- May 15, 2022
ಆ ಒಂದು ಸಿನಿಮಾದ ಬಗ್ಗೆ ಮಾತನಾಡಿದ ರಣವೀರ್ ಸಿಂಗ್ ಹೇಳಿದ್ದೇನು ಗೊತ್ತಾ?


ಬಾಲಿವುಡ್ ನಟ ರಣವೀರ್ ಸಿಂಗ್ ತಮ್ಮ ಚೊಚ್ಚಲ ಚಿತ್ರ ಬ್ಯಾಂಡ್ ಬಜಾ ಬಾರಾತ್ ಸಿನಿಮಾದ ಬಿಟ್ಟೂ ಶರ್ಮಾ ಪಾತ್ರಕ್ಕಾಗಿ ದೆಹಲಿಯ ಸಂಪ್ರದಾಯವನ್ನು ಕಲಿತುಕೊಳ್ಳಲು ದೆಹಲಿ ಯುನಿವರ್ಸಿಟಿಯ ಸುತ್ತಲೂ ಹೇಗೆ ತಿರುಗಿದ್ದರು ಎಂಬುದನ್ನು ಟಿವಿ ಶೋನಲ್ಲಿ ಬಹಿರಂಗ ಪಡಿಸಿದ್ದಾರೆ.




ಸದ್ಯ ಕಾಮಿಡಿ ಡ್ರಾಮಾ ಜಯೇಶ್ ಭಾಯಿ ಜೋರ್ ದಾರ್ ಸಿನಿಮಾದಲ್ಲಿ ನಟಿಸುತ್ತಿರುವ ರಣವೀರ್ ಚಿತ್ರದ ಪ್ರಚಾರಕ್ಕಾಗಿ ಸಹನಟಿ ಶಾಲಿನಿ ಪಾಂಡೆ ಜೊತೆ ಟಿವಿ ಶೋನಲ್ಲಿ ಕಾಣಿಸಿಕೊಂಡಿದ್ದಾರೆ.




“ನಾನು ಬ್ಯಾಂಡ್ ಬಜಾ ಬಾರಾತ್ ಸಿನಿಮಾಕ್ಕೆ ಆಡಿಷನ್ ನೀಡಿದೆ. ದಿಲ್ಲಿ ಮೂಲದ 21 ವರ್ಷದ ಯುವಕನ ಪಾತ್ರವಾಗಿತ್ತು. ಹೀಗಾಗಿ ಆ ಸಮಯದಲ್ಲಿ ಬಂದಿದ್ದ ದಿಲ್ಲಿ ಮೂಲದ ಎಲ್ಲಾ ಸಿನಿಮಾಗಳು ಉದಾಹರಣೆಗೆ ದಿಬಾಕರ್ ಬ್ಯಾನರ್ಜಿ ಅವರ ಓಯೆ ಲಕ್ಕಿ ಲಕ್ಕಿ ಓಯೆ ಸಿನಿಮಾಗಳನ್ನು ನೋಡಿದೆ. ಎಲ್ಲರೂ ನಾನು ಹುಟ್ಟಿ ಬೆಳೆದದ್ದು ಮುಂಬೈ ಎಂದರೂ ಆದಿತ್ಯ ಚೋಪ್ರಾ ನಂಬಲಿಲ್ಲ. ಅವರನ್ನು ಆಡಿಷನ್ ಸುತ್ತಿನಲ್ಲಿ ಮನವೊಲಿಸಲು ಸಾಧ್ಯವಾಯಿತು. ದೆಹಲಿಯ ಸಂಪ್ರದಾಯವನ್ನು ಕಲಿತುಕೊಳ್ಳಲು ನಿರ್ದೇಶಕ ಮನೀಶ್ ಶರ್ಮಾ ಲೊಕೇಶನ್ ಸೇರಿಕೊಳ್ಳಲು ಸಲಹೆ ನೀಡಿದರು. ಜನರ ಸಂಪ್ರದಾಯವನ್ನು ಕಲಿಯಲು ಹೇಳಿದರು.ಇದು ನನ್ನ ಪಾತ್ರವನ್ನು ಅರಿತುಕೊಳ್ಳಲು ಸಹಾಯವಾಗುತ್ತದೆ ಎಂದರು” ಎಂದಿದ್ದಾರೆ ರಣವೀರ್.




ತನ್ನ ಹೊಸ ಸಿನಿಮಾ ಜಯೇಶ್ ಭಾಯಿ ಜೋರ್ ದಾರ್ ಕುರಿತು ಮಾತನಾಡಿರುವ ಅವರು ” ಈ ಸ್ಕ್ರಿಪ್ಟ್ ನ ಹೊಸ ವಸ್ತು ಏನೆಂದರೆ ನಾನು ಈ ರೀತಿಯ ಕಥೆ ಇದುವರೆಗೂ ಕೇಳಿರಲಿಲ್ಲ. ಕಥೆ ವಿವರಿಸಿದಾಗ ನನಗೆ ಒಟ್ಟಿಗೆ ನಗು ಹಾಗೂ ಅಳು ಬಂತು. ಇದು ಅಪರೂಪದ ಚಿತ್ರ. ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ, ಮೊದಲ ಬಾರಿಗೆ ನನ್ನ ಜೀವನದಲ್ಲಿ ಕಥೆ ಕೇಳಿದ ತಕ್ಷಣವೇ ಓಕೆ ಎಂದು ಹೇಳಿರುವುದು. ನಾನು ಈ ಸಿನಿಮಾ ಮಾಡುತ್ತೇನೆ ” ಎಂದು ಹೇಳಿದೆ” ಎಂದಿದ್ದಾರೆ.






