• April 10, 2022

ಸಿನಿ ರಂಗದಲ್ಲಿ ಸಕತ್ ಬ್ಯುಸಿ ತುಪ್ಪದ ಬೆಡಗಿ

ಸಿನಿ ರಂಗದಲ್ಲಿ ಸಕತ್ ಬ್ಯುಸಿ ತುಪ್ಪದ ಬೆಡಗಿ

ವೀರ ಮದಕರಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ನಟಿ ರಾಗಿಣಿ ದ್ವಿವೇದಿ ಈಗಂತೂ ಚಿತ್ರರಂಗದಲ್ಲಿ ಸಕತ್ ಬ್ಯುಸಿ. ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿರುವ ತುಪ್ಪದ ಬೆಡಗಿ ರಾಗಿಣಿ ಕನ್ನಡ ಮಾತ್ರವಲ್ಲದೇ ಪರಭಾಷೆಗಳಿಂದಲೂ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ಕಡೆಯದಾಗಿ ಶರಣ್ ಅವರೊಂದಿಗೆ “ಅಧ್ಯಕ್ಷ ಇನ್ ಅಮೆರಿಕ “ಚಿತ್ರದಲ್ಲಿ ನಟಿಸಿದ್ದ ರಾಗಿಣಿ ಸ್ವಲ್ಪ ಸಮಯ ಬಣ್ಣದ ಜಗತ್ತಿನಿಂದ ದೂರವುಳಿದಿದ್ದರು. ಈಗ ನಟನಾ ಜಗತ್ತಿಗೆ ಮರಳಿರುವ ರಾಗಿಣಿ ಮತ್ತೆ ಪವರ್ ಫುಲ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು.

ವಿಶಾಲ್ ಶೇಖರ್ ನಿರ್ದೇಶನದ “ಕರ್ವ 3” ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಇದರ ಜೊತೆಗೆ ವೇದಿಕ್ ನಿರ್ದೇಶನದ “ಜಾನಿ ವಾಕರ್” ಚಿತ್ರದಲ್ಲಿ ತನಿಖಾ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಗಾಂಧಿಗಿರಿ ಎಂಬ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ.

ಬ್ರಹ್ಮ ನಿರ್ದೇಶನದ “ಸಾರಿ ಕರ್ಮ ರಿಟರ್ನ್ಸ್” ಚಿತ್ರ ಕನ್ನಡ, ಮಲೆಯಾಳಂ, ಹಿಂದಿ ಭಾಷೆಗಳಲ್ಲಿ ಬರುತ್ತಿದ್ದು ಈ ಚಿತ್ರದಲ್ಲಿ ರಾಗಿಣಿ ಎರಡು ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ.ಇದಲ್ಲದೇ ಕಾಲಿವುಡ್ ನ “ಒನ್ ಟು ಒನ್ ” ಚಿತ್ರದಲ್ಲಿಯೂ ನಟಿಸಲಿದ್ದಾರೆ. ಒಟ್ಟಿನಲ್ಲಿ ಕೊಂಚ ಗ್ಯಾಪ್ ನ ನಂತರ ಮತ್ತೆ ನಟನೆಗೆ ಮರಳಿರುವ ರಾಗಿಣಿ ತುಂಬಾ ಬ್ಯುಸಿಯಾಗಿರುವುದಂತೂ ನಿಜ.