• April 29, 2022

ಹೊಸ ಇನ್ನಿಂಗ್ಸ್ ಶುರು ಮಾಡಿದ ತುಪ್ಪದ ಬೆಡಗಿ

ಹೊಸ ಇನ್ನಿಂಗ್ಸ್ ಶುರು ಮಾಡಿದ ತುಪ್ಪದ ಬೆಡಗಿ

ಲವ್ ಗುರು, ಗಾನ ಬಜಾನಾ ಚಿತ್ರಗಳನ್ನು ನಿರ್ದೇಶಿಸಿರುವ ಪ್ರಶಾಂತ್ ರಾಜ್ ನಿರ್ದೇಶನದ ಮೊದಲ ತಮಿಳು ಸಿನಿಮಾದಲ್ಲಿ ನಾಯಕಿಯಾಗಿ ರಾಗಿಣಿ ದ್ವಿವೇದಿ ನಟಿಸುತ್ತಿದ್ದಾರೆ. ಸಂತಾನಂ ನಾಯಕನಾಗಿ ನಟಿಸುತ್ತಿರುವ ಈ ಸಿನಿಮಾದಲ್ಲಿ ತಾನ್ಯಾ ಹೋಪ್ ಕೂಡ ನಾಯಕಿಯಾಗಿ ನಟಿಸುತ್ತಿದ್ದಾರೆ.

” ಈ ಸಿನಿಮಾದಲ್ಲಿ ಭಾಗವಾಗಿರುವುದಕ್ಕೆ ಉತ್ಸುಕಳಾಗಿದ್ದೇನೆ. ಪ್ರಶಾಂತ್ ಅವರೊಂದಿಗೆ ಕೆಲಸ ಮಾಡಲು ಬಯಸಿದ್ದೆ‌. ಇಲ್ಲಿ ಸಂತಾನಂ ಅವರ ಜೊತೆ ನಟಿಸುತ್ತಿದ್ದೇನೆ. ಅವರು ಒಬ್ಬ ಪ್ರತಿಭಾವಂತ ನಟ. ನಾನು ಇಲ್ಲಿ ಗ್ಲಾಮರಸ್ ಪಾತ್ರ ಮಾಡುತ್ತಿದ್ದೇನೆ. ಇದು ಸಿನಿಮಾಕ್ಕೆ ಸ್ಟೈಲಿಶ್ ಟಚ್ ಕೊಡುತ್ತದೆ. ಸುಂದರ್ ಸಿ ಜೊತೆ ಹಳ್ಳಿಗಾಡಿನ ಪಾತ್ರ ನಿರ್ವಹಿಸುವುದರಿಂದ ಇದು ನನಗೆ ಒಳ್ಳೆಯದು” ಎಂದಿದ್ದಾರೆ.

ನಿರ್ದೇಶಕ ಪ್ರಶಾಂತ್ ರಾಜ್ ಕನ್ನಡ ಇಂಡಸ್ಟ್ರಿಯಿಂದ ಮತ್ತೊಂದು ಪ್ರತಿಭೆಯನ್ನು ಈ ಸಿನಿಮಾದಲ್ಲಿ ತೆಗೆದುಕೊಂಡಿರುವುದಕ್ಕೆ ಖುಷಿಯಾಗಿದ್ದಾರೆ.” ನನ್ನ ಸಿನಿಮಾಕ್ಕೆ ತಾನ್ಯಾ ಹಾಗೂ ರಾಗಿಣಿ ನಾಯಕಿಯಾಗಿದ್ದಾರೆ. ರವಿ ವರ್ಮ ಮಾಸ್ಟರ್ ಅವರ ಸ್ಟಂಟ್ , ಸುಧಾಕರ್ ಎಸ್ ರಾಜ್ ಅವರ ಸಿನಿಮಾಟೋಗ್ರಫಿ , ಅರ್ಜುನ್ ಜನ್ಯ ಅವರ ಸಂಗೀತ ಇದೆ” ಎಂದಿದ್ದಾರೆ. ಭಾಗ್ಯರಾಜ್, ಸೆಂಥಿಲ್, ಕೋವೈ ಸರಳಾ ಹಾಸ್ಯ ಕಲಾವಿದರು ಈ ಸಿನಿಮಾದಲ್ಲಿ ಇದ್ದಾರೆ. ಸಿನಿಮಾ ಶೂಟಿಂಗ್ ಬೆಂಗಳೂರು ಸುತ್ತಮುತ್ತ ನಡೆಯಲಿದೆ.