• May 28, 2022

ಲವರ್ ಬಾಯ್ ಆಗಿ ತೆರೆ ಮೇಲೆ ಬರಲಿದ್ದಾರೆ ಕಿರುತೆರೆಯ ರಣಧೀರ

ಲವರ್ ಬಾಯ್ ಆಗಿ ತೆರೆ ಮೇಲೆ ಬರಲಿದ್ದಾರೆ ಕಿರುತೆರೆಯ ರಣಧೀರ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಉತ್ತರ ಕನ್ನಡ ಸೊಬಗಿನ ಗಿಣಿರಾಮ ಧಾರಾವಾಹಿಯಲ್ಲಿ ಖಳನಾಯಕ ರಣಧೀರ ಆಗಿ ಅಭಿನಯಿಸುತ್ತಿರುವ ರಾಮ್ ಪವನ್ ಶೇಟ್ ಅವರು ಇದೀಗ ಲವರ್ ಬಾಯ್ ಆಗಿ ರಂಜಿಸಲು ತಯಾರಾಗಿದ್ದಾರೆ. ಇಷ್ಟು ದಿನಗಳ ಕಾಲ ಖಡಕ್ ವಿಲನ್ ಆಗಿ ತೆರೆ ಮೇಲೆ ಅಬ್ಬರಿಸುತ್ತಿದ್ದ ರಾಮ್ ಪವನ್ ಶೇಟ್ ಇದೇ ಮೊದಲ ಬಾರಿಗೆ ಲವರ್ ಬಾಯ್ ಆಗಿ ವೀಕ್ಷಕರ ಮುಂದೆ ಬರಲಿದ್ದಾರೆ.

ಅಂದ ಹಾಗೇ ರಾಮ್ ಪವನ್ ಶೇಟ್ ಲವರ್ ಬಾಯ್ ಆಗಿ ನಟಿಸುತ್ತಿರುವುದು ಕಿರುತೆರೆಯಲ್ಲಿ ಅಲ್ಲ, ಬದಲಿಗೆ ಹಿರಿತೆರೆಯಲ್ಲಿ. ಇಂದು ಬಿಡುಗಡೆಯಾಗಿರುವ ಕಿರಿಕ್ ಶಂಕರ್ ಸಿನಿಮಾದಲ್ಲಿ ರಾಮ್ ಪವನ್ ಶೇಟ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಲೂಸ್ ಮಾದ ಯೋಗಿ ನಾಯಕರಾಗಿ ನಟಿಸಿರುವ ಈ ಸಿನಿಮಾದಲ್ಲಿ ರಾಮ್ ಪವನ್ ಅವರು ಲೂಸ್ ಮಾದ ಅವರ ಸ್ನೇಹಿತ ಆಗಿ ನಟಿಸಲಿದ್ದಾರೆ. ಪಾತ್ರದ ಬಗ್ಗೆ ಮಾತನಾಡಿರುವ ಅವರು “ಈ ಸಿನಿಮಾದಲ್ಲಿ ನಾನು ಲೂಸ್ ಮಾದ ಸ್ನೇಹಿತ ಆಗಿ ಕಾಣಿಸಿಕೊಳ್ಳಲಿದ್ದೇನೆ. ಇದರಲ್ಲಿ ನಾನು ಶಶಿ ಎನ್ನುವ ಕ್ಯಾರೆಕ್ಟರ್ ಮಾಡುತ್ತಿದ್ದೇನೆ. ಕಾಮಿಡಿಯ ಜೊತೆಗೆ ಲವರ್ ಬಾಯ್ ಆಗಿ ನಟಿಸುತ್ತಿದ್ದು, ಪಾತ್ರ ತುಂಬಾ ಚೆನ್ನಾಗಿದೆ” ಎನ್ನುತ್ತಾರೆ.