• June 26, 2022

ತೆರೆಕಡೆಗೆ ಹೊರಟಿದೆ ಪೃಥ್ವಿ ಅಂಬರ್ ಹೊಸ ಸಿನಿಮಾ.

ತೆರೆಕಡೆಗೆ ಹೊರಟಿದೆ ಪೃಥ್ವಿ ಅಂಬರ್ ಹೊಸ ಸಿನಿಮಾ.

‘ದಿಯಾ’ ಸಿನಿಮಾದ ಮೂಲಕ ಹಿರಿತೆರೆಯಲ್ಲಿ ಹವಾ ಎಬ್ಬಿಸಿದ ನಟ ಪೃಥ್ವಿ ಅಂಬರ್. ತಮ್ಮ ಅದ್ಭುತ ನಟನೆಯ ಮೂಲಕ ಪ್ರೇಕ್ಷಕರೆಲ್ಲರ ಮನಸೆಳೆದಿದ್ದರು. ಇದೀಗ ಚಂದನವನದಲ್ಲಿ ಬ್ಯುಸಿ ಆಗಿರುವ ಯುವ ನಟರುಗಳಲ್ಲಿ ಒಬ್ಬರಾಗಿದ್ದಾರೆ. ‘ಬೈರಾಗಿ’ ಸಿನಿಮಾದ ಮೂಲಕ ‘ಕರುನಾಡ ಚಕ್ರವರ್ತಿ’ ಶಿವರಾಜಕುಮಾರ್ ಅವರ ಜೊತೆಗೂ ಪೃಥ್ವಿ ಅಂಬರ್ ತೆರೆ ಹಂಚಿಕೊಂಡಿದ್ದು, ಈ ಚಿತ್ರ ಇದೇ ಜುಲೈ 1ಕ್ಕೆ ಬಿಡುಗಡೆಯಾಗುತ್ತಿದೆ. ಇದರ ಬೆನ್ನಿಗೆ ಪೃಥ್ವಿ ಅಂಬರ್ ನಾಯಕನಾಗಿ ನಟಿಸಿರುವ ಮತ್ತೊಂದು ಸಿನಿಮಾ ತೆರೆಕಾಣುತ್ತಿದೆ. ಅದೇ ಶಶಿಧರ್ ಕೆ ಎಂ ನಿರ್ದೇಶನದ ‘ಶುಗರ್ ಲೆಸ್’.

ಪೃಥ್ವಿ ಅಂಬರ್ ಹಾಗು ಪ್ರಿಯಾಂಕಾ ತಿಮ್ಮೆಶ್ ಜೋಡಿಯಾಗಿ ನಟಿಸಿರುವ ಈ ಸಿನಿಮಾದ ಟ್ರೈಲರ್ ಇಂದು (ಜೂನ್ 26) ಬಿಡುಗಡೆಯಾಗಿದೆ. ‘ಆನಂದ್ ಆಡಿಯೋ’ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿರೋ ಟ್ರೈಲರ್ ವೀಕ್ಷಕರಲ್ಲಿ ನಗು ತರಿಸುವುದರಲ್ಲಿ ಬಹುಪಾಲು ಯಶಸ್ವಿಯಾಗಿದೆ. ಇದೇ ಜುಲೈ 8ಕ್ಕೆ ಸಿನಿಮಾ ಚಿತ್ರಮಂದಿರಗಳಿಗೆ ಹೆಜ್ಜೆ ಇಡುತ್ತಿದೆ. ಪೃಥ್ವಿ ಹಾಗು ಪ್ರಿಯಾಂಕಾ ಅವರ ಜೊತೆಗೆ ಧರ್ಮಣ್ಣ, ದತ್ತಣ್ಣ, ನವೀನ್ ಪಡೀಲ್ ಮುಂತಾದವರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಯುವ ವಯಸ್ಸಿಗೇ ಶುಗರ್ ಕಾಯಿಲೆ ಮೈಗಂಟಿಸಿಕೊಂಡಿರುವ ಯುವಕನೊಬ್ಬನ ಕಥೆ ಹೇಳೋ ಈ ಸಿನಿಮಾಗೆ ಅನೂಪ್ ಸೀಳಿನ್ ಸಂಗೀತವಿದ್ದು, ಚಿತ್ರದ ಸೃಷ್ಟಿಕರ್ತ ಶಶಿಧರ್ ಕೆ ಎಂ ಅವರೇ ನಿರ್ಮಾಣ ಮಾಡಿದ್ದಾರೆ. ಜುಲೈ 8ಕ್ಕೆ ಪ್ರಪಂಚದಾದ್ಯಂತ ಈ ಸಿನಿಮಾ ಬಿಡುಗಡೆಯಾಗುತ್ತಿದೆ.