• July 3, 2022

ವಿಲನ್ ರೋಲ್ ಮಾಡುವ ಆಸೆ – ರಣಬೀರ್ ಕಪೂರ್

ವಿಲನ್ ರೋಲ್ ಮಾಡುವ ಆಸೆ – ರಣಬೀರ್ ಕಪೂರ್

ಜುಲೈ 22ರಂದು ತೆರೆ ಕಾಣಲಿರುವ ಸಂಶೀರ ಸಿನಿಮಾದ ಮೂಲಕ ರಣಬೀರ್ ಕಪೂರ್ ತನ್ನ ನಟನೆಯ ಹೊಸ ಆಯಾಮವನ್ನು ಪ್ರೇಕ್ಷಕರಿಗೆ ತೋರಿಸಲು ಸಜ್ಜಾಗಿ ನಿಂತಿದ್ದಾರೆ. ಟ್ರೇಲರ್ ಮೂಲಕವೇ ಎಲ್ಲರ ಮನ ಗೆದ್ದಿರುವ ಸಂಶೀರ ಇನ್ನೇನು ಥಿಯೇಟರ್ ನಲ್ಲಿ ಎಲ್ಲರನ್ನು ಮನರಂಜಿಸಲು ಕೆಲವೇ ದಿನ ಉಳಿದಿದೆ. ಈ ಸಿನಿಮಾದಲ್ಲಿ ಸಂಜಯ್ ದತ್ ವಿರುದ್ಧ ಕಣಕ್ಕಿಳಿದಿರುವ ರಣಬೀರ್ ಕಪೂರ್ ರನ್ನು ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ.

‘ಆರ್ ಕೆ ಟ್ಯಾಪ್ಸ್’ ನ ಮೂರು ಎಪಿಸೋಡ್ ಗಳ ಕ್ಯಾಂಡಿಡ್ ವೀಡಿಯೋದಲ್ಲಿ ಮೂರನೇ ವೀಡಿಯೋದಲ್ಲಿ ವಿಲನ್ ಗಳ ಬಗ್ಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿರುವ ರಣಬೀರ್ ”ಎತ್ತರದಲ್ಲಿರುವ ವಿಲನ್ ಗಳು ಹೀರೋಗಳನ್ನು ಇನ್ನೂ ಎತ್ತರಕ್ಕೆ ಏರಿಸುತ್ತಾರೆ”ಎಂದರು.

ತಮ್ಮ ಫೇವರೆಟ್ ವಿಲನ್ ಗಳನ್ನು ಪಟ್ಟಿ ಮಾಡುತ್ತಾ ಹೋದ ಅವರು, ಶೋಲಿ ಸಿನಿಮಾದಲ್ಲಿ ಗಬ್ಬರ್ ಸಿಂಗ್ ಪಾತ್ರದ ಅಮ್ಜದ್ ಖಾನ್, ಮಿಸ್ಟರ್ ಇಂಡಿಯಾ ಸಿನಿಮಾದ ಮೊಘ್ಯಾಂಬೋ ಪಾತ್ರದ ಅಮರೀಶ್ ಪುರಿ,
ಅಗ್ನಿಪತ್ ನ ಕಾಂಚ ಚೀನಾ ಪಾತ್ರದ ಸಂಜಯ್ ದತ್, ಪದ್ಮಾವತ್ ನ ಅಲ್ಲಾವುದ್ದೀನ್ ಖಿಲ್ಜಿ ರನ್ ಬೀರ್ ಸಿಂಗ್, ಡರ್ ಸಿನಿಮಾದ ಶಾರುಖ್ ಖಾನ್ ಹೀಗೆ ಹೇಳುತ್ತಾ ಹೋಗುತ್ತಾರೆ.

