• July 9, 2022

‘ಪೊನ್ನಿಯಿನ್ ಸೆಲ್ವನ್’ ಜೊತೆ ಕೈ ಜೋಡಿಸಿದ ರಕ್ಷಿತ್ ಶೆಟ್ಟಿ.

‘ಪೊನ್ನಿಯಿನ್ ಸೆಲ್ವನ್’ ಜೊತೆ ಕೈ ಜೋಡಿಸಿದ ರಕ್ಷಿತ್ ಶೆಟ್ಟಿ.

ಭಾರತ ಚಿತ್ರರಂಗಕ್ಕೆ ‘ಪಾನ್-ಇಂಡಿಯಾ ಸಿನಿಮಾ’ ಅನ್ನೋದು ತಮ್ಮದೇ ಒಂದು ಶಬ್ದವಾದಂತಾಗಿದೆ. ಹೊಸ-ಹೊಸ ಸಿನಿಮಾಗಳು ಪಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿ ಯಶಸ್ಸು ಕಾಣುತ್ತಿವೆ. ಇದೀಗ ತಮಿಳು ಚಿತ್ರರಂಗದಿಂದ ದೊಡ್ಡ ಚಿತ್ರವೊಂದು ಪಾನ್-ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಖ್ಯಾತ ನಿರ್ದೇಶಕರಾದ ಮನಿರತ್ನಮ್ ಅವರು ನಿರ್ದೇಶಿಸಿ ನಿರ್ಮಾಣ ಮಾಡುತ್ತಿರುವ ಈ ಸಿನೆಮಾ ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರದ ತಾರಾಗಣ ಹಾಗು ಪೋಸ್ಟರ್ ಗಳಿಂದ ಎಲ್ಲೆಡೆ ಸದ್ದು ಮಾಡುತ್ತಿದೆ. ಮಣಿರತ್ನಮ್ ಅವರ ‘ಮದ್ರಾಸ್ ಟಾಕೀಸ್’ ಮತ್ತು ‘ಲೈಕಾ ಪ್ರೊಡಕ್ಷನ್ಸ್’ ಸೇರಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಇದೀಗ ರಕ್ಷಿತ್ ಶೆಟ್ಟಿ ಅವರ ಹೆಸರು ಅಂಟಿಕೊಂಡಿದೆ.

ಇದೇ ಸೆಪ್ಟೆಂಬರ್ 30ರಂದು ಬೆಳ್ಳಿತೆರೆಗೆ ಬರುತ್ತಿರುವ ಈ ಚಿತ್ರದ ಟೀಸರ್ ಇಂದು(ಜುಲೈ 8) ಪಂಚಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಆಯಾ ಭಾಷೆಗಳಲ್ಲಿ ಅಲ್ಲಿನ ಸ್ಟಾರ್ ನಟರು ಟೀಸರ್ ಅನ್ನು ಬಿಡುಗಡೆಮಾಡುತ್ತಿದ್ದು, ಕನ್ನಡದಲ್ಲಿ ನಮ್ಮ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯವರು ಇದರ ರೂವಾರಿಯಾಗಲಿದ್ದಾರೆ. ಜುಲೈ 8ರ ಸಂಜೆ 6ಗಂಟೆಗೆ ಟೀಸರ್ ರಿಲೀಸ್ ಆಗುತ್ತಿದ್ದು, ಕನ್ನಡದಲ್ಲಿ ರಕ್ಷಿತ್ ಶೆಟ್ಟಿ, ತಮಿಳಿನಲ್ಲಿ ಸೂರ್ಯ, ಮಲಯಾಳಂ ನಲ್ಲಿ ಮೋಹನ್ ಲಾಲ್, ತೆಲುಗಿನಲ್ಲಿ ಸೂಪರ್ ಸ್ಟಾರ್ ಮಹೇಶ್ ಬಾಬು ಜೊತೆಗೆ ಹಿಂದಿಯಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್ ‘ಪೊನ್ನಿಯಿನ್ ಸೆಲ್ವನ್-1(PS-1)ರ ಟೀಸರ್ ಬಿಡುಗಡೆ ಮಾಡಲಿದ್ದಾರೆ.

ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಗುತ್ತಿದ್ದು, ಮೊದಲನೇ ಭಾಗವನ್ನು ತೆರೆಕಾಣಿಸಲು ಸರ್ವ ಸಿದ್ಧತೆ ನಡೆಯುತ್ತಿದೆ. ಹಲವು ಗಣ್ಯ ನಟರನ್ನು ಒಳಗೊಂಡಿರುವ ತಾರಾಗಣ ಚಿತ್ರದಲ್ಲಿದೆ. ಚಿಯಾನ್ ವಿಕ್ರಮ್, ಬಾಲಿವುಡ್ ನಟಿ ಐಶ್ವರ್ಯ ರೈ, ಕಾರ್ತಿ, ತ್ರಿಶ ಕೃಷ್ಣನ್, ಜಯಂ ರವಿ, ಪ್ರಭು ಶೋಭಿತ ದುಲಿಫಲ ಮುಂತಾದ ಹೆಸರಾಂತ ನಟರು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಇದೇ ಸೆಪ್ಟೆಂಬರ್ 30ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದ್ದು, ಇಂದು ಟೀಸರ್ ರಿಲೀಸ್ ಆಗಲಿದೆ. ಈ ಐತಿಹಾಸಿಕ ಸಿನಿಮಾದ ಮೇಲೆ ಸಿನಿರಸಿಕರೆಲ್ಲರೂ ಮುಗಿಲೆತ್ತರದ ನಿರೀಕ್ಷೆ ಇಟ್ಟಿದ್ದಾರೆ.