• April 12, 2022

ಬೆಳ್ಳಿತೆರೆ ಮೇಲೆ ರಾಯನ್ ರಾಜ್ ಸರ್ಜಾ

ಬೆಳ್ಳಿತೆರೆ ಮೇಲೆ ರಾಯನ್ ರಾಜ್ ಸರ್ಜಾ

ನಟ ಚಿರಂಜೀವಿ ಸರ್ಜಾ ಅವರ ಕೊನೆಯ ಚಿತ್ರ ರಾಜಮಾರ್ತಾಂಡ ಬಿಡುಗಡೆಗೆ ಸಿದ್ಧವಾಗಿದೆ. ಚಿರಂಜೀವಿ ಅವರ ಕೊನೆಯ ಚಿತ್ರ ಇದಾಗಿರುವುದರಿಂದ ದೊಡ್ಡ ಮಟ್ಟದಲ್ಲಿ ಚಿತ್ರ ರಿಲೀಸ್ ಆಗಲಿದೆ. ಹೀಗಾಗಿ ಚಿತ್ರ ತಂಡ ವಿಶೇಷ ಪೂಜೆಯನ್ನು ಸಲ್ಲಿಸಿದೆ. ಈ ಸಂದರ್ಭದಲ್ಲಿ ನಿರ್ದೇಶಕ ರಾಮ್ ನಾರಾಯಣ್ ವಿಶೇಷ ಸುದ್ದಿ ನೀಡಿದ್ದಾರೆ.

ಈ ಚಿತ್ರದಲ್ಲಿ ಚಿರು ಪುತ್ರ ರಾಯನ್ ರಾಜ್ ಕೂಡಾ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಕೆಲಸ ರಾಯನ್ ಹುಟ್ಟುವ ಮೊದಲೇ ಪೂರ್ಣಗೊಂಡಿತ್ತು. ರಾಯನ್ ಚಿತ್ರದಲ್ಲಿ ಯಾವ ರೀತಿ ಎಂಟ್ರಿ ನೀಡಬಹುದು ಎಂಬ ಕುತೂಹಲ ಇದೆ.

ಇದುವರೆಗೂ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಗೂ ವಿಡಿಯೋಗಳಿಂದ ರಾಯನ್ ನ್ನು ಕಣ್ತುಂಬಿಸಿಕೊಳ್ಳುತ್ತಿದ್ದ ಪ್ರೇಕ್ಷಕರು ಈ ಬಾರಿ ರಾಯನ್ ನನ್ನು ಬೆಳ್ಳಿತೆರೆಯಲ್ಲಿ ನೋಡಬಹುದಾಗಿದೆ. ರಾಯನ್ ರಾಜ್ ಅಪ್ಪನ ಚಿತ್ರದಲ್ಲಿ ನಟಿಸುವ ಮೂಲಕ ಅಪ್ಪನಿಗೆ ಸಾಥ್ ನೀಡಿದ್ದಾನೆ.