ರಣಬೀರ್ ಹೇಳುವ ಪ್ರಕಾರ ”ನಾವು ಏಕರೂಪವಾಗಿ ನಾಯಕನ ಪಾತ್ರವನ್ನು ನಿಭಾಯಿಸುತ್ತಾ ಹೋಗುತ್ತೇವೆ. ಒಂದು ವೇಳೆ ನಾಯಕನ ಹೀರೋಯಿಸಂ ತೋರಿಸಲು ಖಳನಾಯಕನ ಪಾತ್ರ ಇಲ್ಲವೆಂದಾದಲ್ಲಿ ಒಬ್ಬ ನಾಯಕ ಹೇಗೆ ತಾನೇ ನಾಯಕನಾಗಬಲ್ಲ? ನನಗೊಂದು ಕನಸಿದೆ, ಒಂದು ದಿನ ನಾನು ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಳ್ಳಬೇಕು. ಜನರು ತಮ್ಮ ಮಕ್ಕಳಿಗೆ ಮಲಗಿ ನಿದ್ರಿಸಿ ಇಲ್ಲವಾದಲ್ಲಿ ರಣಬೀರ್ ಬರುತ್ತಾನೆ ಎನ್ನುವಂತಿರಬೇಕು. ಸಿನಿಮಾ ಕ್ಷೇತ್ರ ವಿಕಾಸಗೊಳ್ಳುತ್ತಿದ್ದಂತೆ ವಿಲನ್ ಗಳ ಪಾತ್ರವೂ ಸಂಕೀರ್ಣ ಹಾಗೂ ಆಸಕ್ತಿದಾಯಕವಾಗುತ್ತಿದೆ. ನಮ್ಮನ್ನು ಕುಳಿತಲ್ಲಿಂದಲೇ ಭಯಪಡಿಸಬಲ್ಲ, ದುಷ್ಟ ಶಕ್ತಿಯನ್ನು ಮರು ವ್ಯಾಖ್ಯಾನಿಸಬಲ್ಲ ವಿಲನ್ಗಾಗಿ ನಾನು ಎದುರು ನೋಡುತ್ತಿದ್ದೇನೆ” ಎಂದರು.

ಇನ್ನು ಸಿನಿಮಾ ಕುರಿತು ಹೇಳುವುದಾದರೆ ಜನರಲ್ ಶುದ್ಧ್ ಸಿಂಗ್ ಎಂಬ ನಿರ್ದಯ ಸರ್ವಾಧಿಕಾರಿಯ ಬಂಧನಕೊಳ್ಳಗಾದ, ಗುಲಾಮಗಿರಿಯನ್ನು ಅನುಭವಿಸಿದ, ಚಿತ್ರಹಿಂಸೆಗೆ ಒಳಗಾದ ಬುಡಕಟ್ಟು ಯೋಧರ ಗುಂಪೊಂದರ ಕಥೆಯನ್ನು ಸಂಶೀರ ಪ್ರತಿನಿಧಿಸುತ್ತದೆ.

ಈ ಕಥೆಯು ಒಬ್ಬ ಮನುಷ್ಯ ಗುಲಾಮನಾಗಿ, ಗುಲಾಮನಿಂದ ನಾಯಕನಾಗಿ, ನಂತರ ಅವನ ಗುಂಪಿಗೋಸ್ಕರ ದಂತ ಕತೆಯಾಗುವ ರೀತಿಯಲ್ಲಿ ಸಾಗುತ್ತದೆ. ತನ್ನ ಜನರ ಸ್ವಾತಂತ್ರ್ಯ ಹಾಗೂ ಘನತೆಗೋಸ್ಕರ ಹೋರಾಡುವ ನಾಯಕನ ಪಾತ್ರವೇ ಸಂಶೀರ.

ಹಿಂದೆಂದೂ ಕಾಣದಂತ ಪಾತ್ರವನ್ನು ನಿರ್ವಹಿಸಲು ಹೊರಟಿದ್ದಾರೆ ರಣಬೀರ್ ಕಪೂರ್ .ಅಲ್ಲದೆ ಸಂಜಯ್ ದತ್ ಹಾಗೂ ರಣಬೀರ್ ಕರುಣೆ ಇಲ್ಲದೆ ಒಬ್ಬರಿಗೊಬ್ಬರು ಉಗ್ರವಾಗಿ ಮುಖಾಮುಖಿಯಾಗುವುದನ್ನು ನೋಡಲು ಎಲ್ಲರೂ ಕಾತರರಾಗಿದ್ದಾರೆ.