• May 11, 2022

ಬುಲ್ ಬುಲ್ ಬೆಡಗಿ ನಟನಾ ಜರ್ನಿ

ಬುಲ್ ಬುಲ್ ಬೆಡಗಿ ನಟನಾ ಜರ್ನಿ

ಚಂದನವನದ ಡಿಂಪಲ್ ಕ್ವೀನ್ ರಚಿತ ರಾಮ್ ಮೈಲಿಗಲ್ಲು ಸಾಧಿಸಿದ ಸಂಭ್ರಮದಲ್ಲಿ ಇದ್ದಾರೆ. ಗುಳಿ ಕೆನ್ನೆಯ ಬೆಡಗಿ ಚಿತ್ರರಂಗದಲ್ಲಿ ಒಂಭತ್ತು ವರ್ಷಗಳನ್ನು ಪೂರೈಸಿದ್ದಾರೆ. ಈ ಸಂಭ್ರಮದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ರಚಿತಾ ರಾಮ್.

ತನ್ನ ಮೊದಲ ಚಿತ್ರ ಬುಲ್ ಬುಲ್ ನ ಪೋಸ್ಟರ್ ನ್ನು ಹಂಚಿಕೊಳ್ಳುವ ಮೂಲಕ ತನ್ನ ಸಂತಸವನ್ನು ವ್ಯಕ್ತಪಡಿಸಿದ್ದಾರೆ ರಚಿತಾ ರಾಮ್. ಬುಲ್ ಬುಲ್ ನಲ್ಲಿ ನಾಯಕಿ ಕಾವೇರಿಯಾಗಿ ನಟಿಸಿದ್ದ ರಚಿತಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ತೆರೆ ಹಂಚಿಕೊಂಡಿದ್ದರು.

“ಸುದೀರ್ಘ ಪಯಣದಲ್ಲಿ ಮೊದಲ ಹೆಜ್ಜೆ. ಒಂಭತ್ತು ವರ್ಷಕ್ಕೆ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿ ಅಭಿಮಾನಕ್ಕೆ ನಾನು ಹಾಗೂ ನನ್ನ ಕುಟುಂಬ ಚಿರ ಋಣಿಯಾಗಿರುತ್ತೇವೆ. ನಿಮ್ಮ ಆಶೀರ್ವಾದ ಹೀಗೆ ಇರಲಿ” ಎಂದು ಬರೆದುಕೊಂಡಿದ್ದಾರೆ.

ಬುಲ್ ಬುಲ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದ ರಚಿತಾ ನಂತರ ಅಂಬರೀಶ , ದಿಲ್ ರಂಗೀಲಾ , ಅಯೋಗ್ಯ ಮುಂತಾದ ಚಿತ್ರಗಳಲ್ಲಿ ನಟಿಸಿ ಕನ್ನಡದ ಬಲು ಬೇಡಿಕೆಯ ನಟಿಯಾಗಿದ್ದು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ.

ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿರುವ ರಚಿತಾ ಏಕ್ ಲವ್ ಯಾ ಹಾಗೂ ಜೇಮ್ಸ್ ಚಿತ್ರಗಳಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮಜಾಭಾರತ ಕಾರ್ಯಕ್ರಮದ ತೀರ್ಪುಗಾರ್ತಿಯಾಗಿ ಕಿರುತೆರೆಯಲ್ಲಿ ಕಮಾಲ್ ಮಾಡಿದ್ದ ರಚಿತಾ ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ರಾಮಾ ಜ್ಯೂನಿಯರ್ಸ್ ಸೀಸನ್ 4 ರ ತೀರ್ಪುಗಾರ್ತಿಯಾಗಿ ಮನ ಸೆಳೆಯುತ್ತಿದ್ದಾರೆ.