• May 6, 2022

ಹೊಸ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿರುವ ಪ್ರಿಯಾಮಣಿ

ಹೊಸ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿರುವ ಪ್ರಿಯಾಮಣಿ

ದಕ್ಷಿಣ ಭಾರತದ ಖ್ಯಾತ ನಟಿ ಪ್ರಿಯಾಮಣಿ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. “ನಾನು ಸದ್ಯ ಇನ್ನೂ ಹೆಸರಿಡದ ತೆಲುಗು ವೆಬ್ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಇದು ಹೆಚ್ಚು ಪಯಣವನ್ನು ಕೇಳುತ್ತದೆ‌. ಹೀಗಾಗಿ ನಾನು ಒಡಿಶಾದಿಂದ ವೆಸ್ಟ್ ಬೆಂಗಾಲ್, ಅಸ್ಸಾಂ, ಗಯಾ, ವಾರಣಾಸಿಗೆ ಹೋಗಿದ್ದೇನೆ. ಕೊನೆಯ ಭಾಗದ ಶೂಟಿಂಗ್ ಜಮ್ಮುವಿನಲ್ಲಿ ನಡೆಯಲಿದೆ. ರಿಯಾಲಿಟಿ ಶೋಗಾಗಿ ಶೂಟಿಂಗ್ ಮಾಡುತ್ತಿದ್ದೇನೆ. ಹಲವು ಹೊಸ ಪ್ರಾಜೆಕ್ಟ್ ಗಳ ಬಗ್ಗೆ ಸದ್ಯದಲ್ಲೇ ಘೋಷಣೆ ಮಾಡಲಾಗುವುದು” ಎಂದಿದ್ದಾರೆ.

ಇದಲ್ಲದೇ ಪ್ರಿಯಾಮಣಿ ಇನ್ನೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ” ಮಿಳು ಸಿನಿಮಾದಲ್ಲಿ ನಟಿಸಲಿರುವ ನಾನು ಜಾಕಿ ಶ್ರಾಫ್ ಹಾಗೂ ಸನ್ನಿ ಲಿಯೋನ್ ಜೊತೆಗೆ ತೆರೆ ಹಂಚಿಕೊಳ್ಳುತ್ತಿದ್ದೇನೆ. ನಿರ್ಮಾಪಕರು ಪ್ಯಾನ್ ಇಂಡಿಯಾ ಸಿನಿಮಾದಂತೆ ಬಿಡುಗಡೆ ಮಾಡುವ ಯೋಚನೆಯಲ್ಲಿದ್ದಾರೆ. ಯಾಕೆಂದರೆ ಇದರಲ್ಲಿ ನಟರು ಭಾಗಿಯಾಗಿದ್ದಾರೆ. ಕಂಟೆಂಟ್ ಕೂಡ ಹಾಗೆಯೇ ಇದೆ “ಎಂದಿದ್ದಾರೆ.

ಮುಂಬೈಯಲ್ಲಿ ಸೌತ್ ಇಂಡಿಯಾ ಸಿನಿಮಾಗಳಿಗೆ ಸಿಗುತ್ತಿರುವ ಪ್ರೀತಿ ಗೌರವಕ್ಕೆ ಉತ್ಸುಕರಾಗಿದ್ದಾರೆ ಪ್ರಿಯಾಮಣಿ. ” ದಕ್ಷಿಣ ಭಾರತದ ಚಿತ್ರಗಳು ಗುರುತಿಸಿಕೊಳ್ಳುತ್ತಿರುವುದಕ್ಕೆ ಕಾತರಳಾಗಿದ್ದೇನೆ. ಒಳ್ಳೆ ಸಿನಿಮಾಗಳು ಯಾವಾಗಲೂ ಬೇರೆ ಭಾಷೆಗಳಲ್ಲಿ ರಿಮೇಕ್ ಆಗುತ್ತಿವೆ. ಅಂತಹ ಕೆಲವು ಸಿನಿಮಾಗಳಲ್ಲಿ ನಾನು ಭಾಗವಾಗಿದ್ದೇನೆ. ಕೊನೆಗೂ ಜನ ಮೂಲ ಚಿತ್ರಗಳನ್ನು ನೋಡಿ ಹೊಗಳುತ್ತಿದ್ದಾರೆ. ನನ್ನ ಹಿಂದಿಯ ಸಹನಟರು ಹಾಗೂ ತಂತ್ರಜ್ಞರು ದಕ್ಷಿಣದ ಸಿನಿಮಾ ಹಾಗೂ ನಟರು ಬೆಳೆಯುತ್ತಿರುವುದರ ಬಗ್ಗೆ ಚರ್ಚೆ ಮಾಡುತ್ತಾರೆ. ದಕ್ಷಿಣದಲ್ಲಿ ಮುಂದೆ ಬಿಡುಗಡೆ ಆಗಲಿರುವ ಚಿತ್ರಗಳ ಕುರಿತು ಮಾತನಾಡುತ್ತಾರೆ. ಆರ್ ಆರ್ ಆರ್ ಹಾಗೂ ಕೆಜಿಎಫ್ ಸಿನಿಮಾಗಳು ಗಡಿಯನ್ನು ದಾಟಿದವು. ಎಲ್ಲರೂ ಇವುಗಳನ್ನು ಇಷ್ಟಪಟ್ಟರು. ಜನರು ದಕ್ಷಿಣ ಭಾರತದ ಸಿನಿ ಇಂಡಸ್ಟ್ರಿಯನ್ನು ನಿಜವಾಗಿ ನೋಡುತ್ತಿರುವುದು ನನಗೆ ಹೆಮ್ಮೆಯ ಕ್ಷಣವಾಗಿದೆ” ಎಂದಿದ್ದಾರೆ.

