- March 8, 2022
ಬೆಂಗಳೂರಿನಲ್ಲೂ ನಡೆಯಲಿದೆ RRR ಮಹಾನ್ ಹಬ್ಬ


ಭಾರತದಾದ್ಯಂತ ಬಹುನಿರೀಕ್ಷೆ ಹುಟ್ಟಿಸಿರೋ ಹಲವು ದಕ್ಷಿಣ ಭಾರತದ ಸಿನಿಮಾಗಳಲ್ಲಿನ ದೊಡ್ಡ ಹೆಸರುಗಳಲ್ಲೊಂದು “RRR”. ಬಾಹುಬಲಿಯ ಜೋಡಿಸಿನೆಮಾಗಳಿಂದ ತಮ್ಮ ಮೇಲೆ ತಮ್ಮ ಸಿನಿಮಾಗಳ ಮೇಲೆ ಅಪೂರ್ವ ಆಸೆಗಳನ್ನ ಪ್ರೇಕ್ಷಕರಲ್ಲಿ ಹುಟ್ಟಿಸಿದ ಶಕ್ತಿ ನಿರ್ದೇಶಕರಾದ ರಾಜಮೌಳಿ ಅವರದ್ದು. ಅವರ ಮುಂದಿನ ಚಿತ್ರ RRR ಇನ್ನೇನು ಬೆರಳೆಣಿಕೆಯಷ್ಟು ದಿನಗಳಲ್ಲಿ ತೆರೆಮೇಲೆ ರಾರಾಜಿಸಲಿದೆ. ನಿರೀಕ್ಷೆಗಳ ರಾಯಭಾರಿ ರಾಜಮೌಳಿಯವರ ಚಿತ್ರಕ್ಕೆ ಭಾಷೆಯ ಗಡಿ ಇಲ್ಲದೆ ದೇಶ-ವಿದೇಶಗಳ ಎಲ್ಲ ಭಾಗದ ಜನರೂ ಕಾತುರದಿಂದ ಕಾಯುತ್ತಿದ್ದಾರೆ.




ರಾಮಚರಣ್,ಜೂನಿಯರ್ ಎನ್ ಟಿ ಆರ್, ಅಜಯ್ ದೇವಗನ್, ಆಲಿಯಾ ಭಟ್ ಮಾತ್ರವಲ್ಲದೆ ಶ್ರೀಯ ಶರಣ್ ಮೊದಲಾಗಿ ಹಲವಾರು ಗಣ್ಯರ ತಾರಾಗಣ ಹೊಂದಿರೋ ಈ ಚಿತ್ರ ಇದೆ ಮಾರ್ಚ್ 25ರಂದು ಸಿನಿಮಂದಿರಗಳನ್ನ ಪ್ರವೇಶಿಸಲಿದೆ. ಈಗಾಗಲೇ ಪ್ರಚಾರ ಕಾರ್ಯವನ್ನ ಭರದಿಂದ ನಡೆಸುತ್ತಿರೋ ಚಿತ್ರತಂಡ, ಎಲ್ಲ ಭಾಷೆಯ ಎಲ್ಲ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನದಲ್ಲಿದೆ. ಅದೇ ನಿಟ್ಟಿನಲ್ಲಿ ಇದೇ ಬರುವ ಮಾರ್ಚ್ 20ರಂದು ಬೆಂಗಳೂರಿನಲ್ಲಿ ಬಿಡುಗಡೆ-ಪೂರ್ವದ ಸಮಾರಂಭವೊಂದು ನಡೆಯಲಿದೆ. ಸಿನಿಮಾ ಬಿಡುಗಡೆಗೆ ಕೇವಲ ಐದು ದಿನಗಳ ಮುನ್ನ ನಡೆಯಲಿರೋ ಈ ಕಾರ್ಯಕ್ರಮವನ್ನ ಬಹಳ ವಿಜೃಂಭಣೆಯಿಂದ ಜನರ ಮುಂದಿಡಲಿದೆ ಚಿತ್ರತಂಡ. ಈ ಕಾರ್ಯಕ್ರಮದಿಂದ ಈಗಾಗಲೇ ಮುಗಿಲಿನೆತ್ತರಕ್ಕೆ ಸಮೀಪದಲ್ಲಿರೋ ಚಿತ್ರದ ಬಗೆಗಿನ ನಿರೀಕ್ಷೆಗಳು ಮುಗಿಲುಮುಟ್ಟುವ ಎಲ್ಲ ಸಾಧ್ಯತೆಗಳಿವೆ.








