• March 16, 2022

ಅಪ್ಪು ನಗುವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ – ಪ್ರಿಯಾ ಆನಂದ್

ಅಪ್ಪು ನಗುವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ – ಪ್ರಿಯಾ ಆನಂದ್

ಜೇಮ್ಸ್ ತಂಡದ ಪ್ರತಿಯೊಬ್ಬರೂ ಹೇಳುವಂತೆ ನಟಿ ಪ್ರಿಯಾ ಆನಂದ್ ಕೂಡಾ ಅಪ್ಪು ಜೊತೆ ಕೆಲಸ ಮಾಡಿರುವುದು ವಿಶೇಷ ಎಂದಿದ್ದಾರೆ. ಪ್ರಿಯಾ ಆನಂದ್ ಪುನೀತ್ ಅವರನ್ನು ಪ್ರೀತಿಯಿಂದ ಅಪ್ಪು ಎಂದು ಕರೆಯುತ್ತಾರೆ. ” ಅಪ್ಪು ಅವರೊಡನೆ ಕಳೆದ ಯಾವುದೇ ಸಮಯವಾದರೂ ವಿಶೇಷ. ಅವರನ್ನು ಭೇಟಿಯಾದ ಅಥವಾ ಅವರನ್ನು ದೂರದಿಂದ ನೋಡಿದ ಅಥವಾ ಅವರೊಂದಿಗೆ ಸಂವಹನ ನಡೆಸಿದ ಪ್ರತಿಯೊಬ್ಬರೂ ಕೂಡಾ ಅಪ್ಪು ಚಿಂತನಶೀಲ, ಪ್ರೀತಿ, ಆಹ್ಲಾದಕರ, ದಯೆ ಹಾಗೂ ಉದಾರತನ ಹೊಂದಿರುವವರು ಎಂದು ತಿಳಿದಿದ್ದಾರೆ”ಎನ್ನುತ್ತಾರೆ.

“ಪುನೀತ್ ಅವರೊಂದಿಗೆ ನಾನು ನಟಿಸಿದ ರಾಜಕುಮಾರ ಸಿನಿಮಾ ಹಿಟ್ ಆಗಿತ್ತು. ಸಂತೋಷ್ ಆನಂದ್ ರಾಮ್ ಅವರ ಬಳಿ ರಾಜಕುಮಾರ ಸಿನಿಮಾದಲ್ಲಿ ಕೆಲಸ ಮಾಡುವಾಗ ಉತ್ತಮ ಸಿನಿಮಾ ಎಂದು ಹೇಳಿದ್ದೆ. ಜೇಮ್ಸ್ ಮಾಡುವಾಗಲೂ ಇದೇ ಭಾವನೆ ಇದೆ. ಅಪ್ಪು ಅಭಿಮಾನಿಗಳಿಗೆ ಇದು ದೊಡ್ಡ ಹಬ್ಬ. ಇದು ಅಭಿಮಾನಿಗಳು ಅವರನ್ನು ಪ್ರೀತಿಸುವ ರೀತಿಯನ್ನು ತೋರಿಸುತ್ತದೆ. ಇದರಲ್ಲಿ ಆಕ್ಷನ್ ಕಾಮಿಡಿ ಭಾವನೆಗಳು ಎಲ್ಲ ಇವೆ. ಸ್ವಾಮಿಗಾರು ಅವರ ಫೋಟೋಗ್ರಾಫಿ ಅದ್ಭುತವಾಗಿದೆ” ಎಂದಿದ್ದಾರೆ.

