- April 21, 2022
ಗಿಚ್ಚಿ ಗಿಲಿಗಿಲಿ ವೇದಿಕೆಯಲ್ಲಿ ಸಾಧು ಕೋಕಿಲ


ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಸ ರಿಯಾಲಿಟಿ ಶೋ ಗಿಚ್ಚಿ ಗಿಲಿಗಿಲಿ ವೀಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತಿದೆ. ಮುಂದಿನ ಸಂಚಿಕೆಗಳಲ್ಲಿ ಇನ್ನಷ್ಟು ಮನರಂಜನೆ ನೀಡಲು ತಯಾರಾಗಿರುವ ಶೋ ವಿಶೇಷ ಅತಿಥಿಯನ್ನು ಸ್ವಾಗತಿಸಲು ಸಜ್ಜಾಗಿದೆ. ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ ವಿಶೇಷ ಅತಿಥಿಯಾಗಿ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ.




ಈಗಾಗಲೇ ಮುಂದಿನ ಸಂಚಿಕೆಗಳ ಪ್ರೊಮೋಗಳನ್ನು ವಾಹಿನಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದೆ. ಈ ಪ್ರೊಮೋದಲ್ಲಿ ಸಾಧು ಕೋಕಿಲ ಸ್ಪರ್ಧಿಗಳೊಂದಿಗೆ ಮಾತನಾಡಿದ್ದಾರೆ. ನಿವೇದಿತಾ ಗೌಡ ಅವರಿಗೆ ಡೈಲಾಗ್ ಡೆಲಿವರಿಯನ್ನು ಕಲಿಸುತ್ತಿದ್ದಾರೆ. ಇದಲ್ಲದೇ ಪುಟಾಣಿ ವಂಶಿಕಾ ಪರಮ್ ಸುಂದರಿ ಹಾಡಿಗೆ ಅವಳ ಸಿಗ್ನೇಚರ್ ಸ್ಟೆಪ್ ಅನ್ನು ಸಾಧು ಕೋಕಿಲ ಅವರಿಗೆ ಹೇಳಿಕೊಡುತ್ತಿದ್ದಾಳೆ.


ಕಾಮಿಡಿ ಶೋ ಗಿಚ್ಚಿ ಗಿಲಿಗಿಲಿ ಕಲಾವಿದರೊಂದಿಗೆ ಸ್ಪೋರ್ಟ್ಸ್ , ಪತ್ರಿಕೋದ್ಯಮ, ಸೋಶಿಯಲ್ ಮೀಡಿಯಾ ಹಾಗೂ ಐಟಿ ಕ್ಷೇತ್ರದಿಂದ ಬಂದ ಹಲವು ವ್ಯಕ್ತಿಗಳೊಂದಿಗೆ ಸೇರಿ ವೇದಿಕೆಯಲ್ಲಿ ನಟಿಸುತ್ತಾರೆ. ಎನ್. ಸಿ ಅಯ್ಯಪ್ಪ , ನಿವೇದಿತಾ ಗೌಡ ,ದಿವ್ಯಾ ವಸಂತ, ಜೋಗಿ ಸುನೀತಾ ,ಅನನ್ಯಾ ಅಮರ್ ಮುಂತಾದವರು ಮಜಾ ಭಾರತದ 10 ಸ್ಪರ್ಧಿಗಳೊಂದಿಗೆ ಭಾಗವಹಿಸುತ್ತಾರೆ.


ಸೃಜನ್ ಲೋಕೇಶ್, ಶ್ರುತಿ ತೀರ್ಪುಗಾರರಾಗಿದ್ದು ಮಂಜು ಪಾವಗಡ ಹಾಗೂ ರೀನಾ ಡಿಸೋಜ ನಿರೂಪಕರಾಗಿ ದ್ದಾರೆ.


