- July 17, 2022
ಕೆಜಿಎಫ್ ಕಿರೀಟಕ್ಕೆ ಮತ್ತೊಂದು ಗರಿ.


‘ಕೆಜಿಎಫ್’, ಈ ಒಂದು ಹೆಸರು ಕನ್ನಡ ಸಿನಿ ಅಭುಮಾನಿಗಳ ಮನದಲ್ಲಿ ರೋಮಾಂಚನ ಮೂಡಿಸಬಲ್ಲದು. ಪ್ರಶಾಂತ್ ನೀಲ್ ಅವರ ನಿರ್ದೇಶನದ ಈ ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ಮುಂಚೂಣಿಯಲ್ಲಿ ನಿಂತಿರುವ ಕನ್ನಡಿಗರ ಹೆಮ್ಮೆಯ ಚಿತ್ರ. ಚಿತ್ರಮಂದಿರಗಳಲ್ಲಿ ಸುಮಾರು 1250ಕೋಟಿ ಗಳಿಕೆ ಕಂಡ ‘ಕೆಜಿಎಫ್ ಚಾಪ್ಟರ್ 2’ ಸಿನಿಮಾ ಹಲವು ಧಾಖಲೆಗಳಿಗೆ ಸಾಕ್ಷಿಯಾಗಿತ್ತು. ಇದೀಗ ಈ ಸಾಲಿಗೆ ಮತ್ತೊಂದು ಹೊಸ ರೆಕಾರ್ಡ್ ಸೇರಿಕೊಂಡಿದೆ.




‘ಕೆಜಿಎಫ್ ಚಾಪ್ಟರ್ 2’ ಸಿನಿಮಾ ತೆರೆಕಂಡು, ಯಶಸ್ವಿ ಪ್ರದರ್ಶನ ಕಂಡು ಸದ್ಯ ಒಟಿಟಿ ಪರದೆ ಮೇಲೆ ಮನೆಮನೆಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಈಗ ಇದರ ಗಳಿಕೆಗಳ ಅನವಾರಣ ಆಗುತ್ತಿದ್ದು, ಈ ಸಂಧರ್ಭ ಹೊಸ ಧಾಖಲೆಯೊಂದು ‘ಕೆಜಿಎಫ್ ಚಾಪ್ಟರ್ 2’ ಚಿತ್ರದ ಮುಡಿಗೇರಿದೆ. ‘ಬುಕ್ ಮೈ ಶೋ’ ಆಪ್ ನಲ್ಲಿ ಅತ್ಯಂತ ಹೆಚ್ಚು ಟಿಕೆಟ್ ಬುಕಿಂಗ್ ಕಂಡಂತಹ ಚಿತ್ರವಾಗಿ ಕೆಜಿಎಫ್ ಚಾಪ್ಟರ್ 2 ಸಿನಿಮಾ ಹೊರಹೊಮ್ಮಿದೆ. ಒಟ್ಟು ಸುಮಾರು 17.1 ಮಿಲಿಯನ್ ಟಿಕೆಟ್ ಗಳನ್ನು ‘ಬುಕ್ ಮೈ ಶೋ’ ಆಪ್ ಮೂಲಕ ಪಡೆದ ಈ ಸಿನಿಮಾ ಇದೀಗ ಈ ಸಾಲಿನ ಪ್ರಥಮ ಸ್ಥಾನದಲ್ಲಿದೆ. ಈ ಹಿಂದೆ ರಾಜಮೌಳಿ ಅವರ ನಿರ್ದೇಶನದ ‘ಬಾಹುಬಲಿ 2’ ಸಿನಿಮಾ ಅಗ್ರಸ್ಥಾನದಲ್ಲಿತ್ತು. ಸದ್ಯ ‘ಕೆಜಿಎಫ್ ಚಾಪ್ಟರ್ 2’ ಬಾಹುಬಲಿಯನ್ನ ಹಿಂದೆ ಹಾಕಿದೆ.




ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರ ಬಿಡುಗಡೆಗೂ ಮುನ್ನ ಭಾರತದಾದ್ಯಂತ ಅತ್ಯಂತ ನಿರೀಕ್ಷಿತ ಸಿನಿಮಾವಾಗಿತ್ತು. ತೆರೆಕಂಡಮೇಲೆ ಜನಸಾಗರವೇ ಹರಿದು ಬಂದು ಚಿತ್ರಮಂದಿರಗಳನ್ನು ತುಂಬಿತ್ತು. ಸದ್ಯ ‘ಕೆಜಿಎಫ್ ಚಾಪ್ಟರ್ 2’ನ ಥಿಯೇಟರ್ ಓಟ ಮುಗಿದಿದ್ದು, ಎಲ್ಲೆಡೆ ಕೆಜಿಎಫ್ ಚಾಪ್ಟರ್ 3’ ಸಿನಿಮಾದ ಸುದ್ದಿ ಓಡಾಡುತ್ತಿದೆ.






