• May 17, 2022

ವಿಕ್ರಾಂತ್ ರೋಣನಿಗೆ ಸಾಥ್ ನೀಡಿದ ಬಾಲಿವುಡ್ ಸ್ಟಾರ್ ನಟ

ವಿಕ್ರಾಂತ್ ರೋಣನಿಗೆ ಸಾಥ್ ನೀಡಿದ ಬಾಲಿವುಡ್ ಸ್ಟಾರ್ ನಟ

ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ವಿಕ್ರಾಂತ ರೋಣ ಜುಲೈ 28ರಂದು ವಿವಿಧ ಭಾಷೆಗಳಲ್ಲಿ ತೆರೆಗೆ ಬರಲಿದೆ. 3ಡಿಯಲ್ಲಿ ರಿಲೀಸ್ ಆಗಲಿರುವ ವಿಕ್ರಾಂತ ರೋಣ ಚಿತ್ರವನ್ನು ಹಿಂದಿಯಲ್ಲಿ ಸಲ್ಮಾನ್ ಖಾನ್ ಪ್ರಸ್ತುತ ಪಡಿಸಲಿದ್ದಾರೆ. ಅನೂಪ್ ಭಂಡಾರಿ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ.

ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಸುದೀಪ್ ಶೇರ್ ಮಾಡಿದ್ದಾರೆ.”ವಿಕ್ರಾಂತ ರೋಣ ಎಸ್ ಕೆ ಎಫ್ ಜೊತೆ ಸಹಯೋಗ ಮಾಡಲು ಹೆಮ್ಮೆ ಪಡುತ್ತದೆ. ಭಾರತದ ದೊಡ್ಡ ನಟ ಸಲ್ಮಾನ್ ಖಾನ್ ವಿಕ್ರಾಂತ ರೋಣ ಸಿನಿಮಾವನ್ನು ಹಿಂದಿಯಲ್ಲಿ ಪ್ರಸ್ತುತ ಪಡಿಸಲಿದ್ದಾರೆ. ಭಾರತದ ಸಿನಿಮಾರಂಗದಲ್ಲಿ ದೊಡ್ಡ 3ಡಿ ಅನುಭವ ” ಎಂದು ಬರೆದುಕೊಂಡಿದ್ದಾರೆ.

ಈ ವಿಚಾರ ಕಿಚ್ಚ ಅವರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಈಗಾಗಲೇ ದೊಡ್ಡ ನಿರೀಕ್ಷೆ ಮೂಡಿಸಿರುವ ವಿಕ್ರಾಂತ ರೋಣ ಕೆಜಿಎಫ್ 2 ಚಿತ್ರದ ನಂತರ ರಿಲೀಸ್ ಆಗಲಿರುವ ದೊಡ್ಡ ಚಿತ್ರ ಎಂದು ಹೇಳಲಾಗುತ್ತಿದೆ. ನೀತಾ ಅಶೋಕ್ , ನಿರೂಪ್ ಭಂಡಾರಿ ,ಸಿದ್ದು ಮೂಲಿಮನಿ ಮುಂತಾದ ಕಲಾವಿದರು ನಟಿಸಿದ್ದು ಜಾಕ್ವೆಲಿನ್ ಫರ್ನಾಂಡಿಸ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅರೇಬಿಕ್ ,ಜರ್ಮನ್ ,ರಷ್ಯನ್ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಚಿತ್ರ ರಿಲೀಸ್ ಆಗಲಿದೆ.