• January 16, 2022

ನಾನು ಸೈಕೋ ಎಂದ ರಶ್ಮಿಕಾ ಮಂದಣ್ಣ !

ನಾನು ಸೈಕೋ ಎಂದ ರಶ್ಮಿಕಾ ಮಂದಣ್ಣ !

ಕೊಡಗಿನ ಕುವರಿ.. ಸ್ಯಾಂಡಲ್ ವುಡ್ ಬೆಡಗಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸದ್ಯ ನ್ಯಾಷನಲ್ ಲೆವೆಲ್ ನಲ್ಲಿ ಸದ್ದು ಮಾಡುತ್ತಿದ್ದಾರೆ.. ತನ್ನ ಅಭಿನಯದ ಮೂಲಕವೇ ಅಪಾರ ಪ್ರೇಕ್ಷಕರ ಗಮನ ಸೆಳೆಯುತ್ತಿರುವ ರಶ್ಮಿಕಾ ತನ್ನನ್ನ ತಾನು ಸೈಕೋ ಎಂದು ಕರೆದುಕೊಂಡಿದ್ದಾರೆ ..

ಎಷ್ಟೇ ಸೈಲೆಂಟಾಗಿದ್ದು ಟ್ರೋಲಿಗರಿಗೆ ಆಗಾಗ ಆಹಾರವಾಗುವ ರಶ್ಮಿಕಾಗೆ ಏನಾಯ್ತು ತನ್ನನ್ನೇ ತಾನು ಯಾಕೆ ಸೈಕೋ ಎಂದು ಕರೆದುಕೊಂಡಿದ್ದಾರೆ ಎಂದು ಶಾಕ್ ಆಗಬೇಡಿ.. ರಶ್ಮಿಕಾ ಸೈಕೋ ಎಂದು ಹೇಳಿರುವುದು ಜಿಮ್ ಹಾಗೂ ವರ್ಕೌಟ್ ವಿಚಾರವಾಗಿ… ಹೌದು ರಶ್ಮಿಕಾ ಜಿಮ್ ನಲ್ಲಿರುವ ಫೋಟೋವನ್ನು ಶೇರ್ ಮಾಡಿ ನಾನು ಜಿಮ್ ನಲ್ಲಿ ಜೀವಿಸುವ ಸೈಕೋ ಎಂದು ಹೇಳಿದ್ದಾರೆ… ಇದರಿಂದ ತಿಳಿಯುತ್ತದೆ ರಶ್ಮಿಕಾ ಇತ್ತೀಚಿನ ದಿನಗಳಲ್ಲಿ ಹೆಚ್ಚು ವರ್ಕೌಟ್ ಮಾಡುತ್ತಿದ್ದಾರೆ ಎನ್ನುವುದು
..
ಹೌದು ರಶ್ಮಿಕಾ ಸ್ಯಾಂಡಲ್ ವುಡ್ ಅಂಗಳದಿಂದ ಟಾಲಿವುಡ್ ಅಂಗಳಕ್ಕೆ ಎಂಟ್ರಿ ಕೊಟ್ಟಾಗ ಸಾಕಷ್ಟು ಬಾಡಿ ಶೇಮಿಂಗ್ ವಿಚಾರವಾಗಿ ನೊಂದಿದ್ದರು.. ಟ್ರೋಲಿಗರು ಕೂಡ ಅವರ ದೇಹದ ಬಗ್ಗೆ ಹೆಚ್ಚು ಮಾತನಾಡಿದ್ದರು.. ಹಾಗಾಗಿ ರಶ್ಮಿಕಾ ಈಗ ಹಿಂದಿಗಿಂತಲೂ ಈಗ ತುಂಬಾನೇ ಬದಲಾಗಿದ್ದಾರೆ.. ತಮ್ಮ ದೇಹವನ್ನು ಜಿಮ್ ನಲ್ಲಿ ದಂಡಿಸುವ ಮೂಲಕ ಮತ್ತಷ್ಟು ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ..ಇನ್ನು ಬಾಲಿವುಡ್ ಮತ್ತು ಟಾಲಿವುಡ್‌ಗೆ ಎಂಟ್ರಿಕೊಟ್ಟಾಗ ಹೆಚ್ಚು ಹೆಚ್ಚು ಕಾಂಪಿಟೇಷನ್ ಗಳನ್ನ ಫೇಸ್ ಮಾಡಬೇಕಾಗುತ್ತೆ ಹಾಗಾಗಿ ರಶ್ಮೀಕಾ‌ ವರ್ಕ್ ಔಟ್ ಮೋರೆ ಹೋಗಿದ್ದಾರೆ…