- June 24, 2022
ತಳಪತಿ ವಿಜಯ್ 66ನೇ ಸಿನಿಮಾಗೆ ಟೈಟಲ್ ಫಿಕ್ಸ್.


“ತಳಪತಿ66” ಎಂಬ ಹೆಸರಿನಿಂದಲೇ ಎಲ್ಲೆಡೆ ಸದ್ದು ಮಾಡಿದ್ದ ಸಿನಿಮಾ ತಮಿಳಿನ ಸೂಪರ್ ಸ್ಟಾರ್ ತಳಪತಿ ವಿಜಯ್ ಅವರ 66ನೇ ಚಿತ್ರ. ತಳಪತಿ ವಿಜಯ್ ಅವರ ಸಿನಿಮಾ ಬರುತ್ತಿದೆ ಅಂದರೆ ಎಲ್ಲೆಡೆ ಹಬ್ಬದ ವಾತಾವರಣ ಹುಟ್ಟಿಕೊಳ್ಳುತ್ತದೆ. ಅಷ್ಟು ದೊಡ್ಡ ಅಭಿಮಾನಿ ಬಳಗ ಅವರದ್ದು. ಇಡೀ ದೇಶದಲ್ಲೂ ಇವರನ್ನ ಆರಾಧಿಸೋ ಅಭಿಮಾನಿಗಳಿದ್ದಾರೆ. ಸದ್ಯ ಇವರೆಲ್ಲರೂ ವಿಜಯ್ ಅವರ 66ನೇ ಸಿನಿಮಾದ ಘೋಷಣೆಯ ಸಂತಸದಲ್ಲಿದ್ದಾರೆ. ಈ ಹೊಸ ಚಿತ್ರಕ್ಕೆ ‘ವರಿಸು’ ಎಂದು ಹೆಸರಿಡಲಾಗಿದೆ.




ವಿಜಯ್ ಅವರ ಈ ಹೊಸ ಸಿನಿಮಾ ತಮಿಳು ಹಾಗು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುವುದರಲ್ಲಿದೆ. ತಮಿಳಿನಲ್ಲಿ ‘ವರಿಸು’ ಎಂದೂ ತೆಲುಗಿನಲ್ಲಿ ‘ವಾರಸುಡು’ ಎಂದು ಶೀರ್ಷಿಕೆ ಇಟ್ಟಿದ್ದಾರೆ. ವಿಜಯ್ ಅವರ ಜನುಮದಿನವಾದ ಜೂನ್ 22ರಂದು ಚಿತ್ರತಂಡ ಒಂದೇ ದಿನ ಮೂರು ವಿಭಿನ್ನ ಪೋಸ್ಟರ್ ಗಳನ್ನು ಬಿಡುಗಡೆಗೊಳಿಸಿದೆ. ಮೂರರಲ್ಲೂ ಬೇರೆ ಬೇರೆ ಶೇಡ್ ಗಳಲ್ಲಿ ತಳಪತಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಲ್ಲಿ ಅಪಾರ ಸಂತಸ ತಂದಿದೆ. ಹೆಸರಾಂತ ನಿರ್ದೇಶಕ ವಂಶಿ ಪೈಡಿಪಲ್ಲಿ ಅವರು ಈ ಚಿತ್ರವನ್ನು ರಚಿಸಿ ನಿರ್ದೇಶಿಸಿದ್ದಾರೆ.






‘ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್’ ಬ್ಯಾನರ್ ಅಡಿಯಲ್ಲಿ ರಾಜು ಹಾಗು ಸಿರೀಶ್ ಈ ಸಿನಿಮಾದ ನಿರ್ಮಾಣ ಮಾಡಿದ್ದಾರೆ. ತಮನ್ ಎಸ್ ಅವರ ಸಂಗೀತ ಚಿತ್ರದಲ್ಲಿರಲಿದ್ದು, ‘ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ ಅವರು ವಿಜಯ್ ಅವರಿಗೆ ನಾಯಕಿಯಾಗಿ ನಟಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿಕೊಂಡಿರುವ ಚಿತ್ರತಂಡ 2023ರ ಸಂಕ್ರಾಂತಿಗೆ ಸಿನಿಮಾ ಬಿಡುಗಡೆ ಮಾಡುವ ಸಿದ್ಧತೆ ಮಾಡಿಕೊಳ್ಳುತ್ತಿದೆ.








