• March 3, 2022

ಅಂದು ಶಿವಣ್ಣನಿಗೆ ಆದ ಅನ್ಯಾಯವೇ ಇಂದು ರಿಷಬ್ ಶೆಟ್ಟಿಗೆ ಆಗ್ತಿದೆ….

ಅಂದು ಶಿವಣ್ಣನಿಗೆ ಆದ ಅನ್ಯಾಯವೇ ಇಂದು ರಿಷಬ್ ಶೆಟ್ಟಿಗೆ ಆಗ್ತಿದೆ….

ಕನ್ನಡ ಸಿನಿಮಾರಂಗ ಒಂದು ಕುಟುಂಬದಂತೆ ಕೆಲಸ ಮಾಡುತ್ತಿದ್ದರೂ ಕೂಡ ಅಲ್ಲಿಯೂ ಭಿನ್ನಾಭಿಪ್ರಾಯಗಳು ಮೂಡುತ್ತಲೇ ಇರುತ್ತವೆ… ಈಗಾಗಲೇ ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ನಿರ್ದೇಶಕ ಎಂದು ಗುರುತಿಸಿಕೊಂಡಿರುವ ರಿಷಬ್ ಶೆಟ್ಟಿ ನಿರ್ಮಾಣದ ಪೆದ್ರೊ ಸಿನಿಮಾದ ಟ್ರೇಸರ್ ಇತ್ತೀಚಿಗಷ್ಟೆ ಬಿಡುಗಡೆಯಾಗಿದೆ …

ಚಿತ್ರದ ಟ್ರೇಲರ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ಚಿತ್ರತಂಡ ಕೂಡ ಇದ್ರಿಂದ ಖುಷಿಯಾಗಿದೆ… ಅದಷ್ಟೇ ಅಲ್ಲದೆ ಈಗಾಗಲೇ ಸಾಕಷ್ಟು ಚಿತ್ರೋತ್ಸವದಲ್ಲಿ ಪೆದ್ರೊ ಸಿನಿಮಾ ಪ್ರದರ್ಶನಗೊಂಡು ಪ್ರಶಸ್ತಿಯನ್ನು ಪಡೆಯುವುದರ ಜತೆಗೆ ವಿಮರ್ಶಕರಿಂದ ಪ್ರಶಂಸೆ ಪಡೆದಿದೆ…. ಆದರೆ ವಿಪರ್ಯಾಸ ಎಂದರೆ ಇಂದಿನಿಂದ ನಡೆಯುತ್ತಿರುವ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪೆದ್ರೋ ಸಿನೆಮಾದ ಪ್ರದರ್ಶನಕ್ಕೆ ಅವಕಾಶ ಸಿಕ್ಕಿಲ್ಲ ಇದರಿಂದ ಬೇಸರಗೊಂಡಿರುವ ಚಿತ್ರತಂಡ ಪತ್ರದ ಮುಖೇನ ತಮ್ಮ ಅಸಮಾಧಾನವನ್ನು ಹೊರಹಾಕಿದೆ…

ರಿಷಬ್ ಶೆಟ್ಟಿ ಫಿಲ್ಸ್ಮ್ ಸಂಸ್ಥೆಯಿಂದ ನಿರ್ಮಾಣವಾದ ಪೆದ್ರೊ ಸಿನೆಮಾದ ಟ್ರೇಲರ್‌ ನೋಡಿ ನೀವು ನೀಡಿದ ಪ್ರತಿಕ್ರಿಯೆ ನಮ್ಮನ್ನುಪುಳಕಿತರನ್ನಾಗಿಸಿದೆ. ವರ್ಷದ ಹಿಂದೆ ನಾವು ಈ ಸಿನೆಮಾದಕತೆಯನ್ನು ಯೋಚಿಸಿದಾಗ ಅಥವಾ ಮಲೆನಾಡಿನ ಮಳೆಯಲ್ಲಿಚಿತ್ರೀಕರಿಸುತ್ತಿದ್ದಾಗ ಖಂಡಿತವಾಗಿ ಇದು ಪಡೆಯುತ್ತಿರುವಅಂತರಾಷ್ಟ್ರೀಯ ಮಟ್ಟದ ಪ್ರಶಂಸೆಯ ಬಗ್ಗೆ ಯೋಚಿಸಿರಲಿಲ್ಲ.

ಬೇರೆ ಬೇರೆ ಊರಿನಿಂದ ಬಂದ ನಾವು ನಮ್ಮದೇ ಕತೆಯನ್ನುನಮ್ಮದೇ ರೀತಿಯಲ್ಲಿ ಹೇಳಬೇಕು ಎಂಬುದಷ್ಟೇ ನಮಗಿದ್ದ ಗಟ್ಟಿನಿರ್ಧಾರ. ಮೊನ್ನೆಯಷ್ಟೇ ಆಯೋಜಿಸಿದ್ದ ನಮ್ಮ ಸಿನೆಮಾದಪ್ರೈವೇಟ್ ಸ್ಕ್ರೀನಿಂಗ್ ಗೆ ಆಗಮಿಸಿದ್ದ ಗಿರೀಶ್ ಕಾಸರವಳ್ಳಿ, ಎಂಎನ್ ಸತ್ಯು, ವಸಂತ ಮೋಕಾಶಿ, ವಿವೇಕ್ ಶಾನಭಾಗ್, ಕವಿತಾಲಂಕೇಶ್ ಹಾಗೂ ಇನ್ನಿತರ ಹಿರಿಯರು ಸಿನೆಮಾವನ್ನು ಬಹುವಾಗಿಮೆಚ್ಚಿದ್ದಾರೆ. ಅವರು ತೋರಿದ ಪ್ರೀತಿ ನಮ್ಮ ಹೃದಯವನ್ನುಆರ್ದ್ರಗೊಳಿಸಿದೆ. ಜನರೊಂದಿಗೆ ನಮ್ಮ ಸಿನೆಮಾವನ್ನುಹಂಚಿಕೊಳ್ಳುವ ಆಸೆಯನ್ನು ಇಮ್ಮಡಿಯಾಗಿಸಿದೆ.

