• January 1, 2022

ಥ್ರಿಬಲ್ ಆರ್ ಸಿನಿಮಾಗೆ ಕಾಡ್ತಿದೆ ಕೊರೋನಾ !

ಥ್ರಿಬಲ್ ಆರ್ ಸಿನಿಮಾಗೆ ಕಾಡ್ತಿದೆ ಕೊರೋನಾ !

ರಾಮ್ ಚರಣ್ ಹಾಗೂ ಜೂನಿಯರ್ ಎನ್ ಟಿ ಆರ್ ಅಭಿನಯದ ತ್ರಿಬಲ್ ಆರ್ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ.. ಸಿನಿಮಾ ಟೀಸರ್ ಹಾಗೂ ಹಾಡುಗಳಿಂದ ಹಲ್ ಚಲ್ ಎಬ್ಬಿಸಿರುವ ತ್ರಿಬಲ್ ಆರ್ ಸಿನಿಮಾ ಇದೇ ಜನವರಿ
7ನೇ ತಾರೀಖಿನಂದು ವಿಶ್ವಾದ್ಯಂತ ರಿಲೀಸ್ ಮಾಡಲು ಡೇಟ್ ಫಿಕ್ಸ್ ಮಾಡಿತ್ತು ಚಿತ್ರತಂಡ.

ಆದರೆ ದೇಶದ ನಾನಾ ರಾಜ್ಯಾಗಳಲ್ಲಿ ಕೋವಿಡ್ ಕೇಸಸ್ ಹೆಚ್ಚಾಗುತ್ತಿರುವ ಕಾರಣ ರಿಲೀಸ್ ಡೇಟ್ ಮುಂದುಡಿಕೆ ಮಾಡಲು ಸಿನಿಮಾ ತಂಡ ಪ್ಲಾನ್ ಮಾಡಿದಂತಿದೆ …ಬಿಡುಗಡೆಗೂ ಮುನ್ನ ಆರ್ ಆರ್ ಆರ್ ತಂಡ ಬೆಂಗಳೂರಿನ ಪ್ರೀ ರಿಲೀಸ್ ಇವೆಂಟ್ ನಲ್ಲಿ ಭಾಗಿಯಾಗಬೇಕಿತ್ತು
.. ಆದರೆ ಈಗಾಗಲೇ ಚಿತ್ರತಂಡ ಈ ಪ್ರೀ ರಿಲೀಸ್ ಈವೆಂಟನ್ನು ಮುಂದೂಡಿದೆ …

ಹಾಗಾಗಿ ತ್ರಿಬಲ್ ಸಿನಿಮಾ ಬಿಡುಗಡೆ ದಿನಾಂಕ ಮುಂದೆ ಆಗುವುದು ಬಹುತೇಕ ಖಚಿತವಾಗಿದೆ.. ಒಟ್ಟಾರೆ ತ್ರಿಬಲ್ ಸಿನಿಮಾ ಆರಂಭದಿಂದಲೂ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಲೇ ಬಂದಿದೆ ಚಿತ್ರೀಕರಣದ ಸಮಯದಲ್ಲಿ ಕೋವಿಡ್ ಹೆಚ್ಚಾದ ಕಾರಣ ತಿಂಗಳುಗಟ್ಟಲೆ ಚಿತ್ರೀಕರಣಕ್ಕೆ ಬ್ರೇಕ್ ಕೊಡಲಾಗಿತ್ತು ಈಗ ಬಿಡುಗಡೆ ಸಮಯದಲ್ಲಿಯೂ ಸಮಸ್ಯೆ ಎದುರಾಗಿದೆ…