• December 6, 2021

ಪದವಿ ಪೂರ್ವ ತಂಡಕ್ಕೆ ಹೊಸ ನಾಯಕನ‌ ಎಂಟ್ರಿ

ಪದವಿ ಪೂರ್ವ ತಂಡಕ್ಕೆ ಹೊಸ ನಾಯಕನ‌ ಎಂಟ್ರಿ

ಯೋಗರಾಜ್ ಸಿನಿಮಾಸ್ ಹಾಗು ರವಿ ಶಾಮನೂರ್ ಫಿಲಂಸ್‌ರವರು ಜಂಟಿಯಾಗಿ ನಿರ್ಮಿಸಿ ಹರಿಪ್ರಸಾದ್ ಜಯಣ್ಣ ನಿರ್ದೇಶಿಸುತ್ತಿರುವ ‘ಪದವಿಪೂರ್ವ’ ಚಿತ್ರತಂಡ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿ ಮಾಡುತ್ತಲೇ ಇದೆ..

ಇತ್ತೀಚೆಗಷ್ಟೇ ಸಿನಿಮಾತಂಡಕ್ಕೆ ನಟಿ ದಿವ್ಯ ಉರುಡುಗ ಸೇರಿಕೊಂಡಿದ್ದರು ಈಗ ಯುವ ನಟ ‘ಪ್ರಭು ಮುಂದ್‌ಕುರ್’ ಅತಿಥಿ ಪಾತದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ…

.
ಉರ್ವಿ’ ‘ಡಬಲ್ ಇಂಜಿನ್’ ‘ರಿಲ್ಯಾಕ್ಸ್ ಸತ್ಯ’ ಚಿತ್ರಗಳಲ್ಲಿ ನಾಯಕನ ಪಾತ್ರ ನಿರ್ವಹಿಸಿ ‘ಮೈಸೂರ್ ಡೈರೀಸ್’ ‘ರಾಂಚಿ’ ಹಾಗೂ ‘ಮರ್ಫಿ’ ಎಂಬ ಸಾಲು ಸಾಲು ಚಿತ್ರಗಳಲ್ಲಿ ಅವಕಾಶ ಗಿಟ್ಟಿಸಿರುವ ಪ್ರಭು ಸದ್ಯ ಪದವಿಪೂರ್ವ ಚಿತ್ರದ ಮೂಲಕ ಭಟ್ಟರ ಶಿಷ್ಯವೃಂದದ ಜೊತೆ ಸೇರಿದ್ದಾರೆ.

ಚಿತ್ರದ ಐದನೇ ಹಂತದ ಚಿತ್ರೀಕರಣ ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ಪ್ರಾರಂಭವಾಗಿ ಎರಡು ದಿನಗಳ ಕಾಲ ಚಿತ್ರೀಕರಣ ನಡೆಸಿದ್ದು, ಅದರ ಮುಂದುವರಿದ ಭಾಗವಾಗಿ ಇದೇ ತಿಂಗಳ 13ಕ್ಕೆ ಮಂಗಳೂರಿನಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಸಕಲ ಸಿದ್ಧತೆ ನಡೆಸಿದೆ….

ಹೊಸಬರ ದಂಡೇ ಇರುವ ಈ ಚಿತ್ರಕ್ಕೆ ಯುವ ಪ್ರತಿಭೆ ಪೃಥ್ವಿ ಶಾಮನೂರು ನಾಯಕನಾದರೆ, ಅಂಜಲಿ ಅನೀಶ್ ಮತ್ತು ಯಶ ಶಿವಕುಮಾರ್ ನಾಯಕಿಯಾಗಿ ಅಭಿನಯಿಸಿದ್ದಾರೆ.