• December 16, 2021

ಕನ್ನಡ ಮಾತನಾಡೋದನ್ನ ಮರೆತ್ರಾ ರಶ್ಮಿಕಾ

ಕನ್ನಡ ಮಾತನಾಡೋದನ್ನ ಮರೆತ್ರಾ ರಶ್ಮಿಕಾ

ಭಾರತೀಯ ಸಿನಿಮಾರಂಗದಲ್ಲಿ ಭಾರಿ ಸದ್ದು ಮಾಡಿರೋ ಸಿನಿಮಾ‌ ಪುಷ್ಪ…ಪುಷ್ಪ ಸಿನಿಮಾ‌ ತೆರೆಗೆ ಬರಲು ಸಿದ್ದವಾಗಿದ್ದು ಚಿತ್ರ ಪ್ರಚಾರಕ್ಕಾಗಿ ಸಿನಿಮಾತಂಡ ಬೆಂಗಳೂರಿಗೆ ಭೇಟಿ ಕೊಟ್ಟಿದೆ….ಪುಷ್ಪ ಸಿನಿಮಾದ
ಸುದ್ದಿಗೋಷ್ಠಿಯಲ್ಲಿ ಅಲ್ಲು ಅರ್ಜುನ್ ,ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್ ಭಾಗಿ ಆಗಿದ್ದಾರೆ…

ಪುಷ್ಪ ಡಿ.17 ಕ್ಕೆ ವಿಶ್ವದಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗ್ತಿದೆ….ಪುಷ್ಪ ಚಿತ್ರ ಎರಡು ಭಾಗಗಳಲ್ಲಿ ಬರ್ತಿದ್ದು ಇದೇ ವಾರ ಮೊದಲನೆ ಭಾಗ ರಿಲೀಸ್ ಆಗ್ತಿದೆ..ಹೀಗಾಗಿ ಬೆಂಗಳೂರಿನಲ್ಲಿ ಪುಷ್ಪ ಸಿನಿಮಾ ಪ್ರಚಾರಕ್ಕೆ ಆಗಮಿಸಿದೆ…

ಸುದ್ದಿಗೋಷ್ಠಿಯಲ್ಲಿ ನಟಿ ರಶ್ಮಿಕಾ ಮತ್ತೆ ಎಡವಟ್ಟು ಮಾಡಿಕೊಂಡಿದ್ದಾರೆ…ತೆಲುಗು ಮಾತಾಡಿ ಮಾತಾಡಿ ನನಗೆ ಕನ್ನಡನೇ ಬರ್ತಿಲ್ಲ ಎಂದಿದ್ದಾರೆ ರಶ್ಮಿಕಾ..
ರಶ್ಮಿಕಾ‌‌ ಮಾತು ಕೇಳಿ ಕನ್ನಡ ಮಾತನಾಡೋದನ್ನ ಮರೆತಿದ್ದಾರಾ ಅನ್ನೋ ಅನುಮಾನ ಕನ್ನಡಿಗರಿಗೆ ಮೂಡಿದೆ…

ಪುಷ್ಪ ಸಿನಿಮಾ ಬಗ್ಗೆ ಮಾತನಾಡಲು ಶುರು ಮಾಡಿದ ರಶ್ಮಿಕಾ ತೆಲುಗು ಮಾತನಾಡಿ ಕನ್ನಡವೇ ಬರ್ತಿಲ್ಲ ಎಂದಿದ್ದಾರೆ..ಅದಷ್ಟೇ ಅಲ್ಲದೆ ಪುಷ್ಪ ಕನ್ನಡ ವರ್ಷನ್ ಗೆ ನಾನು ಕನ್ನಡದಲ್ಲಿ ಡಬ್ಬಿಂಗ್ ಮಾಡಬೇಕು ಅಂದುಕೊಂಡಿದ್ದೆ..ಆದರೆ ಟೈಂ ಸಿಗಲಿಲ್ಲ.. ಹೀಗಾಗಿ ಬೇರೆಯವರು ಡಬ್ಬಿಂಗ್ ಮಾಡಿದ್ದಾರೆ.ಪಾರ್ಟ್ 2 ಗೆ ನಾನೆ ಕನ್ನಡಯಸಲ್ಲಿ ಡಬ್ಬಿಂಗ್ ಮಾಡುತ್ತೇನೆ ಎಂದು ಹೇಳುವ‌ ಮೂಲಕ ಮತ್ತೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ರಶ್ಮಿಕಾ…..