- July 11, 2022
‘ವಿಕ್ರಾಂತ್ ರೋಣ’ನಿಂದ ಬರುತ್ತಿದೆ ಹೊಸ ಹಾಡು.


ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ವಿಕ್ರಾಂತ್ ರೋಣ’ ತೆರೆಗಪ್ಪಳಿಸೋ ದಿನಕ್ಕೆ ದಿನಗಣನೆ ಆರಂಭವಾಗಿದೆ. ಅನೂಪ್ ಭಂಡಾರಿ ನಿರ್ದೇಶನದ ಈ ಸಿನಿಮಾ ಇದೇ ಜುಲೈ 28ಕ್ಕೆ ಪ್ರಪಂಚದಾದ್ಯಂತ ಬಿಡುಗಡೆ ಕಾಣುತ್ತಿದೆ. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ, ಹಿಂದಿ ಜೊತೆಗೆ ಇಂಗ್ಲೀಷ್ ನಲ್ಲಿ ಕೂಡ 3ಡಿಯಲ್ಲಿ ಬಿಡುಗಡೆಯಗುತ್ತಿರೋ ಈ ಚಿತ್ರದ ಪ್ರಮೋಷನ್ ಕೆಲಸಗಳಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಅದರ ಅಂಗವಾಗಿಯೇ ಹೊಸ ಹಾಡೊಂದನ್ನು ಬಿಡುಗಡೆ ಮಾಡಲು ಹೊರಟಿದ್ದಾರೆ.


ಈಗಾಗಲೇ ಬಿಡುಗಡೆಯಾಗಿರೋ ಸಿನಿಮಾದ ಟ್ರೈಲರ್ ಎಲ್ಲಾ ಭಾಷೆಗಳಲ್ಲೂ ಮಿಲಯನ್ ಗಟ್ಟಲೆ ವೀಕ್ಷಣೆ ಪಡೆದಿವೆ. ಜೊತೆಗೆ ಜಾಕ್ವೀಲಿನ್ ಫೆರ್ನಾಂಡಿಸ್ ಹೆಜ್ಜೆ ಹಾಕಿರುವ ‘ರಾ ರಾ ರಕ್ಕಮ್ಮ’ ಹಾಡು ಕೂಡ ಎಲ್ಲರ ಮನಸೆಳೆದಿದೆ. ಇನ್ನು ಎರಡನೆಯದಾಗಿ ಬಿಡುಗಡೆಯಾದ ‘ರಾಜಕುಮಾರಿ’ ಲಾಲಿ ಹಾಡು ಮಧುರಭಾವವನ್ನ ಎಲ್ಲರಲ್ಲಿ ತುಂಬಿತ್ತು. ಸದ್ಯ ಇದನ್ನ ಮುಂದುವರೆಸಲು ‘ಹೇ ಫಕೀರ’ ಎಂಬ ಹೊಸ ಹಾಡು ಬರುತ್ತಿದೆ. ನಿರೂಪ್ ಭಂಡಾರಿಯವರ ಪಾತ್ರವಾದ ಸಂಜು ಅಕಾ ಸಂಜೀವ್ ಗಂಭೀರನಿಗೆ ಸಂಬಂಧ ಪಟ್ಟ ಈ ಹಾಡು ಪ್ರಾಯಶಃ ‘ವಿಕ್ರಾಂತ್ ರೋಣ’ನ ಲೋಕದ ಆ ನಿಗೂಢ ಊರನ್ನು ಪರಿಚಯಿಸಬಹುದು. ಇದೇ ಜುಲೈ 12ಕ್ಕೆ ‘ಟಿ ಸೀರೀಸ್’ ಹಾಗು ‘ಲಹರಿ ಮ್ಯೂಸಿಕ್’ ಯೂಟ್ಯೂಬ್ ಚಾನೆಲ್ ನಲ್ಲಿ ಸಂಜೆ 5:02ಕ್ಕೆ ಹಾಡು ಬಿಡುಗಡೆಯಾಗಲಿದೆ. ಅಜನೀಶ್ ಲೋಕನಾತ್ ಅವರ ಸಂಗೀತವಿರುವ ಈ ಹಾಡು ಎಲ್ಲರ ಮನಸೆಳೆಯುವ ಬಹುಪಾಲು ಸಾಧ್ಯತೆಯಿದೆ.






