- May 4, 2022
ಪೋಲೀಸ್ ಕಮಿಷನರ್ ಆಗಿ ತೆರೆ ಮೇಲೆ ಬರಲಿದ್ದಾರೆ ರಾಧಿಕಾ ನಾರಾಯಣ್


“ಪ್ರತಿಯೊಬ್ಬ ನಟರಿಗೂ ಪರದೆಯ ಮೇಲೆ ಸಮವಸ್ತ್ರ ಧರಿಸುವ ಕನಸು ಕಾಣುತ್ತಾನೆ. ನನ್ನದನ್ನು ನಾನು ಅರಿತುಕೊಂಡದಕ್ಕೆ ನಾನು ಸಂತೋಷ ಪಡುತ್ತೇನೆ” ಎಂದು ನಟಿ ರಾಧಿಕಾ ನಾರಾಯಣ್ ಹೇಳಿದ್ದು ಈಗಷ್ಟೇ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ವೀರ ಕಂಬಳ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು ಶೂಟಿಂಗ್ ಪೂರ್ಣಗೊಳಿಸಿದ್ದಾರೆ.


ಈ ಚಿತ್ರದಲ್ಲಿ ಪೋಲೀಸ್ ಕಮಿಷನರ್ ಪಾತ್ರದಲ್ಲಿ ನಟಿಸಿದ್ದಾರೆ. ಸಮವಸ್ತ್ರ ಧರಿಸಿದಾಗ ಅವರ ವ್ಯಕ್ತಿತ್ವ ಹೇಗೆ ಬದಲಾಗಿದೆ ಎಂಬುದನ್ನು ಹೇಳಿದ್ದಾರೆ. “ಅದರ ಬಗ್ಗೆ ಎಷ್ಟು ಅಂತರ್ಗತವಾಗೀ ಘನತೆ ಹಾಗೂ ಶಿಸ್ತು ಇದೆಯೆಂದರೆ ಅವರ ದೇಹ ಭಾಷೆ ಸ್ವಾಭಾವಿಕವಾಗಿ ಆಗುತ್ತದೆ. ಈ ಬದಲಾವಣೆ ನನ್ನಲ್ಲಿ ನಾನು ಗುರುತಿಸಿದ್ದೇನೆ. ಈ ಪಾತ್ರ ಮಾಡಿದ ನಂತರ ನನಗೆ ಮಹಿಳಾ ಪೋಲೀಸರ ಮೇಲೆ ಗೌರವ ಹೆಚ್ಚಿದೆ. ಅವರನ್ನು ಕಂಡಾಗ ಒಮ್ಮೆ ನಿಂತು ಕೆಲಕ್ಷಣ ಅವರನ್ನು ದಿಟ್ಟಿಸುತ್ತೇನೆ ಏಕೆಂದರೆ ಅವರ ಪರಿಶ್ರಮದ ಬಗ್ಗೆ ತಿಳಿದಿದೆ. ಕಲಾವಿದರಾಗಿ ನಾವು ಸಮವಸ್ತ್ರ ಧರಿಸಿ ಪಾತ್ರ ಮಾಡುತ್ತೇವೆ. ಆಫೀಸರ್ ಗಳಿಗೆ ಹಾಗಲ್ಲ. ಹೀಗಾಗಿ ಅವರ ಬಗ್ಗೆ ಗೌರವ ಮೂಡಿದೆ”ಎಂದಿದ್ದಾರೆ.




ಅವರ ಊರಿನಲ್ಲಿ ಶೂಟಿಂಗ್ ಮಾಡಲಾಗಿದ್ದು “ನಾನು ಉಡುಪಿಯವಳು ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಕರಾವಳಿ ನನಗೆ ಹತ್ತಿರ. ನಾವು ಮಂಗಳೂರಿನಲ್ಲಿ ಶೂಟಿಂಗ್ ಮಾಡಿದ್ದೇವೆ” ಎನ್ನುವ ರಾಧಿಕಾ ಸ್ವಲ್ಪ ತುಳು ಭಾಷೆ ಕೂಡಾ ಮಾತನಾಡುತ್ತಾರೆ.


“ನಾವು ಮನೆಯಲ್ಲಿ ತುಳು ಕೂಡಾ ಮಾತನಾಡುತ್ತೇವೆ. ನನ್ನ ಭಾಷೆ ಈ ಸಿನಿಮಾದಲ್ಲಿ ಮಾತನಾಡಿದ್ದಕ್ಕೆ ಖುಷಿ ಇದೆ” ಎಂದಿದ್ದಾರೆ ರಾಧಿಕಾ ನಾರಾಯಣ್.








