• March 4, 2022

ನಿಮ್ಮ ಯಶಸ್ಸಿನ ಬಗ್ಗೆ ಹೆಮ್ಮೆ ಇದೆ ಎಂದ ಮೋಹಕತಾರೆ… ಯಾರ ಬಗ್ಗೆ ಹೇಳಿದ್ದು ಗೊತ್ತಾ?

ನಿಮ್ಮ ಯಶಸ್ಸಿನ ಬಗ್ಗೆ ಹೆಮ್ಮೆ ಇದೆ ಎಂದ ಮೋಹಕತಾರೆ… ಯಾರ ಬಗ್ಗೆ ಹೇಳಿದ್ದು ಗೊತ್ತಾ?

ಚಂದನವನದ ಕ್ವೀನ್ ರಮ್ಯಾ ಸದ್ಯ ಚಿತ್ರರಂಗದಿಂದ ವಿರಾಮ ಪಡೆದಿದ್ದರೂ ಉತ್ತಮ ಸಿನಿಮಾ ಬಂದಾಗ ನೋಡುವುದನ್ನು ಮರೆಯುವುದಿಲ್ಲ. ಸದ್ಯ ಕನ್ನಡದಲ್ಲಿ ಬಿಡುಗಡೆಯಾಗಿರುವ ಚಿತ್ರವನ್ನು ರಮ್ಯಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಳೆದ ವಾರ ಬಿಡುಡೆಯಾಗಿ ಪ್ರೇಕ್ಷಕರ ಮನಗೆದ್ದ ಶ್ರೀನಿ ಹಾಗೂ ಅದಿತಿ ಪ್ರಭುದೇವ ನಟನೆಯ ಓಲ್ಡ್ ಮಾಂಕ್ ಚಿತ್ರ ರಮ್ಯಾ ನೋಡಿದ್ದಾರೆ. ಅವರಿಗಾಗಿಯೇ ನಿರ್ದೇಶಕ ಹಾಗೂ ನಟ ಶ್ರೀನಿ ಸ್ಪೆಷಲ್ ಅರೆಂಜ್ ಮಾಡಿ ಸಿನಿಮಾ ತೋರಿಸಿದ್ದರು. ಸಿನಿಮಾ ನೋಡಿ ಎಂಜಾಯ್ ಮಾಡಿದ್ದೇನೆ ಎಂದು ರಮ್ಯಾ ಅಭಿಪ್ರಾಯ ತಿಳಿಸಿದ್ದಾರೆ. ಇನ್ನು ಇದರ ಜೊತೆಗೆ ಶ್ರೀನಿ ಅವರ ಪ್ರತಿಭೆಯನ್ನು ಹೊಗಳಿರುವ ರಮ್ಯಾ “ನಾಯಕನಾಗಿಯಾಗಲೀ, ನಿರ್ದೇಶಕನಾಗಿಯಾಗಲೀ ನೀವು ಯಶಸ್ಸನ್ನು ಕಂಡಿದ್ದೀರಿ. ನಿಮ್ಮ ಈ ಯಶಸ್ಸು ನನಗೆ ಖುಷಿ ತಂದಿದೆ” ಎಂದು ಹೇಳಿದ್ದಾರೆ ಮೋಹಕ ತಾರೆ.

ಅಂದ ಹಾಗೇ ರಮ್ಯಾ ಹಾಗೂ ಕಿಚ್ಚ ಸುದೀಪ್ ಅಭಿನಯದ ಜಸ್ಟ್ ಮಾತ್ ಮಾತಲ್ಲಿ ಚಿತ್ರದಲ್ಲಿ ರಮ್ಯಾ ಅವರ ಸಹೋದರನ ಪಾತ್ರದಲ್ಲಿ ಶ್ರೀನಿ ಕಾಣಿಸಿಕೊಂಡಿದ್ದರು. ಇದೀಗ ಹಳೆಯ ದಿನಗಳನ್ನು ಮತ್ತೊಮ್ಮೆ ನೆನಪಿಸಿಕೊಂಡಿರುವ ರಮ್ಯಾ “ಅಲ್ಲಿಂದ ಇಲ್ಲಿಯ ತನಕದ ನಿನ್ನ ಯಶಸ್ಸಿನ ಬಗ್ಗೆ ಹೆಮ್ಮೆ ಇದೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.