- July 10, 2022
ಕನ್ನಡ ಸಿನಿಮಾ ಮಾಡುವುದರ ಬಗ್ಗೆ ಸಾಯಿ ಪಲ್ಲವಿ ಮಾತು.


ದಕ್ಷಿಣ ಭಾರತದ ಸಿನಿ ಅಭಿಮಾನಿಗಳ ನೆಚ್ಚಿನ ನಟಿ, ‘ಪ್ರೇಮಂ’ ಬೆಡಗಿ ಸಾಯಿ ಪಲ್ಲವಿ ಸದ್ಯ ತಮ್ಮ ಮುಂದಿನ ಸಿನಿಮಾ ‘ಗಾರ್ಗಿ’ಯ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಮೂರು ಭಾಷೆಗಳಲ್ಲಿ ತಯಾರಾಗಿರುವ ಈ ‘ಗಾರ್ಗಿ’ ಇದೇ ಜುಲೈ 15ರಂದು ಎಲ್ಲೆಡೆ ತೆರೆಕಾಣುತ್ತಿದೆ. ಗೌತಮ್ ರಾಮಚಂದ್ರನ್ ನಿರ್ದೇಶನದ ಈ ಸಿನಿಮಾ ಮಿಡಲ್ ಕ್ಲಾಸ್ ಮಹಿಳೆಯೊಬ್ಬಳು ನ್ಯಾಯಕ್ಕಾಗಿ ಹೋರಾಡೋ ಕಥೆಯನ್ನ ತೆರೆಮೇಲೆ ತರಲಿದೆ. ಈ ನಡುವೆ ಸಾಯಿ ಪಲ್ಲವಿ ಕನ್ನಡದ ಖಾಸಗಿ ವಾಹಿನಿಯೊಂದಕ್ಕೆ ಕೊಟ್ಟ ಸಂದರ್ಶನದಲ್ಲಿ ಕನ್ನಡ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ.






ಕನ್ನಡ ಸಿನಿಮಾ ಮಾಡುತ್ತೀರಾ? ಎಂದು ನಿರೂಪಕರು ಕೇಳಿದ ಪ್ರಶ್ನೆಗೆ, ನನಗೆ ಕಥೆ, ಹಾಗು ಸಿನಿಮಾದ ಸ್ಕ್ರಿಪ್ಟ್ ಮುಖ್ಯ ಭಾಷೆಯಲ್ಲ. ಕಥೆ ಚೆನ್ನಾಗಿದ್ದರೆ ನಾನು ಒಪ್ಪಿಕೊಂಡೇ ಒಪ್ಪಿಕೊಳ್ಳುತ್ತೇನೆ ಎಂದಿದ್ದಾರೆ. ಅಷ್ಟೇ ಅಲ್ಲದೇ, ” ನಾನು ಶಂಕರ್ ನಾಗ್ ಅವರ ಅಭಿಮಾನಿ. ಅವರ ನಿರ್ದೇಶನ ನನಗೆ ತುಂಬಾ ಇಷ್ಟ. ಒಂದು ವೇಳೆ ಅವರು ಬದುಕಿದ್ದರೆ ಅವರ ಬಳಿ ನಾನೇ ಹೋಗಿ ಸಿನಿಮಾ ಮಾಡುವಂತೆ ಕೇಳಿಕೊಳ್ಳುತ್ತಿದ್ದೇನೇನೋ. ಈಗಿನ ಕನ್ನಡ ಕಲಾವಿದರಲ್ಲಿ ನನಗೆ ರಕ್ಷಿತ್ ಶೆಟ್ಟಿ ಬಗ್ಗೆ ಗೊತ್ತು. ನಾನು ಲೂಸಿಯ, ಯು ಟರ್ನ್, ಗರುಡ ಗಮನ ವೃಷಭ ವಾಹನ ಮುಂತಾದ ಸಿನಿಮಾಗಳನ್ನು ನೋಡಿ ಇಷ್ಟಟ್ಟಿದ್ದೇನೆ” ಎಂದು ಹೇಳಿದ್ದಾರೆ.