ಜಗತ್ತಿನ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಸ್ತಿಪಡೆದು ವಿಮರ್ಶಕರಿಂದ ಪ್ರಶಂಸೆ ಪಡೆದ ಪೆದ್ರೂ ನಮ್ಮಬೆಂಗಳೂರಿನ ಚಿತ್ರೋತ್ಸವಕ್ಕೆ ಆಯ್ಕೆಯಾಗಿಲ್ಲ. ಕೆಲವೊಮ್ಮೆಆರೋಗ್ಯದ ದೃಷ್ಟಿಯಿಂದ ಕಹಿಗುಳಿಗೆಯನ್ನೂ ನುಂಗಬೇಕು. ನಮ್ಮಸಿನೆಮಾ ಚಿತ್ರೋತ್ಸವದಿಂದ ಅವಕಾಶ ವಂಚಿತವಾಯಿತು ಎಂಬುದುಎಷ್ಟು ಸತ್ಯವೋ ನಮ್ಮದೇ ಊರಿನ ಜನ ತಮ್ಮದೇ ಸಿನೆಮಾವನ್ನುವೀಕ್ಷಿಸಲು ವಂಚಿತರಾದರು ಎಂಬುದು ಅಷ್ಟೇ ಸತ್ಯ.
ಸಿನೆಮಾ ಎಂಬ ನದಿಗೆ ಎಲ್ಲ ತೊರೆಗಳೂ ಬಂದು ಸೇರಬೇಕು. ನಮ್ಮಲ್ಲಿಯ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅದಕ್ಕೆ ತಡೆ ಒಡ್ಡುವಪ್ರಯತ್ನ ಮಾಡಿದ್ದಾರೆ. ನಾವೆಲ್ಲ ಇವತ್ತು ಕುಳಿತಿರುವ ಜಾಗ ನಮಗೆ ಸಿನೆಮಾ ಎಂಬ ಮಾಧ್ಯಮ ನೀಡಿದ ಭಕ್ಷೀಸು. ಒಂದು ಸಿನಮಾವನ್ನುಜನರಿಗೆ ತಲುಪುವುದನ್ನು ತಪ್ಪಿಸುತ್ತೇವೆ ಎಂದುಕೊಂಡರೆ ನೀರನ್ನುಹಿಮ್ಮುಖ ಹರಿಸುತ್ತೇವೆ ಎಂದುಕೊಂಡಂತೆ.

ನಮ್ಮನ್ನು ಎಡೆಬಿಡದೇ ಸಿನಮಾವನ್ನು ಎಲ್ಲಿ ನೋಡಬಹುದು ಎಂದುಕೇಳುತ್ತಿರುವ ಪ್ರೀತಿಯ ಜನರಲ್ಲಿ ನಮ್ಮದು ಒಂದೇ ಕೋರಿಕೆ, ದಯವಿಟ್ಟು ಹೀಗೆ ಎಂದಿಗೂ ನಮ್ಮೊಂದಿಗಿರಿ, ಪೆದ್ರೊ ವನ್ನುನಿಮ್ಮೆಡೆಗೆ ತಲುಪಿಸುವುದು ನಮ್ಮ ಬಾಧ್ಯತೆ’’ ಎಂದು ರಿಷಬ್‌ ಶೆಟ್ಟಿಹೇಳಿದ್ದಾರೆ.
ಆದರೆ, ಫಿಲ್ಮ್ ಫೆಸ್ಟಿವಲ್ ಡೈರೆಕ್ಟರ್ ಆಗಿರುವ ಸುನಿಲ್ ಪುರಾಣಿಕ್“ಪೆದ್ರೊ ಚಿತ್ರವನ್ನು, ಸೆಸ್ಸಾರ್ ಅಗಿಲ್ಲದ ಕಾರಣ.. ಕನ್ನಡಕಾಂಪೀಟೀಶನ್ ವಿಭಾಗಕ್ಕೇ ನೋಂದಣಿಯೇ ಮಾಡಿಲ್ಲ.. ಭಾರತದಪ್ರತಿಷ್ಟಿತ ಪೆದ್ರೊ‘ ಚಿತ್ರತಂಡದ ಕನಸು ಕನಸಾಗಿಯೇ ಉಳಿದಿದೆ.

ಚಿತ್ರೋತ್ಸವದಲ್ಲಿ ಈ ರೀತಿ ನಮ್ಮದೇ ನೆಲದ ಸಿನಿಮಾಗಳು ಪ್ರದರ್ಶನದಿಂದ ವಂಚಿತವಾಗುವುದು ಹೊಸತೇನಲ್ಲ… ಈ ಹಿಂದೆ ಶಿವರಾಜ್ ಕುಮಾರ್ ಅಭಿನಯದ “ಸಂತೆಯಲ್ಲಿ ನಿಂತ ಕಬೀರ” ಸಿನಿಮಾಗೂ ಇದೇ ರೀತಿ ಅನ್ಯಾಯವಾಗಿತ್ತು …ಅಭಿಮಾನಿಗಳು ಪ್ರತಿಭಟನೆ ಮಾಡಿದ ಕಾರಣಕ್ಕಾಗಿ ಸಿನಿಮಾವನ್ನ 4 ಬಾರಿ ಚಿತ್ರೋತ್ಸವದಲ್ಲಿ ಪ್ರದರ್ಶನ ಮಾಡಲಾಯಿತು ..