- April 26, 2022
ಇದು ನನ್ನ ಕನಸಿನ ಪ್ರಾಜೆಕ್ಟ್ – ರೀಶ್ಮಾ ನಾಣಯ್ಯ


ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಪ್ರೀತಂ ಗುಬ್ಬಿ ತಮ್ಮ ಕಾಂಬಿನೇಷನ್ ನಲ್ಲಿ ಬರುತ್ತಿರುವ ಬಾನ ದಾರಿಯಲಿ ಚಿತ್ರದಲ್ಲಿ ಏಕ್ ಲವ್ ಯಾ ಖ್ಯಾತಿಯ ರೀಶ್ಮಾ ನಾಣಯ್ಯ ನಟಿಸುತ್ತಿದ್ದಾರೆ. ಇತ್ತೀಚೆಗೆ ಚಿತ್ರತಂಡ ಈ ವಿಚಾರ ಹಂಚಿಕೊಂಡಿದ್ದು ರುಕ್ಮಿಣಿ ವಸಂತ್ ಈ ಚಿತ್ರದಲ್ಲಿ ಇನ್ನೊಂದು ನಾಯಕಿಯಾಗಿ ನಟಿಸುತ್ತಿದ್ದಾರೆ.




“ಪ್ರೀತಂ ಗುಬ್ಬಿ ಹಾಗೂ ಗಣೇಶ್ ಅವರೊಂದಿಗೆ ಕೆಲಸ ಮಾಡುವ ಅವಕಾಶ ದೊರಕುತ್ತದೆ ಎಂಬುದನ್ನು ನಂಬಲಾಗುತ್ತಿಲ್ಲ. ನಾನು ಗಣೇಶ್ ಅವರ ಅಭಿಮಾನಿ. ಅವರ ನಟನೆಯನ್ನು ಇಷ್ಟಪಡುತ್ತೇನೆ. ಅವರೊಂದಿಗೆ ತೆರೆ ಹಂಚಿಕೊಳ್ಳಲು ಹಾಗೂ ಅವರಿಂದ ಕಲಿತುಕೊಳ್ಳಲು ಎದುರು ನೋಡುತ್ತಿದ್ದೆ. ಪ್ರೀತಂ ಸರ್ ತಾವು ಎಂತಹ ನಿರ್ದೇಶಕ ಹಾಗೂ ಬರಹಗಾರ ಎಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ. ಇದು ಕನಸಿನ ಪ್ರಾಜೆಕ್ಟ್” ಎಂದಿದ್ದಾರೆ.




ತಮ್ಮ ಪಾತ್ರದ ಕುರಿತು ಹೇಳಿರುವ ರೀಶ್ಮಾ” ನಾನು ಈ ಚಿತ್ರದಲ್ಲಿ ಬದುಕಿನಲ್ಲಿ ಪಾಸಿಟಿವ್ ದೃಷ್ಟಿಕೋನ ಹೊಂದಿರುವ ವೈಲ್ಡ್ ಲೈಫ್ ಫೋಟೋಗ್ರಾಫರ್ ಆಗಿ ನಟಿಸುತ್ತಿದ್ದೇನೆ. ಇದು ಸುಂದರವಾದ ಪಾತ್ರವಾಗಿದೆ. ಆಫ್ರಿಕಾದಲ್ಲಿ ಶೂಟಿಂಗ್ ನಡೆಯಲಿದೆ. ಇದು ನನಗೆ ಮತ್ತೊಂದು ರೋಮಾಂಚನಕಾರಿ ಸಂಗತಿಯಾಗಿದೆ. ಏಕೆಂದರೆ ಇದು ನನ್ನ ಮೊದಲ ಸಾಗರೋತ್ತರ ಶೂಟಿಂಗ್ ಅನುಭವ ಆಗಿದೆ” ಎಂದಿದ್ದಾರೆ.




ಇನ್ನು ಉತ್ತಮ ಸಿನಿಮಾ ಆಫರ್ಸ್ ಪಡೆದುಕೊಳ್ಳುತ್ತಿರುವುದಕ್ಕೆ ಖುಷಿಯಾಗಿರುವ ರೀಶ್ಮಾ ನಾಣಯ್ಯ “ನಾನು ಪ್ರೇಮ್ ಸರ್ ಹಾಗೂ ರಕ್ಷಿತಾ ಮೇಡಂ ಅವರಿಗೆ ಯಾವಾಗಲೂ ಕೃತಜ್ಞಳಾಗಿರುತ್ತೇನೆ. ಏಕ್ ಲವ್ ಯಾ ಸಿನಿಮಾ ಮೂಲಕ ಜನ ನನ್ನ ನಟನಾ ಕೌಶಲ್ಯವನ್ನು ಗುರುತಿಸುತ್ತಿದ್ದಾರೆ. ಸಿನಿಮಾ ರಿಲೀಸ್ ಮೊದಲೇ ನನಗೆ ಹಲವು ಆಸಕ್ತಿಕರ ಪಾತ್ರಗಳು ಬರುತ್ತಿದ್ದವು. ಈಗ ಹಲವು ಸ್ಕ್ರಿಪ್ಟ್ ಕೇಳುತ್ತಿದ್ದೇನೆ” ಎಂದಿದ್ದಾರೆ.








