- January 16, 2022
ಎಲ್ಲೆಲ್ಲೂ ಸಂಕ್ರಾಂತಿ ಸಂಭ್ರಮ- ಹಬ್ಬದಲ್ಲೂ ಅಪ್ಪು ನೆನೆದ ಅಭಿಮಾನಿಗಳು


ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ …ಅಭಿಮಾನಿ ದೇವರುಗಳ ಪ್ರೀತಿಯ ಅಪ್ಪು ಎಲ್ಲರಿಂದ ದೂರಾಗಿ ಸಾಕಷ್ಟು ದಿನಗಳು ಕಳೆದ್ವು…ಅಪ್ಪು ಅಗಲಿ ಮೂರು ತಿಂಗಳಾದರು ಕೂಡ ಪುನೀತ್ ರ ನೆನಪು ಮಾತ್ರ ಅಭಿಮಾನಿಗಳಿಗೆ ಕಾಡುತ್ತಿದೆ…


ನಿನ್ನೆಯಷ್ಟೇ ನಾಡಿನಾದ್ಯಂತ ಸಂಕ್ರಾಂತಿ ಸಂಭ್ರಮವನ್ನ ಆಚರಣೆ ಮಾಡಲಾಗಿದೆ…ಹಳ್ಳಿ ಹಳ್ಳಿಯಲ್ಲಿಯೂ ಗೋಮಾತೆಗೆ ಪೂಜೆ ಸಲ್ಲಿಸಿ ಸಂಕ್ರಾಂತಿ ಸಂಭ್ರಮವನ್ನ ಹೆಚ್ಚಿಸಿದ್ದಾರೆ…ಅದರೊಟ್ಟಿಗೆ ಅಭಿಮಾನಿಗಳು ಹಸುಗಳ ಕೊಂಬಿಗೆ ಪುನೀತ್ ರಾಜ್ ಕುಮಾರ್ ಫೋಟೋ ಕಟ್ಟಿ ಕಿಚ್ಚಾಯಿಸಿದ್ದಾರೆ…ಕೇವಲ ಒಂದೆರೆಡು ಕಡೆಯಲ್ಲಿ ಅಲ್ಲದೆ ರಾಜ್ಯಾದ ನಾನ ಕಡೆ ಇದೇ ರೀತಿಯಲ್ಲಿ ಸಂಕ್ರಾಂತಿ ಸಂಭ್ರಮವನ್ನ ಆಚರಣೆ ಮಾಡಿದ್ದಾರೆ…




