• April 12, 2022

ಬಾಲಿವುಡ್ ಗೇಕೆ ಕಾಲಿಡಬಾರದು ಎಂಬ ಪ್ರಶ್ನೆಗೆ ರಾಕಿ ಭಾಯ್ ನೀಡಿದ ಉತ್ತರ ಇದೇ ನೋಡಿ

ಬಾಲಿವುಡ್ ಗೇಕೆ ಕಾಲಿಡಬಾರದು ಎಂಬ ಪ್ರಶ್ನೆಗೆ ರಾಕಿ ಭಾಯ್ ನೀಡಿದ ಉತ್ತರ ಇದೇ ನೋಡಿ

ನಟ ಯಶ್ ಈಗ ಕೇವಲ ಕನ್ನಡದ ನಟರಲ್ಲ. ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಯಶ್ ಈಗ ಕೆಜಿಎಫ್ 2 ಸಿನಿಮಾದ ಮೂಲಕ ವಿಶ್ವದಾದ್ಯಂತ ಮೋಡಿ ಮಾಡಲು ಹೊರಟಿದ್ದಾರೆ.

ಕೆಜಿಎಫ್ 2 ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಯಶ್ ಹಲವು ಸಂದರ್ಶನ ಹಾಗೂ ಸುದ್ದಿಗೋಷ್ಠಿಗಳಲ್ಲಿ ಭಾಗವಹಿಸುತ್ತಿದ್ದಾರೆ. ಮುಂಬೈ , ದೆಹಲಿಗಳಲ್ಲಿ ಹಲವು ಸಂದರ್ಶನಗಳಲ್ಲಿ ಯಶ್ ಅವರಿಗೆ ನೀವ್ಯಾಕೆ ಬಾಲಿವುಡ್ ಗೆ ಪಾದಾರ್ಪಣೆ ಮಾಡಬಾರದು ಎಂಬ ಪ್ರಶ್ನೆಗಳನ್ನು ಮೀಡಿಯಾದವರು ಕೇಳುತ್ತಿದ್ದಾರೆ.

ಈ ರೀತಿಯ ಪ್ರಶ್ನೆಗಳಿಗೆ ಉತ್ತರಿಸಿರುವ ಯಶ್ “ಬೇರೆ ಯಾವುದೋ ಚಿತ್ರರಂಗಕ್ಕೆ ಹೋಗಿ ಅಲ್ಲಿ ಚಿತ್ರಗಳನ್ನು ಮಾಡುವುದೇ ಸಾಧನೆ ಎಂದುಕೊಂಡಿಲ್ಲ. ನಾವು ಎಲ್ಲಿಯೇ ಇದ್ದರೂ ಎಷ್ಟು ಉತ್ತಮವಾದ ಸಿನಿಮಾ ಮಾಡುತ್ತೇವೆ ಎಂಬುದೇ ನನ್ನ ಯೋಚನೆ. ಈ ಡಿಜಿಟಲ್ ಯುಗದಲ್ಲಿ ನೀವು ಎಲ್ಲಿಯೇ ಸಿನಿಮಾ ಮಾಡಿದರೂ ವಿಶ್ವದ ಮೂಲೆಗಳಿಗೆ ತಲುಪಿಸಬಹುದಾಗಿದೆ. ಓಟಿಟಿ ಮೂಲಕ ನಮ್ಮ ಪ್ರೇಕ್ಷಕರು ಕೊರಿಯ ಭಾಷೆಯ ಕಂಟೆಂಟ್ ಗಳನ್ನು ನೋಡುತ್ತಾರೆ. ಹೀಗಿದ್ದಾಗ ನನ್ನ ಭಾಷೆ, ನನ್ನ ಚಿತ್ರರಂಗ ಎಂದು ಯೋಚಿಸಿ ಕುಳಿತುಕೊಳ್ಳುವಂತಿಲ್ಲ. ನೀವು ಎಲ್ಲಿಯೇ ಇದ್ದರೂ ಉತ್ತಮ ಸಿನಿಮಾದ ಮೂಲಕ ವಿಶ್ವಕ್ಕೆ ತಲುಪಿಸಬಹುದು. ಯಾವ ಚಿತ್ರರಂಗ ಆದರೇನು? ನಾನು ಇಲ್ಲಿಗೆ ಬಂದಿರುವುದು ಅಭಿಮಾನಿಗಳನ್ನು ಗಳಿಸಿಕೊಳ್ಳಲು. ನಾವು ಒಳ್ಳೆಯ ಕೆಲಸ ಮಾಡಿದ್ದೇವೆ ಎಂದು ಜನರಿಗೆ ತೋರಿಸಲು ಬಂದಿದ್ದೇವೆ” ಎಂದು ಉತ್ತರ ಕೊಟ್ಟಿದ್ದಾರೆ.

ಇದರ ಜೊತೆಗೆ “ಕೆಜಿಎಫ್ 2 ಜೊತೆ ಸೇರಿರುವ ನಟ ನಟಿಯರಿಗೆ ಈ ವಿಷಯ ಅರ್ಥ ಆಗಿದೆ. ಒಳ್ಳೆಯದಾಗುತ್ತಿದೆ ಎಂದಾಗ ನಾವು ಅದರೊಂದಿಗೆ ಇರಬೇಕು ಎನ್ನುವುದು ಅರ್ಥ ಆಗಿದೆ. ಕೆಜಿಎಫ್ 2 ನಲ್ಲಿ ನಟಿಸಿರುವ ಪರಭಾಷಾ ಕಲಾವಿದರಿಗೆ ಅಗಾಧ ಅನುಭವ ಹಾಗೂ ಪರಿಣತಿ ಇದೆ. ಅದನ್ನು ನಾವು ಸಿನಿಮಾದಲ್ಲಿ ಬಳಸಿಕೊಳ್ಳುತ್ತಿದ್ದೇವೆ” ಎಂದಿದ್ದಾರೆ.