- April 20, 2022
ಟ್ರಾವೆಲಿಂಗ್ ಮೂಡ್ ನಲ್ಲಿದ್ದಾರೆ ರಾಧಾ ಮಿಸ್


ನಟಿ ಶ್ವೇತಾ ಆರ್ ಪ್ರಸಾದ್ ಈಗ ಪ್ರವಾಸದ ಮೂಡ್ ನಲ್ಲಿ ಇದ್ದಾರೆ. ಉತ್ತರ ಭಾರತದ ಅರುಣಾಚಲ ಪ್ರದೇಶ ಹಾಗೂ ಅಸ್ಸಾಂ ಗೆ ತೆರಳಿದ್ದಾರೆ. “ನಾನು ಪ್ಯಾಂಡೆಮಿಕ್ ನಲ್ಲಿ ಈಶಾನ್ಯ ರಾಜ್ಯಗಳಿಗೆ ಭೇಟಿ ನೀಡಲು ಪ್ಲಾನ್ ಮಾಡಿದ್ದೆ. ಇವುಗಳು ಸೌಂದರ್ಯವನ್ನು ಹೊಂದಿವೆ. ಪ್ರವಾಸಿಗರು ಅನೇಕ ಕಾರಣಗಳಿಗಾಗಿ ಈ ಪ್ರದೇಶಗಳಿಗೆ ಬರಲು ಉತ್ಸುಕತೆ ತೋರುತ್ತಿಲ್ಲ. ಹೀಗಾಗಿ ಇವುಗಳಿಗೆ ಧಕ್ಕೆಯಾಗಿಲ್ಲ. ಈ ಟ್ರೆಂಡ್ ಬದಲಾಗುತ್ತದೆ ಎಂಬ ಭರವಸೆ ನನಗಿದೆ. ಜನ ಈ ಪ್ರದೇಶಗಳ ಬಗ್ಗೆ ತಿಳಿಯುತ್ತಾರೆ. ಇವುಗಳು ತನ್ನದೇ ಆದ ಲಕ್ಷಣಗಳನ್ನು ಹೊಂದಿವೆ” ಎಂದಿದ್ದಾರೆ.


ಶ್ವೇತಾ ಭಾರತ ಚೀನಾ ಗಡಿ ಬುಮ್ಲಾ ಪಾಸ್ ಗೆ ಭೇಟಿ ನೀಡಿದ್ದಾರೆ. “ಬುಮ್ಲಾ ಪಾಸ್ ಇಡೀ ವರ್ಷ ಹಿಮಪಾತದಿಂದ ಕೂಡಿರುತ್ತದೆ. ಇದು ಭಾರತ ಚೀನಾ ಗಡಿಯ ಕೊನೆಯ ಪಾಯಿಂಟ್ ಆಗಿದೆ. ನನಗೆ ಫೋಟೋ ತೆಗೆಯಲು ಅವಕಾಶ ದೊರಕಿದೆ. ನಾನು ಅದೃಷ್ಟವಂತೆ. ಎಲ್ಲರಿಗೂ ಇದು ಸಾಧ್ಯವಾಗುವುದಿಲ್ಲ. ಸೈನಿಕರನ್ನು ಮಾತನಾಡಿಸಿದೆ. ಅವರು ಉತ್ತಮ ವ್ಯಕ್ತಿಗಳು ನನಗೆ ಟೀ ಹಾಗೂ ಸಮೋಸಾ ಕೊಟ್ಟರು. ಅವರು ಜನರ ಬಳಿ ಮಾತನಾಡಲು ಇಷ್ಟ ಪಡುತ್ತಾರೆ. ಅವರು ತಮ್ಮ ಕುಟುಂಬದಿಂದ ದೂರವಿರುತ್ತಾರೆ. ನನ್ನ ತಮ್ಮ ಮಿಲಿಟರಿಯಲ್ಲೀ ಕೆಲಸ ಮಾಡಿದ್ದಾನೆ. ಹೀಗಾಗಿ ಅವನು ನನಗೆ ಹಲವು ಪ್ರದೇಶಗಳಿಗೆ ಭೇಟಿ ಮಾಡಲು ಸಹಾಯ ಮಾಡಿದ್ದಾನೆ” ಎಂದಿದ್ದಾರೆ.


ತೆಂಗಾ ವ್ಯಾಲಿ ಹಾಗೂ ತೆವಂಗ್ ಗೂ ಭೇಟಿ ನೀಡಿರುವ ಶ್ವೇತಾ “ಅರುಣಾಚಲ ಪ್ರದೇಶದಲ್ಲಿ ಹವಾಮಾನ ಹೇಗಂತ ಹೇಳಲಾಗದು. ಒಮ್ಮೆ ಮಳೆ, ಬಿಸಿಲ, ಹಿಮಪಾತ ಯಾವಾಗ ಎಂದು ತಿಳಿಯದು ಹೀಗಾಗಿ ಪ್ರವಾಸಿಗರು ಯಾವುದೇ ಸ್ಥಿತಿಗೆ ಆದರೂ ತಯಾರಾಗಿರಬೇಕು. ಅಲ್ಲಿ ಜನರು ಹೇಗೆ ಬದುಕುತ್ತಾರೆ ಎಂದು ನನಗೆ ಆಶ್ಚರ್ಯವಾಯಿತು. ಏಕೆಂದರೆ ಅಲ್ಲಿ ರಸ್ತೆಯಂತಹ ಮೂಲಭೂತ ಸೌಕರ್ಯಗಳಿಲ್ಲ. ಭೂಕುಸಿತದಿಂದಾಗಿ ರಸ್ತೆ ಹಾಳಾಗಿದೆ.” ಎಂದಿದ್ದಾರೆ.


ಸದ್ಯ ಮೋಮೋಸ್ ತುಕ್ಪಾ ದಂತಹ ಸ್ಥಳೀಯ ಆಹಾರ ಸವಿಯುತ್ತಿರುವ ಶ್ವೇತಾ “ಮೋಮೋಸ್ ಎಲ್ಲಾ ಕಡೆ ಸಿಗುತ್ತದೆಯಾದರೂ ಇಲ್ಲಿನ ಮೋಮೋಸ್ ತುಂಬಾ ರುಚಿಯಾಗಿದೆ. ಬೆಂಗಳೂರಿನಲ್ಲಿ ಇಂದು ಸಿಗುವುದಿಲ್ಲ.” ಎಂದಿದ್ದಾರೆ.








