- May 6, 2022
ತೆಲುಗು ಪ್ರೇಕ್ಷಕರು ನನ್ನನ್ನು ಸ್ವೀಕರಿಸಿದ್ದಾರೆ – ಪೂಜಾ ಹೆಗ್ಡೆ


ಸದ್ಯ ಬಾಲಿವುಡ್ ಹಾಗೂ ಸೌತ್ ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ನಟಿ ಪೂಜಾ ಹೆಗ್ಡೆ ತಾವು ಆಯ್ಕೆ ಮಾಡುತ್ತಿರುವ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಪೂಜಾ ಹಿಂದಿ ಸಿನಿಮಾಗಳಲ್ಲಿ ನಟಿಸದೇ ಇರುವುದು ಅವರ ನಿರ್ಧಾರವಾಗಿತ್ತು ಎಂದು ಹೇಳಿದ್ದಾರೆ. ಅವರಿಗಾಗಿ ಆ ಪಾತ್ರಗಳನ್ನು ಮಾಡಲು ಅಥವಾ ಕಥಾಹಂದರಕ್ಕೆ ಸಂಬಂಧಿಸದ ಪಾತ್ರಗಳನ್ನು ಮಾಡಲು ಪೂಜಾ ಬಯಸಲಿಲ್ಲ. ದೊಡ್ಡ ಸ್ಟಾರ್ ನಟರ ಜೊತೆ ನಟಿಸಲು ಆಫರ್ ದೊರೆತರೂ ಆ ಪಾತ್ರಗಳಿಗೆ ಸ್ಕ್ರಿಪ್ಟ್ ನಲ್ಲಿ ಯಾವುದೇ ಸ್ಕೋಪ್ ಇರದ ಕಾರಣ ಅವುಗಳನ್ನು ಪೂಜಾ ಒಪ್ಪಿಕೊಳ್ಳಲಿಲ್ಲವಂತೆ.


ಮೊಹೆಂಜೋದಾರೋ ಚಿತ್ರದ ನಂತರ ಪೂಜಾ ಒಳ್ಳೆಯ ಪಾತ್ರಗಳಿಗಾಗಿ ಕಾದಿದ್ದಾರೆ. ದೊಡ್ಡ ಗ್ಯಾಪ್ ಬಳಿಕ ಹೌಸ್ ಫುಲ್ 4 ಚಿತ್ರದಲ್ಲಿ ನಟಿಸಿದರು. ಈ ಸಿನಿಮಾ ಅವರಿಗೆ ಮೆಟ್ಟಿಲು ಎನ್ನುತ್ತಾರೆ. ಈ ಸಿನಿಮಾ ಅವರಿಗೆ ಸಲ್ಮಾನ್ ಖಾನ್ ಜೊತೆ ಕಭಿ ಈದ್ ಕಭಿ ದಿವಾಲಿ ಹಾಗೂ ರಣವೀರ್ ಸಿಂಗ್ ಜೊತೆಗೆ ಸರ್ಕಸ್ ಸಿನಿಮಾಗಳಲ್ಲಿ ನಟಿಸುವ ಅವಕಾಶ ನೀಡಿತು.






ಸೌತ್ ಸಿನಿ ಕೆರಿಯರ್ ಬಗ್ಗೆ ಮಾತನಾಡಿರುವ ಪೂಜಾ ತೆಲುಗು ಪ್ರೇಕ್ಷಕರು ತನ್ನನ್ನು ತಮ್ಮವರಾಗಿ ಸ್ವೀಕರಿಸಿರುವುದು ತನಗೆ ದೊಡ್ಡ ವರ ಎಂದಿದ್ದಾರೆ ಪೂಜಾ. ದಕ್ಷಿಣ ಭಾರತದ ಚಿತ್ರರಂಗ ಅವರಿಗೆ ಗೌರವ ನೀಡಿದೆ. ಅವರು ಹಿಂದಿಯಲ್ಲಿ ಮಾಡಲು ಬಯಸುವ ಚಿತ್ರಗಳನ್ನು ಆಯ್ಕೆ ಮಾಡಲು ಶಕ್ತಿ ನೀಡಿದೆ.
“ನಿಮಗೆ ಚಲನಚಿತ್ರದ ಹಿನ್ನೆಲೆ ಇಲ್ಲದಿದ್ದರೆ, ಒತ್ತಡವಿಲ್ಲದಿದ್ದರೆ ಬಾಲಿವುಡ್ ನಿಮ್ಮನ್ನು ಕ್ಷಮಿಸುವುದಿಲ್ಲ. ನೀವು ಬಯಸಿದ ಪಾತ್ರ ಸಿಗಲು ಕೊಂಚ ಸಮಯ ತೆಗೆದುಕೊಳ್ಳುತ್ತದೆ” ಎಂದಿದ್ದಾರೆ.






