲಾ ಹಾಗೂ ಗೌತಮ್ ಎಂಬ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರ ತೆಲುಗಿನಲ್ಲಿ ರಿಲೀಸ್ ಆಗಲಿದ್ದು ತಮಿಳು, ಹಿಂದಿ, ಮಲೆಯಾಳಂ ಹಾಗೂ ಕನ್ನಡ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾವಾಗಿ ಮೂಡಿ ಬರಲಿದೆ. ಶ್ರೀದೇವಿ ಮೂವೀಸ್ ಅಡಿಯಲ್ಲಿ ಸಿವಲೆಂಕ ಕೃಷ್ಣ ಪ್ರಸಾದ್ ನಿರ್ಮಿಸುತ್ತಿದ್ದಾರೆ. ಮಣಿಶರ್ಮಾ ಸಂಗೀತ ನಿರ್ದೇಶನ ಮಾಡಲಿದ್ದು ,ಎಂ ಸುಕುಮಾರ್ ಅವರ ಸಿನಿಮಾಟೋಗ್ರಫಿ ಇರಲಿದೆ. ಮಾರ್ತಾಂಡ ಕೆ ವೆಂಕಟೇಶ್ ಅವರ ಎಡಿಟಿಂಗ್ ಇರಲಿದೆ.

ಸಮಂತಾ ಸದ್ಯ “ಕಾಥುವಕ್ಕುಲ್ಲ ರೆಂಡು ಕಾದಲ್ ” ಚಿತ್ರದ ಯಶಸ್ಸಿನಲ್ಲಿದ್ದಾರೆ. ಇದಲ್ಲದೇ ಗುಣಶೇಖರ್ ನಿರ್ದೇಶನದ ಶಾಕುಂತಲಂ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶಿವ ನಿರ್ವಾಣ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದಲ್ಲಿ ವಿಜಯ್ ದೇವರಕೊಂಡ ಜೊತೆಗೆ ನಟಿಸುತ್ತಿದ್ದಾರೆ.