• December 17, 2021

ಪುಷ್ಪ- ಒನ್‌ಮ್ಯಾನ್‌ ಶೋ ಕಂಪ್ಲೀಟ್ ಅಲ್ಲು ಅರ್ಜುನ್ ಸಿನಿಮಾ

ಪುಷ್ಪ- ಒನ್‌ಮ್ಯಾನ್‌ ಶೋ ಕಂಪ್ಲೀಟ್ ಅಲ್ಲು ಅರ್ಜುನ್ ಸಿನಿಮಾ

ಚಿತ್ರ- ಪುಷ್ಪ
ನಿರ್ದೇಶಕ: ಸುಕುಮಾರ್
ತಾರಾಗಣ: ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ

ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಪಾರ್ಟ್ ೧ಸಿನಿಮಾ‌ ಬಿಡುಗಡೆ ಆಗಿದ್ದು ಭರ್ಜರಿ ಓಪನಿಂಗ್ ಪಡೆದುಕೊಂಡಿದೆ…ಸ್ಟೋರಿ. ಕಾಮಿಡಿ. ರೊಮ್ಯಾಂಟಿಕ್ ‌ಎನ್ನಿಸೋ ಎಲ್ಲಾ ಅಂಶಗಳು ಸಿನಿಮಾದಲ್ಲಿದ್ದು ಪುಷ್ಪ ಕಂಪ್ಲೀಟ್ ಮಾಸ್ ಹಾಗೂ ಎಂಟರ್ಟೇನ್ಮೆಂಟ್ ಸಿನಿಮಾ ಅನ್ನೋದರಲ್ಕಿ ಎರಡು ಮಾತಿಲ್ಲ….

ಚಿತ್ರದ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಹಾಗೂ ಸಂಗೀತಕ್ಕೆ ಫುಲ್ ಮಾರ್ಕ್ ಪ್ರೇಕ್ಷಕರಿಂದ ಸಿಕ್ಕಿದೆ…ಇನ್ಮು‌ಚಿತ್ರದಲ್ಲಿ ಹೈ ವೋಲ್ಟೇಜ್ ಹಾಗೂ ಪ್ಲಸ್ ಪಾಯಿಂಟ್ ಅಂದ್ರೆ ಅಲ್ಲು ಅರ್ಜುನ್ ಅಭಿನಯ‌ ಹಾಗೂ ಡೈಲಾಗ್ ಡೆಲಿವರಿ…ಚಿತ್ರಕ್ಕಾಗಿ ಅಲ್ಲು ಅರ್ಜುನ್ ಗೆಟಪ್‌ ಬದಲಾಯಿಸಿಕೊಂಡಿದ್ದು ಸಿನಿಮಾಗೆ ವರ್ಕ್ ಔಟ್ ಆಗಿದೆ..

ಇನ್ನು‌ ಅಲ್ಲು ಅರ್ಜುನ್ ಕೆಲ ಸೀನ್ ಗಳಲ್ಲಿ ವಾವ್ಹ್ ಅನ್ನಿಸುವಂತೆ ಆಕ್ಟ್ ಮಾಡಿದ್ದು , ಮಾಸ್ ಸೀನ್ ಗಳು ಅವ್ರ ಅಭಿಮಾನಿಗಳಿಗೆ ಹಬ್ಬದ ಸಂಭ್ರಮವನ್ನ ನೀಡಲಿದೆ…ಇನ್ನು ಸ್ಟೈಲಿಷ್ ಸ್ಟಾರ್ ಅಭಿನಯ ಮತ್ತು ಆಕ್ಷನ್ ಗೆ ತಕ್ಕಂತೆ ಕ್ಯಾಮೆರಾ ವರ್ಕ್ ಮ್ಯಾಚ್ ಆಗಿದೆ…

ರಶ್ಮಿಕಾ ತಮ್ಮ ಪಾತ್ರವನ್ನ ಅಚ್ಚುಕಟ್ಟಾಗಿ ನಿರ್ವಹಿಸಿದ್ದು ಮೊದಲ‌ಬಾರಿಗೆ ಡಿ ಗ್ಲಾಮರ್ ಪಾತ್ರದಲ್ಲಿ ರಶ್ಮಕಾ ಫುಲ್ ಮಾರ್ಕ್ ಪಡೆದುಕೊಂಡಿದ್ದಾರೆ….ಶ್ರೀವಲ್ಲಿ ಹಾಗೂ ಪುಷ್ಪರಾಜ್ ಸೀನ್ ಗಳು ನೋಡುಗರನ್ನ ಖುಷಿ‌ಪಡಸುತ್ತದೆ….

