• April 21, 2022

ಹೃತಿಕ್ ರೋಷನ್ ಗೆ ಧನ್ಯವಾದ ಹೇಳಿದ ಪ್ರೀತಿ ಝಿಂಟಾ.. ಕಾರಣ ಏನು ಗೊತ್ತಾ?

ಹೃತಿಕ್ ರೋಷನ್ ಗೆ ಧನ್ಯವಾದ ಹೇಳಿದ ಪ್ರೀತಿ ಝಿಂಟಾ.. ಕಾರಣ ಏನು ಗೊತ್ತಾ?

ಸೋಶಿಯಲ್ ಮೀಡಿಯಾದಲ್ಲಿ ಕೊಂಚ ಆ್ಯಕ್ಟೀವ್ ಆಗಿರುವ ಪ್ರೀತಿ ಝಿಂಟಾ
ತನ್ನ ಉತ್ತಮ ಸ್ನೇಹಿತ ಹೃತಿಕ್ ರೋಷನ್ ಜೊತೆಗಿನ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ಪ್ರೀತಿ ಝಿಂಟಾ ಫೋಟೋ ಜೊತೆಗೆ ಹೃತಿಕ್ ರೋಷನ್ ಮಕ್ಕಳಿಗೆ ಹಾಗೂ ಅವರಿಗೆ ಮಾಡಿರುವ ಸಹಾಯವನ್ನು ಹಂಚಿಕೊಂಡಿದ್ದಾರೆ. ಮದುವೆಯಾಗಿ ವಿದೇಶದಲ್ಲಿ ಪತಿ ಮಕ್ಕಳೊಡನೆ ವಿದೇಶದಲ್ಲಿ ನೆಲೆಸಿರುವ ಪ್ರೀತಿ ತನ್ನ ಮಕ್ಕಳೊಡನೇ ಮೊದಲ ಬಾರಿಗೆ ಭಾರತಕ್ಕೆ ಬರುತ್ತಿದ್ದಾರೆ.

ಅವರ ಪೋಸ್ಟ್ ನಲ್ಲಿ ಹೃತಿಕ್ ರಂತಹ ನಿಜವಾದ ಸ್ನೇಹಿತರು ಹೃದಯದಲ್ಲಿ ಹೇಗೆ ಸ್ಥಾನ ಗಳಿಸುತ್ತಾರೆ ಎಂಬುದನ್ನು ಬಹಿರಂಗ ಪಡಿಸಿದ್ದಾರೆ. ” ಜೀವನದಲ್ಲಿ ಹಲವು ಜನರು ಹೋಗುತ್ತಾರೆ ಬರುತ್ತಾರೆ. ಆದರೆ ನಿಜವಾದ ಸ್ನೇಹಿತರು ಮಾತ್ರ ನಿಮ್ಮ ಹೃದಯದಲ್ಲಿ ಅಚ್ಚೊತ್ತುತ್ತಾರೆ‌. ಈ ಲಾಂಗ್ ಫ್ಲೈಟ್ ನಲ್ಲಿ ಜೈ ಹಾಗೂ ಗಿಯಾ ಗೆ ಸಹಾಯ ಮಾಡಿರುವುದಕ್ಕೆ ಹೃತಿಕ್ ರೋಷನ್ ನಿಮಗೆ ಧನ್ಯವಾದಗಳು. ಈಗ ನಾನು ಏಕೆ ನೀವು ಉತ್ತಮ ತಂದೆ ಆಗಿದ್ದೀರಿ ಎಂಬುದನ್ನು ನೋಡುತ್ತಿರುವೆ. ನಿಮ್ಮ ಬಗ್ಗೆ ಹೆಮ್ಮೆ ಇದೆ” ಎಂದು ಬರೆದುಕೊಂಡಿದ್ದಾರೆ.

ಈ ಪೋಸ್ಟ್ ಗೆ ನೆಟ್ಟಿಗರು ಹಲವು ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಜೀನ್ ಗುಡ್ ಇನಫ್ ಹಾಗೂ ಪ್ರೀತಿ ಝಿಂಟಾ 2021ರಲ್ಲಿ ಅವಳಿ ಮಕ್ಕಳನ್ನು ಸರೋಗೆಸಿ ಮೂಲಕ ಪಡೆದುಕೊಂಡಿದ್ದರು.