• May 1, 2022

ಮತ್ತೆ ಸಿನಿಮಾದಲ್ಲಿ ನಟಿಸಲಿದ್ದಾರಾ ರಮ್ಯಾ

ಮತ್ತೆ ಸಿನಿಮಾದಲ್ಲಿ ನಟಿಸಲಿದ್ದಾರಾ ರಮ್ಯಾ

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಚಿತ್ರರಂಗದಿಂದ ದೂರವಾಗಿ ಕೆಲವು ವರ್ಷಗಳೇ ಕಳೆದಿವೆ. ಸಿನಿಮಾ ನಟನೆಯಿಂದ ದೂರ ಉಳಿದಿರುವ ರಮ್ಯಾ ಅವರನ್ನು ಮತ್ತೆ ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ರಮ್ಯಾ ಸಿನಿ ಕೆರಿಯರ್ ಆರಂಭಿಸಿ ಎಪ್ರಿಲ್ 25ಕ್ಕೆ 19 ವರ್ಷಗಳು ಕಳೆದಿವೆ.

ಪುನೀತ್ ರಾಜ್ ಕುಮಾರ್ ನಟನೆಯ ಅಭಿ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟ ರಮ್ಯಾ ಮುಂದೆ ಸ್ಟಾರ್ ನಟಿಯಾಗಿ ಬೆಳೆದರು. ನಟಿಸಿದ ಮೊದಲ ಸಿನಿಮಾ ಅಭಿ ಹಿಟ್ ಆಗಿತ್ತು. ಹೀಗಾಗಿ ಚಂದನವನದಲ್ಲಿ ಅವರಿಗೆ ಬೇಡಿಕೆ ಹೆಚ್ಚಾಯಿತು. ಸಾಲು ಸಾಲು ಚಿತ್ರಗಳಲ್ಲಿ ನಟಿಸಿದರು. ಬಹು ಬೇಡಿಕೆಯ ನಟಿಯಾಗಿ ಬೆಳೆದ ರಮ್ಯಾ ಅವರಿಗೆ ಪರಭಾಷೆಗಳಿಂದಲೂ ಆಫರ್ಸ್ ಬರತೊಡಗಿದವು.

ಇಂತಿಪ್ಪ ರಮ್ಯಾ ಪ್ರೈಮರಿ ಶಿಕ್ಷಣ ಊಟಿಯಲ್ಲಿ ಹಾಗೂ ಪ್ರೌಢ ಶಿಕ್ಷಣ ಚೆನ್ನೈಯಲ್ಲಿ ಮುಗಿಸಿದರು. ಅಪ್ಪು ಸಿನಿಮಾ ಮೂಲಕ ಲಾಂಚ್ ಆಗಬೇಕಿದ್ದ ರಮ್ಯಾ ಕಾರಣಾಂತರಗಳಿಂದ ಅಭಿ ಸಿನಿಮಾ ಮೂಲಕ ಕೆರಿಯರ್ ಆರಂಭಿಸಿದರು. ಅಪ್ಪು ಸಿನಿಮಾದಲ್ಲಿ ರಕ್ಷಿತಾ ನಟಿಸಿದರು.

ಅಭಿ ಸಿನಿಮಾದ ನಂತರ ಜೋಗಿ ಪ್ರೇಮ್ ನಿರ್ದೇಶನದ ಎಕ್ಸ್ ಕ್ಯೂಸ್ ಮಿ ಚಿತ್ರದಲ್ಲಿ ನಟಿಸಿದರು. ನಂತರ ತೆಲುಗು ಚಿತ್ರರಂಗ ಪ್ರವೇಶಿಸಿದ ರಮ್ಯಾ ಅಲ್ಲಿಯೂ ಯಶಸ್ಸು ಗಳಿಸಿದರು. ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಸ್ಯಾಂಡಲ್ ವುಡ್ ಪದ್ಮಾವತಿ ನಂತರ ರಾಜಕೀಯ ಪ್ರವೇಶಿಸಿದರು. ಮಂಡ್ಯದಲ್ಲಿ ಸಂಸದೆ ಆಗಿ ಕೆಲಸ ಮಾಡಿದರು.

ಸದ್ಯ ಹಲವು ಕಥೆಗಳನ್ನು ಕೇಳುತ್ತಿರುವ ರಮ್ಯಾ ಮತ್ತೆ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ. ಈ ವಿಷಯ ಅಭಿಮಾನಿಗಳಿಗೆ ಖುಷಿ ನೀಡಿದೆ.