• July 2, 2022

ಹುಟ್ಟುಹಬ್ಬ ಆಚರಣೆ ಇಲ್ಲ ಎಂದ ಡೈನಾಮಿಕ್ ಪ್ರಿನ್ಸ್… ಯಾಕೆ ಗೊತ್ತಾ?

ಹುಟ್ಟುಹಬ್ಬ ಆಚರಣೆ ಇಲ್ಲ ಎಂದ ಡೈನಾಮಿಕ್ ಪ್ರಿನ್ಸ್… ಯಾಕೆ ಗೊತ್ತಾ?

ಡೈನಾಮಿಕ್ ಪ್ರಿನ್ಸ್ ಆಗಿ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿರುವ ಪ್ರಜ್ವಲ್ ದೇವರಾಜ್ ವಿಭಿನ್ನ ಪಾತ್ರಗಳ ಮೂಲಕ ಸಿನಿ ಪ್ರಿಯರನ್ನು ರಂಜಿಸುತ್ತಿದ್ದಾರೆ. ಇದೇ ಜುಲೈ 4 ರಂದು ಪ್ರಜ್ವಲ್ ದೇವರಾಜ್ ಅವರ ಹುಟ್ಟುಹಬ್ಬವಿದ್ದು ಈ ಬಾರಿ ಅವರು ಅದನ್ನು ಆಚರಿಸುತ್ತಿಲ್ಲ. ಅದಕ್ಕೆ ಕಾರಣ ಅಭಿಮಾನಿಯ ಮೇಲೆ ಪ್ರಜ್ವಲ್ ಅವರಿಗಿರುವ ಪ್ರೀತಿ.

ಕಳೆದ ವರ್ಷ ಕೊರೊನಾ ಕಾರಣದಿಂದಾಗಿ ಪ್ರಜ್ವಲ್ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. ಆದರೆ ಈ ಬಾರಿಯಾದರೂ ಅವರು ತಮ್ಮ ಹುಟ್ಟುಹಬ್ಬ ಆಚರಿಸುತ್ತಾರೆ ಎಂಬ ಅಭಿಮಾನಿಗಳಿಗೆ ಇದೀಗ ನಿರಾಸೆ ಆಗಿದೆ. ಯಾಕೆಂದರೆ ಡೈನಾಮಿಕ್ ಪ್ರಿನ್ಸ್ ಈ ಬಾರಿಯೂ ಕೂಡಾ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ.

ಪ್ರಜ್ವಲ್ ದೇವರಾಜ್ ಅವರ ಅಪ್ಪಟ ಅಭಿಮಾನಿ ಸತೀಶ್ ಎಂಬುವವರು ನಿಧನರಾಗಿದ್ದು ಆ ಕಾರಣದಿಂದಾಗಿ ಪ್ರಜ್ವಲ್ ಅವರು ಈ ಬಾರಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದರ ಕುರಿತು ವಿಡಿಯೋ ಹಂಚಿಕೊಂಡಿರುವ ಪ್ರಜ್ವಲ್ ದೇವರಾಜ್ ” ಈ ಸಲವೂ ನಾನು ಹುಟ್ಟುಹಬ್ಬ ಆಚರಿಸುತ್ತಿಲ್ಲ. ವರ್ಷಂಪ್ರತಿ ನನ್ನ ಹುಟ್ಟಿದ ದಿನವನ್ನು ಹಬ್ಬದಂತೆ ನೀವು ಆಚರಣೆ ಮಾಡುತ್ತಿದ್ದೀರಿ. ಮಾತ್ರವಲ್ಲ ನನಗೆ ನೀವು ಸಾಕಷ್ಟು ಪ್ರೀತಿಯನ್ನು ನೀಡಿದ್ದೀರಿ. ಇದೀಗ ಇದೇ ಪ್ರೀತಿ ನನ್ನ ಅಭಿಮಾನಿಗಳಿಗೂ ಸಿಗಬೇಕು. ನನ್ನ ಆಪ್ತ ಅಭಿಮಾನಿ ಸತೀಶ್ ಅವರು ನಿಧನರಾಗಿದ್ದು ಆ ಕಾರಣದಿಂದಾಗಿ ನಾನು ಈ ವರ್ಷ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿಲ್ಲ” ಎಂದು ಹೇಳಿಕೊಂಡಿದ್ದಾರೆ.‌ ಪ್ರಜ್ವಲ್ ದೇವರಾಜ್ ಅವರ ಈ ನಿರ್ಧಾರಕ್ಕೆ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.