- June 10, 2022
ವಿಕ್ರಾಂತ್ ರೋಣ ಮೆಚ್ಚಿದ ರಮೇಶ್ ಅರವಿಂದ್ ಹೇಳಿದ್ದೇನು ಗೊತ್ತಾ?


ಕಿಚ್ಚ ಸುದೀಪ್ ನಟನೆಯ, ಅನೂಪ್ ಭಂಡಾರಿ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣವು ಸಿನಿಮಾ ರಂಗದಲ್ಲಿ ಹೊಸ ಹವಾ ಸೃಷ್ಟಿ ಮಾಡುವುದರಲ್ಲಿ ಎರಡು ಮಾತಿಲ್ಲ. ಕಿಚ್ಚ ಸುದೀಪ್ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾದ ಬಿಡುಗಡೆಗಾಗಿ ಸಿನಿ ಪ್ರಿಯರು ಅದರಲ್ಲೂ ಕಿಚ್ಚನ ಅಭಿಮಾನಿಗಳಂತೂ ತುದಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.




ಇನ್ನು ವಾರದ ಹಿಂದೆಯಷ್ಟೇ ವಿಕ್ರಾಂತ್ ರೋಣ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿರುವ ಚಂದನವನದ ಚೆಂದದ ನಟ ರಮೇಶ್ ಅರವಿಂದ್ ಅವರು ಇದೀಗ ವಿಕ್ರಾಂತ್ ರೋಣ ಸಿನಿಮಾದ ವಿಮರ್ಶೆ ಮಾಡಿದ್ದಾರೆ. ಮಾತ್ರವಲ್ಲ ವಿಕ್ರಾಂತ್ ರೋಣ ನೋಡಿದ ಮೊದಲ ಸೆಲೆಬ್ರಿಟಿ ಎಂಬ ಹೆಗ್ಗಳಿಕೆಗೆ ರಮೇಶ್ ಅರವಿಂದ್ ಪಾತ್ರರಾಗಿದ್ದಾರೆ.




“ತನ್ನ ಸಿನಿಮಾ ಬಿಡುಗಡೆಯಾಗುವ ಮೊದಲೇ ಅದನ್ನು ತೋರಿಸುವುದಕ್ಕೂ ನಟನಾದವನಿಗೆ ಧೈರ್ಯ ಬೇಕು. ಆ ಧೈರ್ಯ ಕಿಚ್ಚನಲ್ಲಿದೆ. ನನ್ನನ್ನು ಮನೆಗೆ ಕರೆಯಿಸಿಕೊಂಡಿದ್ದ ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಸಿನಿಮಾವನ್ನು ತೋರಿಸಿದರು. ಸಿನಿಮಾದ ಬಗ್ಗೆ ಎರಡು ಮಾತಿಲ್ಲ. ವಿಕ್ರಾಂತ್ ರೋಣ ತುಂಬಾ ಉತ್ತಮವಾಗಿ ಮೂಡಿ ಬಂದಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಒಂದು ಚೆಂದದ ಪ್ಯಾಂಟಸಿ ಲೋಕವನ್ನೇ ಇವರು ಸೃಷ್ಟಿ ಮಾಡಿದ್ದಾರೆ.


ಜೊತೆಗೆ ಇದು ವೀಕ್ಷಕರಲ್ಲಿ ಕುತೂಹಲ ಮೂಡಿಸುವಂತಹ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಸಿನಿಮಾ” ಎಂದು ವಿಕ್ರಾಂತ್ ರೋಣದ ವಿಮರ್ಶೆ ಮಾಡಿದ್ದಾರೆ ರಮೇಶ್ ಅರವಿಂದ್.




