- March 16, 2022
ಟಕ್ಕರ್ ನೀಡಲು ಬರುತ್ತಿದ್ದಾರೆ ರಂಜನಿ


ನಟಿ ರಂಜನಿ ರಾಘವನ್ ಹಾಗೂ ನಟ ಮನೋಜ್ ಅಭಿನಯದ “ಟಕ್ಕರ್” ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಕೊರೋನಾ ವೈರಸ್ ನ ಹಾವಳಿಯಿಂದಾಗಿ ಎರಡು ಬಾರಿ ಟಕ್ಕರ್ ಸಿನಿಮಾ ಬಿಡುಗಡೆಯಾಗುವುದು ಮುಂದಕ್ಕೆ ಹೋಗಿತ್ತು. ಇಲ್ಲ ಎಂದಿದ್ದರೆ ಈಗಾಗಲೇ ಈ ಸಿನಿಮಾ ತೆರೆ ಮೇಲೆ ಬರಬೇಕಿತ್ತು. ಇದೀಗ ಚಿತ್ರದ ಬಿಡುಗಡೆಯೂ ಕೊರೊನಾದಿಂದಾಗಿ ತಡವಾಗಿದೆ.


ಮೇ ತಿಂಗಳಲ್ಲಿ ರಿಲೀಸ್ ಆಗಲಿರುವ ಈ ಚಿತ್ರವು ಸೈಬರ್ ಕ್ರೈಂ ಗೆ ಸಂಬಂಧಿಸಿದ್ದಾಗಿದೆ. ಥ್ರಿಲ್ಲರ್ ಜೊತೆಗೆ ಭರ್ಜರಿ ಆಕ್ಷನ್ ಈ ಸಿನಿಮಾದ ಹೈಲೈಟ್ ಹೌದು. ಇದರ ಜೊತೆಗೆ ಮನಸ್ಸಿಗೆ ಹಿತವೆನಿಸುವಂತಹ ಹಾಡುಗಳ ಮೂಲಕ ವೀಕ್ಷಕರಿಗೆ ಟಕ್ಕರ್ ನೀಡಲು ತಯಾರಾಗಿದೆ ಸಿನಿ ತಂಡ.


ರಘುಶಾಸ್ತ್ರಿ ನಿರ್ದೇಶನದ ಈ ಚಿತ್ರಕ್ಕೆ ನಾಗೇಶ್ ಕೋಗಿಲು ನಿರ್ಮಾಪಕರಾಗಿದ್ದಾರೆ. ಸಿನಿಮಾದ ಡ್ಯುಯೆಟ್ ಹಾಡು ಈಗಾಗಲೇ ರಿಲೀಸ್ ಆಗಿದ್ದು ಉಳಿದ ಹಾಡುಗಳು ಶೀಘ್ರದಲ್ಲೇ ರಿಲೀಸ್ ಆಗಲಿದೆ. ಕದ್ರಿ ಮಣಿಕಾಂತ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.








