• March 6, 2022

ಮುಂದಿನ‌ಜನ್ಮದಲ್ಲಿ ಹೆಣ್ಣಾಗಿ ಹುಟಲ್ವಂತೆ ರಶ್ಮಿಕಾ

ಮುಂದಿನ‌ಜನ್ಮದಲ್ಲಿ ಹೆಣ್ಣಾಗಿ ಹುಟಲ್ವಂತೆ ರಶ್ಮಿಕಾ

ಸಿನಿಮಾರಂಗದ ನ್ಯಾಷನಲ್ ಕ್ರಶ್ ಎಂದೇ ಪ್ರಖ್ಯಾತಿ ಗಳಿಸಿರುವ ನಟಿ ರಶ್ಮಿಕಾ ಮಂದಣ್ಣ ಇತ್ತೀಚಿನ ದಿನಗಳಲ್ಲಿ ಹೆಚ್ಚೆಚ್ಚು ಸುದ್ದಿಯಲ್ಲಿರುತ್ತಾರೆ…ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್ ಗೆ ಹಾರಿದ ನಂತರ ಎಲ್ಲೆಲ್ಲೂ ರಶ್ಮಿಕಾ ಅವ್ರದ್ದೆ ಸುದ್ದಿ …

ಇನ್ನು ರಶ್ಮಿಕಾ ಪಾಸಿಟಿವ್ ಆಗಿ ಮಾತನಾಡಿದ್ರೂ ಸುದ್ದಿ ನೆಗೆಟಿವ್ ಆಗಿ ಮಾತನಾಡಿದರು ಸುದ್ದಿ… ಟ್ರೋಲ್ ಮಾಡುವವರಂತೂ ರಶ್ಮಿಕಾ ಏನ್ ಮಾತಾಡ್ತಾರೆ ಅಂತನೆ ಕಾದಿರುತ್ತಾರೆ ..ಇನ್ನು ಇತ್ತಿಚಿಗಷ್ಟೇ ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ರಶ್ಮಿಕಾ ತಾವು ಮುಂದಿನ ಜನ್ಮದಲ್ಲಿ ಏನಾಗಿ ಹುಟ್ಟಬೇಕು ಎನ್ನುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ..

ಹೌದು ಮುಂದಿನ ಜನ್ಮದಲ್ಲಿ ನಾನು ಗಂಡಾಗಿ ಹುಟ್ಟಲು ಇಚ್ಛಿಸುತ್ತೇನೆ ಎಂದಿದ್ದಾರೆ…ಯಾಕೆಂದರೆ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಆಡವಾಲು ಮೀಕು ಜೊಹ್ರಾಲು ಸಿನಿಮಾದಲ್ಲಿ ಓರ್ವ ಮದುಮಗಳಾಗಿ ಹೆಣ್ಣು ಎದುರಿಸುವ ಸವಾಲುಗಳನ್ನು ತೋರಿಸಲಾಗಿದೆ ಆದ್ದರಿಂದ ಮುಂದಿನ ಜನ್ಮದಲ್ಲಿ ಗಂಡಾಗಿ ಹುಟ್ಟಲು ಬಯಸುತ್ತೇನೆ ಎಂದಿದ್ದಾರೆ…