ಇದು ಕಲಾವಿದರಿಗೆ ಎಲ್ಲಾ ಭಾಷೆಗಳಲ್ಲಿ ನಟಿಸಲು ಉತ್ತಮ ಸಮಯವಾಗಿದೆ ಎಂದಿರುವ ಪ್ರಿಯಾ “ಈಗಿನ ಕೇಳಿಬರುತ್ತಿರುವ ಪದ ಪ್ಯಾನ್ ಇಂಡಿಯಾ ಸಿನಿಮಾ. ನಿರ್ಮಾಪಕರು ಡಬ್ಬಿಂಗ್ ಮಾಡಿ ಎಲ್ಲಾ ಭಾಷೆಗಳಲ್ಲಿ ರಿಲೀಸ್ ಮಾಡುತ್ತಾರೆ. ಮೂಲ ಭಾಷೆ ತಮಿಳು, ತೆಲುಗು ,ಕನ್ನಡ ಆಗಿರಬಹುದು ಆದರೆ ಅವರು ಎಲ್ಲಾ ಭಾಷೆಗಳಲ್ಲಿ ಸಿನಿಮಾ ರಿಲೀಸ್ ಮಾಡಲು ಬಯಸುತ್ತಾರೆ. ಇದರಿಂದ ಹೆಚ್ಚು ಜನರು ಸಿನಿಮಾವನ್ನು ಹೊಗಳುತ್ತಾರೆ. ನಾನು ಇಂತಹ ಚಿತ್ರಗಳಲ್ಲಿ ನಟಿಸಿದ್ದೇನೆ ಚಾರುಲತಾ , ರಾವಣ್, ರಕ್ತಚರಿತ್ರ ಇಂತಹ ಚಿತ್ರಗಳಾಗಿವೆ”ಎಂದಿದ್ದಾರೆ.

ಭಾಷೆಗಳು ಹಾಗೂ ಪ್ರಾದೇಶಿಕತೆಯನ್ನು ಮೀರಿ ಪ್ರಿಯಾಮಣಿ ಫ್ಯಾಮಿಲಿ ಮ್ಯಾನ್ ನಲ್ಲಿ ನಟಿಸಿದ್ದಾರೆ “ದಕ್ಷಿಣ ಹಾಗೂ ಉತ್ತರ ಎಂದು ಬ್ರಾಂಡ್ ಮಾಡಿಕೊಳ್ಳುವುದಕ್ಕಿಂತ ನಾವೆಲ್ಲರೂ ಭಾರತದ ಕಲಾವಿದರು. ಬ್ಯಾರಿಯರ್ ಗಳು ನಿವಾರಣೆಯಾಗುತ್ತಿದೆ. ದಕ್ಷಿಣದ ಕಲಾವಿದರು ತಮ್ಮ ಇಂಡಸ್ಟ್ರಿಯನ್ನು ಮೀರಿ ಮನ್ನಣೆ ಪಡೆಯುತ್ತಿದ್ದಾರೆ. ಇದರರ್ಥ ಒಳ್ಳೆಯ ಕೆಲಸ”ಎಂದಿದ್ದಾರೆ.

ಒಟಿಟಿ ಶೋ ಸಿನಿಮಾ ಹಾಗೂ ರಿಯಾಲಿಟಿ ಶೋಗಳನ್ನು ಹಲವು ವರ್ಷಗಳಿಂದ ಪ್ರಿಯಾ ಮಾಡುತ್ತಿದ್ದಾರೆ.” ನನಗೆ ಒಟಿಟಿ ಪ್ಲಾಟ್ಫಾರ್ಮ್ ಹಾಗೂ ಥಿಯೇಟರ್ ರಿಲೀಸ್ ಎರಡರಲ್ಲಿಯೂ ನನಗೆ ಉತ್ತಮ ಅವಕಾಶಗಳು ಸಿಗುತ್ತಿವೆ ಹೀಗಾಗಿ ನಾನು ಲಕ್ಕಿ ಎಂದುಕೊಳ್ಳುತ್ತೇನೆ. ಇದು ಒಳ್ಳೆಯ ಸ್ಕ್ರಿಪ್ಟ್ ಹಾಗೂ ಸಮತೋಲನ ಕಲೆಯನ್ನು ಕಲಿತುಕೊಳ್ಳುವುದರ ಕುರಿತಾಗಿದೆ” ಎಂದಿದ್ದಾರೆ.

ಅಟ್ಲಿ ಹಾಗೂ ಶಾರುಖ್ ಖಾನ್ ನಟನೆಯ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ರೂಮರ್ ಗೆ ಪ್ರತಿಕ್ರಿಯಿಸಿರುವ ಪ್ರಿಯಾ “ಅವಕಾಶ ಕೊಟ್ಟರೆ ಅವರೊಂದಿಗೆ ಕೆಲಸ ಮಾಡಲು ಇಷ್ಟಪಡುತ್ತೇನೆ”ಎಂದಿದ್ದಾರೆ. ಈ ಹಿಂದೆ ಚೆನ್ನೈ ಎಕ್ಸ್ ಪ್ರೆಸ್ ಚಿತ್ರದಲ್ಲಿ ಐಟಂ ಸಾಂಗ್ ಗೆ ಹೆಜ್ಜೆ ಹಾಕಿದ್ದರು.