• February 9, 2022

ಸರಿಗಮಪ ವೇದಿಕೆಯಲ್ಲಿ ಪ್ರೇಮ್ ರಕ್ಷಿತಾ ಮ್ಯಾಜಿಕ್

ಸರಿಗಮಪ ವೇದಿಕೆಯಲ್ಲಿ ಪ್ರೇಮ್ ರಕ್ಷಿತಾ ಮ್ಯಾಜಿಕ್

ನಿರ್ದೇಶಕ ಪ್ರೇಮ್ ಡೈರೆಕ್ಟ್ ಮಾಡಿರುವ ಏಕ್ ಲವ್ ಯಾ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ …ಈಗಾಗಲೆ ಸಿನಿಮಾ ತಂಡ ಚಿತ್ರದ ಪ್ರಚಾರ ಕಾರ್ಯ ಆರಂಭ ಮಾಡಿದ್ದು ..ಜೀ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಕಾರ್ಯಕ್ರಮದಲ್ಲಿ ಏಕಲವ್ಯ ಚಿತ್ರತಂಡ ಭಾಗಿಯಾಗಿದೆ…

ವಿಶೇಷ ಅಂದರೆ ಸರಿಗಮಪ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ರಕ್ಷಿತಾ ಹಾಗೂ ಪ್ರೇಮ್ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ …ಏಕಲವ್ಯ ಸಿನಿಮಾ ಇದೇ ತಿಂಗಳ ಇಪ್ಪತ್ತ ನಾಲ್ಕರಂದು ಬಿಡುಗಡೆಯಾಗುತ್ತಿದ್ದು ಚಿತ್ರದಲ್ಲಿ ರಾಣಾ ನಾಯಕನಾಗಿ ಅಭಿನಯಿಸಿದ್ದಾರೆ…ಈ ಮೂಲ ರಾಣಾ ಸ್ಯಾಂಡಲ್ ವುಡ್ ಅಂಗಳಕ್ಕೆ ಕಾಲಿಡುತ್ತಿದ್ದಾರೆ ..

ಈಗಾಗಲೇ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿದ್ದು, ಚಿತ್ರತಂಡ ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ಕೊಟ್ಟು ಸಿನಿಮಾದ ಪ್ರಚಾರ ಕಾರ್ಯ ಮಾಡಿ ಮುಗಿಸಿದೆ… ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ನಟಿ ರಚಿತಾ ರಾಮ್ ಅಭಿನಯ ಮಾಡಿದ್ದಾರೆ…