• December 3, 2021

ವಿದೇಶ ಸುತ್ತಿ ಮನೆಗೆ ಬಂದ ರಶ್ಮಿಕಾಗೆ ಸಿಕ್ತು ಮುತ್ತಿನ‌ ವೆಲ್ಕಂ‌

ವಿದೇಶ ಸುತ್ತಿ ಮನೆಗೆ ಬಂದ ರಶ್ಮಿಕಾಗೆ ಸಿಕ್ತು ಮುತ್ತಿನ‌ ವೆಲ್ಕಂ‌

ನಟಿ ರಶ್ಮಿಕಾ ಮಂದಣ್ಣ ಇತ್ತೀಚಿಗಷ್ಟೆ ವಿದೇಶ ಪ್ರವಾಸ ಕೈಗೊಂಡಿದ್ದರು ..ಬಹಳ‌ದಿನಗಳ ನಂತ್ರ ರಶ್ಮಿಕಾ ಸೋಲೋ ಟ್ರಿಪ್ ಮಾಡಿದ್ದು ಪ್ಯಾರಿಸ್ ಅನ್ನು ಒಂದು ಸುತ್ತು ಹಾಕಿಕೊಂಡು ಬಂದಿದ್ದಾರೆ…

ಪ್ಯಾರಿಸ್ ನಿಂದ ಹೈದ್ರಾಬಾದ್ ಗೆ ಮರಳಿರೊ ರಶ್ಮಿಕಾರನ್ನ ಮುತ್ತು ಕೊಟ್ಟು ಮನೆಗೆ ಸ್ವಾಗತ ಮಾಡಲಾಗಿದೆ…ಈ ವಿಚಾರವನ್ನ ನಟಿ ರಶ್ಮಿಕಾ ಸೋಷಿಯಲ್ ‌ಮಿಡಿಯಾ ಮೂಲಕ ಹಂಚಿಕೊಂಡಿದ್ದಾರೆ…ಅಷ್ಟಕ್ಕೂ ರಶ್ಮಿಕಾಗೆ ಮುತ್ತು ಕೊಟ್ಟು ವೆಲ್ಕಂ ಮಾಡಿದ್ದು ಯಾರು ಅಂತಿರಾ…ಅವ್ರು ಮತ್ಯಾರು ಅಲ್ಲ ರಶ್ಮಿಕಾ‌ರ ಮುದ್ದು ನಾಯಿ ಮರಿ ಔರಾ…

ರಶ್ಮಿಕಾ‌ ಸದ್ಯ‌ ಹೈದ್ರಾಬಾದ್ ನಲ್ಲಿ ವಾಸವಿದ್ದು ಅವ್ರ ಜೊತೆಗೆ ಔರಾ ಎನ್ನುವ ನಾಯಿಮರಿ ಕೂಡ ಈಗ ರಶ್ಮಿಕಾ ತಮ್ಮ ಬಹುತೇಕ ಸಮಯವನ್ನ ಅದರ ಜೊತೆಯಲ್ಲಿಯೇ ಕಳೆಯುತ್ತಿದ್ದಾರೆ..ಹಾಗಾಗಿ ರಶ್ಮುಕಾ ಫಾರಿನ್ ನಿಂದ ಬರೋದನ್ನೆ ಕಾದಿದ್ದ ಔರಾ ..ಕೊಡಗಿನ‌ ಕುವರಿಯನ್ನ ಮುತ್ತಿನ‌ ಮೂಲಕ ಮನೆಗೆ ಸ್ವಾಗತ ಮಾಡಿದೆ…