• June 18, 2022

ಶಿವಣ್ಣ-ರಜನಿ ಕಾಂಬಿನೇಶನ್ ಗೆ ಟೈಟಲ್ ಫಿಕ್ಸ್.

ಶಿವಣ್ಣ-ರಜನಿ ಕಾಂಬಿನೇಶನ್ ಗೆ ಟೈಟಲ್ ಫಿಕ್ಸ್.

ಸೂಪರ್ ಸ್ಟಾರ್ ರಜನಿಕಾಂತ್ ಹಾಗು ‘ಕರುನಾಡ ಚಕ್ರವರ್ತಿ’ ಶಿವರಾಜಕುಮಾರ್ ಜೊತೆಯಾಗಿ ನಟಿಸಲಿದ್ದಾರೆ, ಇದೊಂದು ಪಕ್ಕ ಆಕ್ಷನ್-ಡ್ರಾಮಾ ರೀತಿಯ ಸಿನಿಮಾ ಆಗಿರಲಿದೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ರೋಮಾಂಚನ ಹುಟ್ಟಿಸಿತ್ತು. ಸಿನಿಮಾದ ಬಗೆಗಿನ ಮುಂದಿನ ಅಪ್ಡೇಟ್ ಗೆ ಎಲ್ಲರು ಕಾಯುತ್ತಿದ್ದರು. ಈಗ ಈ ಚಿತ್ರಕ್ಕೆ ಶೀರ್ಷಿಕೆ ಇಟ್ಟಾಗಿದೆ. ರಜನಿಕಾಂತ್ ಅವರ 169ನೇ ಚಿತ್ರವಾಗಿದ್ದರಿಂದ ಇಲ್ಲಿವರೆಗೂ ಈ ಸಿನಿಮಾವನ್ನ ‘ತಲೈವರ್169’ ಎಂದು ಕರೆಯುತ್ತಿದ್ದರು. ಇನ್ನು ಮುಂದೆ ‘ಜೈಲರ್’ ಎಂದು ಕರೆಯಲಾಗುತ್ತದೆ.

ತಮಿಳಿನ ‘ಡಾಕ್ಟರ್’ ಹಾಗು ‘ಬೀಸ್ಟ್’ ಸಿನಿಮಾಗಳ ಖ್ಯಾತಿಯ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಈ ಸಿನಿಮಾದ ಸೃಷ್ಟಿಕರ್ತ. ಅವರೇ ರಚಿಸಿ-ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ರಜನಿಕಾಂತ್ ಹಾಗು ಶಿವಣ್ಣ ಜೊತೆಯಾಗಿ ನಟಿಸಲಿದ್ದಾರೆ. ಈ ಸಿನಿಮಾದ ಟೈಟಲ್ ಅನ್ನು ಇದರ ನಿರ್ಮಾಣ ಸಂಸ್ಥೆ ‘ಸನ್ ಪಿಕ್ಚರ್ಸ್’ ರಗಡ್ ಪೋಸ್ಟರ್ ಒಂದನ್ನು ಬಿಡುಗಡೆಗೊಳಿಸಿ ಅನಾವರಣಗೊಳಿಸಿದೆ. ಕಟ್ಟಿಯೊಂದನ್ನು ತೂಗು ಹಾಕಿರುವ ರೀತಿಯ ಚಿತ್ರವೊಂದರ ಜೊತೆಗೆ ‘ಜೈಲರ್’ ಎಂಬ ಶೀರ್ಷಿಕೆ ಇದೀಗ ಲೋಕಾರ್ಪಣೆಯಾಗಿದೆ.

ಸಿನಿಮಾಗೆ ನಾಯಕಿಯಾಗಿ ಐಶ್ವರ್ಯ ರೈ ನಟಿಸಲಿದ್ದಾರೆ ಎಂಬ ಸುದ್ದಿಯಿದೆ. ‘ರೋಬೊ’ ಸಿನಿಮಾದ ನಂತರ ಇದೀಗ ದಕ್ಷಿಣದ ಸಿನಿಮಾಗಳತ್ತ ಈ ಚಿತ್ರದ ಮೂಲಕ ಐಶ್ವರ್ಯ ಮರಳಲಿದ್ದಾರೆ ಎಂಬ ವಿಚಾರ ಎಲ್ಲೆಡೆ ಓಡಾಡುತ್ತಿದೆ. ಶಿವಣ್ಣ ನಟಿಸುತ್ತಿರುವುದನ್ನು ಸ್ವತಃ ಅವರೇ ಖಾತ್ರಿಪಡಿಸಿದ್ದು, “ರಜನಿಕಾಂತ್ ಅವರು ನಮ್ಮ ಆಪ್ತರು. ಅವರು ನನ್ನನ್ನು ಬಾಲ್ಯದಿಂದಲೇ ನೋಡಿಕೊಂಡು ಬಂದವರು. ಪಾತ್ರ ಹೇಗೇ ಇರಲಿ, ಅವರ ಜೊತೆ ನಟಿಸಲು ನಾನು ಉತ್ಸುಕನಾಗಿದ್ದೇನೆ. ನನ್ನ ಮತ್ತು ಅವರನ್ನು ಜೊತೆಯಾಗಿ ಬೆಳ್ಳಿತೆರೆ ಮೇಲೆ ಕಂಡು ಕನ್ನಡಿಗರು ಖಂಡಿತ ಸಂತುಷ್ಟಾರಾಗುತ್ತಾರೆ” ಎಂದು ಇತ್ತೀಚಿಗಿನ ಸುದ್ದಿಗೋಷ್ಟಿಯಲ್ಲಿ ಹೇಳಿಕೊಂಡಿದ್ದಾರೆ. ಈ ಸಿನಿಮಾಗೆ ಅನಿರುಧ್ ರವಿಚಂದರ್ ಸಂಗೀತವಿರಲಿದ್ದು, ‘ಸನ್ ಪಿಕ್ಚರ್ಸ್’ ನಿರ್ಮಾಣ ಮಾಡುತ್ತಿದೆ.