ಜೇಮ್ಸ್ ಸಿನಿಮಾದ ಮೇಲೆ ಹಲವು ನಿರೀಕ್ಷೆಗಳಿವೆ. ” ಈ ಚಿತ್ರ ನಮ್ಮ ಪಾತ್ರವನ್ನು ಮೀರಿದೆ. ಕ್ಯಾಮೆರಾ ಆನ್ ಹಾಗೂ ಆಫ್ ಆಗಿದ್ದಾಗ ನಿಜವಾದ ನಾಯಕನನ್ನು ಆಚರಿಸುವ ದಾರಿಯಿದು. ಈ ಚಿತ್ರದಲ್ಲಿ ದೊಡ್ಡ ಹಾಗೂ ಸಣ್ಣ ಪಾತ್ರ ನಿರ್ವಹಿಸಿದ್ದಾರೆ ಎಂಬುದರ ಬಗ್ಗೆ ಯಾರೂ ಗಮನ ವಹಿಸುವುದಿಲ್ಲ. ಪ್ರತಿಯೊಬ್ಬರೂ ಈ ಸಿನಿಮಾದ ಭಾಗವಾಗಿರುವುದಕ್ಕೆ ಗೌರವ ಹೊಂದಿದ್ದಾರೆ. ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಕ್ಕೆ ಹಾಗೂ ಅಪ್ಪು ಜೊತೆ ಸಮಯ ಕಳೆದಿರುವುದಕ್ಕೆ ಕೃತಜ್ಞರಾಗಿರುತ್ತೇವೆ. ನಾನು ಇದುವರೆಗೂ ಭೇಟಿ ಮಾಡಿದ ಉತ್ತಮ ವ್ಯಕ್ತಿ ಅಪ್ಪು. ನಾನು ಅಪ್ಪು ಬಳಿ ಹೇಳುತ್ತಿದ್ದೆ ಅವರಂತೆ ಯಾರೂ ಮನುಷ್ಯರು ಮಾಡಲಾರರು. ಅದೇ ಅವರನ್ನು ಅಷ್ಟೊಂದು ದೊಡ್ಡ ತಾರೆಯನ್ನಾಗಿ ಮಾಡಿದೆ. ನಿಜ ಅಲ್ವಾ? ದೊಡ್ಡ ತಾರೆಯರಿದ್ದಾರೆ. ಆದರೆ ಅವರಂತೆ ಯಾರೂ ಇಲ್ಲ” ಎಂದಿದ್ದಾರೆ.

“ನಾನು ಯಾವಾಗಲೂ ನಾನು ಎಷ್ಟೊಂದು ಅದೃಷ್ಟಶಾಲಿ ಎಂದುಕೊಳ್ಳುತ್ತಿದ್ದೆ. ಸಾಮಾನ್ಯ, ಮಧ್ಯಮವರ್ಗದ ಹುಡುಗಿ ಇಲ್ಲಿ ಬಂದು ರಾಜಕುಮಾರದಲ್ಲಿ ಹಾಗೂ ಈಗ ಜೇಮ್ಸ್ ಸಿನಿಮಾದಲ್ಲಿ ಕೆಲಸ ಮಾಡಿದೆ. ಅಪ್ಪು ಅವರ ನಗುವನ್ನು ಮರೆಯಲು ಸಾಧ್ಯವಿಲ್ಲ. ಅದು ಪ್ರಾಮಾಣಿಕ ಹಾಗೂ ಹೃದಯದಿಂದ ಬಂದ ನಗು. ಅವರ ಅಗಲಿಕೆ ತುಂಬಾ ನಷ್ಟ. ಎಲ್ಲರೂ ಅಪ್ಪು ಅವರ ಸಿನಿಮಾವನ್ನು ನೋಡಲು ಇಷ್ಟಪಡುತ್ತಾರೆ ಎಂದು ಗೊತ್ತಿದೆ” ಎಂದಿದ್ದಾರೆ.

“ನಾನು ಹಿಂದಿ,ತೆಲುಗು, ತಮಿಳಿನಲ್ಲಿ ನಟಿಸುತ್ತಿದ್ದೇನೆ. ನಾನು ಕನ್ನಡ ಸಿನಿಮಾದಲ್ಲಿ ನಟಿಸಲು ಕಾಯುವುದಿಲ್ಲ. ನನ್ನ ಫೇವರಿಟ್ ಇಂಡಸ್ಟ್ರಿ ” ಎಂದಿದ್ದಾರೆ ಪ್ರಿಯಾ ಆನಂದ್.