• May 23, 2022

ವೈಲ್ಡ್ ಲೈಫ್ ಫೋಟೋಗ್ರಾಫರ್ ಆದ ರೀಷ್ಮಾ ನಾಣಯ್ಯ

ವೈಲ್ಡ್ ಲೈಫ್ ಫೋಟೋಗ್ರಾಫರ್ ಆದ ರೀಷ್ಮಾ ನಾಣಯ್ಯ

ಪ್ರೀತಂ ಗುಬ್ಬಿ ನಿರ್ದೇಶನದ ಹೊಸ ಸಿನಿಮಾ ಬಾನದಾರಿಯಲಿ ಸಿನಿಮಾದಲ್ಲಿ ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸುತ್ತಿರುವ ವಿಚಾರ ಸಿನಿ ಪ್ರಿಯರಿಗೆ ತಿಳಿದೇ ಇದೆ. ಇದೀಗ ಚಿತ್ರ ತಂಡ ರೀಷ್ಮಾ ನಾಣಯ್ಯ ಅವರ ಫಸ್ಟ್ ಲುಕ್ ನ್ನು ರಿಲೀಸ್ ಮಾಡಿದೆ. ರೀಷ್ಮಾ ಈ ಸಿನಿಮಾದಲ್ಲಿ ಗಣೇಶ್ ಅವರಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.

ತನ್ನ ಮೂರನೇ ಸಿನಿಮಾ ಕುರಿತು ಮಾತನಾಡಿರುವ ರೀಷ್ಮಾ “ವೈಲ್ಡ್ ಲೈಫ್ ಫೋಟೋಗ್ರಫರ್ ಕಾದಂಬರಿ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಸದಾ ನಗುನಗುತ್ತಾ ಧನಾತ್ಮಕ ಚಿಂತನೆಯ ಹುಡುಗಿಯಾಗಿರುತ್ತಾಳೆ. ನಾನು ಫೋಟೋಗ್ರಫಿ ಕೋರ್ಸ್ ಮಾಡಿರುವುದರಿಂದ ಈ ಪಾತ್ರ ಮಾಡಲು ಸುಲಭವಾಯಿತು. ಆಧುನಿಕ ಲುಕ್ ನಲ್ಲಿ ಕಾಣಿಸಿಕೊಂಡಿದ್ದೇನೆ. ಹಿಂದಿನ ಸಿನಿಮಾಗಳಿಗಿಂತ ಭಿನ್ನವಾಗಿದೆ. ಗಣೇಶ್ ಜೊತೆ ಶೂಟಿಂಗ್ ಮಾಡಲು ಕಾಯುತ್ತಿದ್ದೇನೆ”ಎಂದಿದ್ದಾರೆ.

“ರೀಷ್ಮಾ ಅವರ ಪಾತ್ರದ ಭಾಗವನ್ನು ದಕ್ಷಿಣ ಆಫ್ರಿಕಾದಲ್ಲಿ ಶೂಟಿಂಗ್ ಮಾಡಲಾಗಿದೆ‌. ಅವರ ಪಾತ್ರ ತುಂಬಾ ಮನರಂಜನೆಯ ಅಂಶಗಳನ್ನು ಹೊಂದಿದೆ”ಎಂದಿದ್ದಾರೆ ನಿರ್ದೇಶಕ ಪ್ರೀತಂ ಗುಬ್ಬಿ. ಒಟ್ಟಿನಲ್ಲಿ ಒಂದಾದ ಮೇಲೆ ಒಂದು ಸಿನಿಮಾದಲ್ಲಿ ನಟಿಸುವ ಮೂಲಕ ಚಂದನವನದಲ್ಲಿ ರೀಷ್ಮಾ ನಾಣಯ್ಯ ಮೋಡಿ ಮಾಡುವುದಂತೂ ನಿಜ.