ಇನ್ನ ಸುಕುಮಾರ್ ಆಕ್ಷನ್ ಸೀನ್ ಗಳನ್ನ ಸಖತ್ತಾಗಿ‌ ಪ್ಲಾನ್‌ ಮಾಡದ್ದು‌ ಅಲ್ಲು ಅರ್ಜುನ್ ಅವ್ರ ಪ್ರತಿ‌ ಸಿನಿಮಾದಲ್ಲಿ ಫೈಟ್ಸ್ ಹೈಲೆಟ್ ಆಗುವಂತೆಯೇ ಇಲ್ಲಿಯೂ ವರ್ಕ್ ಔಟ್ ಆಗಿದೆ…. ಅಲ್ಲು ಅರ್ಜುನ್ ಮತ್ತೊಮ್ಮೆ ಈ ಚಿತ್ರದಲ್ಲಿ ತಮ್ಮ ಆಕ್ಷನ್ ಸೀಕ್ವೆನ್ಸ್‌, ಸಖತ್ ಡೈಲಾಗ್ ಹಾಗೂ ಅಭಿನಯದಿಂದ ಪ್ರೇಕ್ಷಕರನ್ನ ಇಂಪ್ರೆಸ್ ಮಾಡಿದ್ದಾರೆ … ಜಾಲಿ ರೆಡ್ಡಿ ಪಾತ್ರದಲ್ಲಿ ಧನಂಜಯ ‌ಮಿಂಚಿದ್ದು ಪಾತ್ರಕ್ಕೆ ತಕ್ಕಂತೆ ಅಭಿನಯಿಸಿ ಸೈ ಎನ್ನಿಸಿಕೊಂಡಿದ್ದಾರೆ

ಕಥೆ ಮತ್ತು ನಿರೂಪಣೆಯು ಸ್ವಲ್ಪ ವೇಗ ಎನ್ನಿಸಿದರು…ನೋಡುಗರಿಗೆ ಮಜಾ‌‌ಕೊಡುತ್ತೆ…ಸಿನಿಮಾ‌ ಸೆಕೆಂಡ್ ಹಾಫ್ ರಕ್ತಚಂದನ ಕಳ್ಳಸಾಗಣೆಯ ಬಗ್ಗೆ ತೋರಿಸಲಾಗಿದೆ…
ಕಳ್ಳಸಾಗಾಣಿಕೆದಾರರು ಪೊಲೀಸರನ್ನು ಹೇಗೆ ಕಣ್ಣು ತಪ್ಪಿಸುತ್ತಾರೆ ,ವಂಚಿಸುತ್ತಾರೆ ಎಂಬುದನ್ನ ಇನ್ನು ಚೆನ್ನಾಗಿ‌ ತೋರಿಸಬಹುದಾಗಿತ್ತು ಎಂಬುದು ಪ್ರೇಕ್ಷಕರ ಅಭಿಪ್ರಾಯ…

ಎಂದಿನಂತೆ ದೇವಿ ಶ್ರೀ ಪ್ರಸಾದ್ ಹಾಗೂ ಅಲ್ಲು ಅರ್ಜುನ್ ಕಾಂಬಿನೇಷನ್ ಸಖತ್ತಾಗಿ ವರ್ಕ್ ಆಗಿದೆ..ಎಲ್ಲಾ ಹಾಡುಗಳು ತೆರೆ ಮೇಲೆ ಅದ್ದೂರಿಯಾಗಿ ಕಾಣಿಸೋದ್ರ ಜೊತೆಗೆ ಕಲರ್ ಫುಲ್ ಆಗಿ ಮೂಡಿ ಬಂದಿದೆ…ಇನ್ಮು ಸಖತ್ ಹೈಪ್ ಕ್ರಿಯೆಟ್ ಮಾಡಿರೋ ಸಮಂತಾ ಸಾಂಗ್ ಗೆ ಪ್ರೇಕ್ಷಕರಿಂದ ಫುಲ್ ಮಾರ್ಕ್ ಸಿಕ್ಕಿದೆ….

ಚಿತ್ರದ ಕ್ಲೈಮ್ಯಾಕ್ಸ್ ಹತ್ತಿರವಾಗ್ತಿದ್ದಂತೆ ಫಹಾದ್ ಫಾಸಿಲ್ ಎಂಟ್ರಿ‌ಯಿಂದ ಸಿನಿಮಾದ ದಿಕ್ಕೆ ಬದಲಾಗುತ್ತೆ…ಫಹಾದ್ ಎಂಟ್ರಿ.ಪಂಚಿಂಗ್ ಕಥೆಯ ಮೇಲಿನ‌ ಕುತೂಹಲವನ್ನ ದುಪ್ಪಟ್ಟು ಮಾಡುತ್ತೆ…ಫಾಹಾದ್ ಎಂಟ್ರಿ ಆದ ನಂತ್ರ ಸಿನಿಮಾ ಕಂಪ್ಲೀಟ್ ಅಲ್ಲು ಅರ್ಜುನ್ ಹಾಗೂ ಫಹಾದ್ ಶೋ ಆಗಿ‌ ಬದಲಾಗುತ್ತೆ…ಒಟ್ಟಾರೆ ಪುಷ್ಪ ಕಂಪ್ಲೀಟ್ ಮಾಸ್ ಪೈಸಾ ವಸೂಲ್ ಸಿನಿಮಾ…