• February 15, 2022

ರಾಮ್ ಚರಣ್ ಕಾರಿಗೆ ಮುತ್ತಿಗೆ ಹಾಕಿದ ಅಭಿಮಾನಿಗಳು !

ರಾಮ್ ಚರಣ್ ಕಾರಿಗೆ ಮುತ್ತಿಗೆ ಹಾಕಿದ ಅಭಿಮಾನಿಗಳು !

ಟಾಲಿವುಡ್ ನ ಚೆರಿ …ಸ್ಟಾರ್ ನಟ ರಾಮ್ ಚರಣ್ ಸದ್ಯ ತಮ್ಮ ಆರ್ ಆರ್ ಆರ್ ಸಿನಿಮಾದ‌ ಬಿಡುಗಡೆಯ ತಯಾರಿಯಲ್ಲಿದ್ದಾರೆ ..ಈಗಾಗಲೇ ಹಾಡುಗಳು ಮತ್ತು ಟೀಸರ್ ನಿಂದ ಧೂಳೆಬ್ಬಿಸಿರುವ ಆರ್ ಆರ್ ಆರ್ ಸಿನಿಮಾ ನೋಡಲು ಪ್ರೇಕ್ಷಕರು ಕಾತುರದಿಂದ ಕಾದಿದ್ದಾರೆ… ನಟ ರಾಮ್ ಚರಣ್ ಇತ್ತೀಚೆಗಷ್ಟೇ ತಮ್ಮ ಮುಂದಿನ ಸಿನಿಮಾದ ಚಿತ್ರೀಕರಣಕ್ಕಾಗಿ ಆಂಧ್ರಪ್ರದೇಶದ ರಾಜಮಂಡ್ರಿಗೆ ತೆರಳಿದ್ದರು…
ರಾಮ್ ಚರಣ್ ರಾಜಮುಂಡ್ರಿಗೆ ಬಂದಿಳಿಯುತ್ತಿದ್ದಂತೆ ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಲು ಮುಗಿಬಿದ್ದಿದ್ದಾರೆ
..

ರಾಮ್ ಚರಣ್ ಏರ್ಪೋರ್ಟ್ನಿಂದ ಹೋಟೆಲ್ ಗೆ ತೆರಳುವ ಮಾರ್ಗದ ಮಧ್ಯದಲ್ಲಿ ಅಭಿಮಾನಿಗಳು ರಸ್ತೆಯುದ್ದಕ್ಕೂ ರಾಮ್ ಚರಣ್ ಕಾರನ್ನು ತಡೆದು ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ…ರಾಮ್ ಚರಣ್ ಅಭಿನಯದ ಮುಂದಿನ ಸಿನಿಮಾದ ಚಿತ್ರೀಕರಣ ರಾಜಮುಂಡ್ರಿಯಲ್ಲಿ ನಡೆಯುತ್ತಿದೆ… ಚಿತ್ರಕ್ಕೆ ಆರ್ ಸಿ‌15 ಎಂದು ಟೈಟಲ್ ಇಟ್ಟಿದ್ದು …ಶಂಕರ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ …ಕಾರ್ತಿಕ್ ಸುಬ್ಬರಾಜು ನಿಮಗೆ ಸಿನಿಮಾಗೆ ಕಥೆ ಬರೆದಿದ್ದಾರೆ

ಆಂಧ್ರದ ತುಂಬೆಲ್ಲಾ ಮೆಗಾ ಫ್ಯಾಮಿಲಿ ಗೆ ಸಾಕಷ್ಟು ಅಭಿಮಾನಿಗಳಿದ್ದು …ಇನ್ನು ಮುಂದಿನ ಸಿನಿಮಾದಲ್ಲಿ ಶಂಕರ್ ಕಾಂಬಿನೇಷನ್ ಇರೋದ್ರಿಂದ ಅಭಿಮಾನಿಗಳಿಗೆ ಮತ್ತಷ್ಟು ಕುತೂಹಲ ಹೆಚ್ಚಾಗಿದೆ ..ಇನ್ನೂ ರಾಜಮುಂಡ್ರಿ ಅಭಿಮಾನಿಗಳ ಪ್ರೀತಿಯನ್ನು ಕಂಡು ರಾಮ್ ಚರಣ್ ಫುಲ್ ಖುಷಿಯಾಗಿದ್ದಾರೆ …