• April 26, 2022

ಟ್ರೋಲ್ ಗೆ ಒಳಗಾದ ನ್ಯಾಷನಲ್ ಕ್ರಶ್… ಯಾಕೆ ಗೊತ್ತಾ?

ಟ್ರೋಲ್ ಗೆ ಒಳಗಾದ ನ್ಯಾಷನಲ್ ಕ್ರಶ್… ಯಾಕೆ ಗೊತ್ತಾ?

ಸೆಲೆಬ್ರಿಟಿಗಳನ್ನು ಮಾದರಿ ಆಗಿ ತೆಗೆದುಕೊಳ್ಳುವ ಜನ ಅವರು ಹೇಳುವ ಮಾತನ್ನು ನಂಬುತ್ತಾರೆ. ಹೀಗಾಗಿ ಅವರು ಜವಾಬ್ದಾರಿಯುತವಾಗಿರಬೇಕು. ಅವರು ಕೆಟ್ಟದ್ದನ್ನು ಸೂಚಿಸಿದರೆ ಅದನ್ನೇ ಪಾಲಿಸುತ್ತಾರೆ. ನಟಿ ರಶ್ಮಿಕಾ ಈಗ ಅದೇ ವಿಚಾರಕ್ಕೆ ಟ್ರೋಲ್ ಆಗುತ್ತಿದ್ದಾರೆ.

ಜಾಹೀರಾತುಗಳನ್ನು ಒಪ್ಪಿಕೊಳ್ಳುವ ಮೂಲಕ ಆದಾಯವನ್ನು ಪಡೆದುಕೊಳ್ಳುವ ಸೆಲೆಬ್ರಿಟಿಗಳು ಸಿಕ್ಕಸಿಕ್ಕ ಜಾಹೀರಾತುಗಳನ್ನು ಒಪ್ಪಿಕೊಂಡರೆ ಟ್ರೋಲ್ ಆಗುವುದು ಪಕ್ಕಾ. ಈ ಹಿಂದೆ ಶ್ರೀನಿಧಿ ಅಗರ್ವಾಲ್, ಅಕ್ಷಯ್ ಕುಮಾರ್ ಟೀಕೆಗಳಿಗೆ ಗುರಿಯಾಗಿದ್ದರು. ಈಗ ನಟಿ ರಶ್ಮಿಕಾ ಮಧ್ಯದ ಕಂಪೆನಿ ಕಿಂಗ್ ಫಿಶರ್ ಜಾಹೀರಾತಿನಲ್ಲಿ ನಟಿಸಿರುವುದು ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದೆ.

ಸೆಲೆಬ್ರಿಟಿಗಳ ಮಾತುಗಳನ್ನು ನಂಬುವ ಹಲವು ಮಂದಿಯಿದ್ದಾರೆ. ಹೀಗಿರುವಾಗ ರಶ್ಮಿಕಾ ಮಂದಣ್ಣ ಮದ್ಯದ ಕಂಪೆನಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿದ್ದಾರೆ. ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ರಶ್ಮಿಕಾ ಅವರನ್ನು ಜನ ಫಾಲೋ ಮಾಡಬಹುದು ಎಂಬ ಆತಂಕ ಅಭಿಮಾನಿಗಳದ್ದು.

ಈ ಜಾಹೀರಾತಿನಲ್ಲಿ ರಶ್ಮಿಕಾ ಜೊತೆ ನಟ ವರುಣ್ ಧವನ್ ಕೂಡಾ ಕಾಣಿಸಿಕೊಂಡಿದ್ದಾರೆ. ಸಮುದ್ರತೀರದಲ್ಲಿ ಇದನ್ನು ಶೂಟಿಂಗ್ ಮಾಡಲಾಗಿದೆ.

ನಟಿ ರಶ್ಮಿಕಾ ಪುಷ್ಪ ಸಿನಿಮಾ ನಂತರ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮಿಷನ್ ಮಜ್ನು, ಗುಡ್ ಬೈ ಸೇರಿದಂತೆ ಬಾಲಿವುಡ್ ಅಲ್ಲದೇ ತೆಲುಗು ತಮಿಳು ಚಿತ್ರಗಳಲ್ಲಿಯೂ ನಟಿಸುತ್ತಿದ್ದಾರೆ.