• July 13, 2022

ದುಲ್ಕರ್ ಸಲ್ಮಾನ್ ಜೊತೆ ನಟಿಸಲಿರುವ ಬಹುಭಾಷಾ ನಟಿ

ದುಲ್ಕರ್ ಸಲ್ಮಾನ್ ಜೊತೆ ನಟಿಸಲಿರುವ ಬಹುಭಾಷಾ ನಟಿ

ಸೀತಾ ರಾಮಂ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಕಾಶ್ಮೀರಿ ಮುಸ್ಲಿಂ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ದುಲ್ಕರ್ ಸಲ್ಮಾನ್ ಸೇನಾಧಿಕಾರಿಯಾಗಿ ಕಾಣಿಸಿಕೊಳ್ಳಲಿರುವ ಈ ಚಿತ್ರದಲ್ಲಿ ರಶ್ಮಿಕಾ ಪಾತ್ರ ಪಾತ್ರ ಮುಖ್ಯವಾಗಿರಲಿದೆಯಂತೆ. ‘ಚಲೋ’ ಚಿತ್ರದ ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಯವಾದ ಕನ್ನಡದ ಚೆಲುವೆ ರಶ್ಮಿಕಾ ಮಂದಣ್ಣ ಕೆಲವೇ ದಿನಗಳಲ್ಲಿ ಸ್ಟಾರ್ ಪಟ್ಟಕ್ಕೇರಿದರು. ತಮ್ಮ ವಿಶಿಷ್ಟ ನಟನೆಯ ಮೂಲಕವೇ ಇದೀಗ ಸೌತ್ನ ಟಾಪ್ ನಟಿಯರ ಸಾಲಿನಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಇದರ ನಡುವೆ ಮಲಯಾಳಂ ಕಡೆ ಮುಖ ಮಾಡಿರುವ ರಶ್ಮಿಕಾ ಮಂದಣ್ಣ ಇದೀಗ ಸೀತಾ ರಾಮಂ ಚಿತ್ರದ ಮೂಲಕ ಮಲಯಾಳಂ ಚಿತ್ರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಈ ಚಿತ್ರದಲ್ಲಿ ಮಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್ ನಾಯಕನಾಗಿದ್ದು, ಮೃಣಾಲ್ ಠಾಕೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನು ರಶ್ಮಿಕಾ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈಗಾಗಲೇ ಸಾಕಷ್ಟು ಮೆಚ್ಚುಗೆಯನ್ನು ಪಡೆದಿರುವ ಚಿತ್ರದ ಹಾಡುಗಳು ಅಭಿಮಾನಿಗಳಿಗೆ ಇಷ್ಟವಾಗಿರುವುದರಲ್ಲಿ ಸಂಶಯವಿಲ್ಲ. ಅಂತೆಯೇ ಟೀಸರ್ ಕೂಡ ಬಿಡುಗಡೆಯಾಗಿದ್ದು ಸಾಕಷ್ಟು ವೀಕ್ಷಣೆಯನ್ನು ಕಂಡಿದೆ. ಇದರ ಮಧ್ಯೆ ರಶ್ಮಿಕಾ ಅವರ ಲೇಟೆಸ್ಟ್ ಲುಕ್ ರಿವೀಲ್ ಆಗಿದೆ.ಈ ಪೋಸ್ಟರ್‌ನಲ್ಲಿ ರಶ್ಮಿಕಾ ಹಿಜಾಬ್ ಧರಿಸಿ ಮುಸ್ಲಿಂ ಹುಡುಗಿಯಾಗಿ ಕಾಣಿಸಿಕೊಳ್ಳುವುದರೊಂದಿಗೆ ಕುತೂಹಲ ಸೃಷ್ಟಿಸಿದ್ದಾರೆ. ‘ಸೀತಾ-ರಾಮಂ’ನಂತ ಹಿಂದೂ ಶೀರ್ಷಿಕೆಯೊಂದಿಗೆ ಬರುತ್ತಿರುವ ಈ ಸಿನಿಮಾದಲ್ಲಿ ರಶ್ಮಿಕಾ ಮುಸ್ಲಿಂ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.

ಅಂದಹಾಗೆ ಸಿನಿಮಾದಲ್ಲಿ ಈ ಪಾತ್ರ ಬಹುಮುಖ್ಯವಾಗಿರಲಿದೆ. ಬ್ರಿಗೇಡಿಯರ್ ವಿಷ್ಣು ಶರ್ಮಾ ಪಾತ್ರದಲ್ಲಿ ಸುಮಂತ್ ನಟಿಸುತ್ತಿದ್ದಾರೆ. ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ಸೇನಾಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಚಿತ್ರದ ಪ್ರಚಾರ ಕಾರ್ಯ ಭರ್ಜರಿಯಾಗಿ ಸಾಗುತ್ತಿದೆ.

ನಿರ್ಮಾಪಕರು ಈ ಚಿತ್ರದ ಪ್ರಚಾರದ ಭಾಗವಾಗಿ ಸೀತಾ ರಾಮಂ ಲಾಂಛನವಿರುವ ಛತ್ರಿ, ದುಪ್ಪಟ್ಟ, ತಿಂಡಿ ತಿನಿಸುಗಳನ್ನು ವಿತರಿಸಲಾಗುತ್ತಿದೆ. ಸದ್ಯ ಸೀತಾ ರಾಮಂ ಚಿತ್ರತಂಡ ವಿತರಿಸಿದ ಉಡುಗೊರೆಗಳನ್ನು ಸ್ವೀಕರಿಸಿದ ಪ್ರೇಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ.

ಸೀತಾ ರಾಮಂ ಚಿತ್ರವನ್ನು ಹನು ರಾಗವಪುಡಿ ನಿರ್ದೇಶನ ಮಾಡುವುದರೊಂದಿಗೆ ದಿವಾಕರ್ ಮಣಿ ಮತ್ತು ಪಿ.ಎಸ್.ವಿನೋದ್ ಅವರ ಕ್ಯಾಮರಾ ವರ್ಕ್ ಚಿತ್ರಕ್ಕಿದ್ದು, ವಿಶಾಲ್ ಚಂದ್ರಶೇಖರ್ ಸಂಗೀತ ಸಂಯೋಜನೆ ಮಾಡಿದ್ದಾರೆ.